ಕುಂದಾಪುರ:ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಸಂಭ್ರಮ ಹಾಗೂ ಸೀತಾರಾಮ ಕಲ್ಯಾಣೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ಮಂಗಳವಾರ ನಡೆಯಿತು.ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಕುರಿತು ವೇ.ಮೂರ್ತಿ ಚೆನ್ನಕೇಶವ ಗಾಯಿತ್ರಿ ಭಟ್ ಆನಗಳ್ಳಿ ಅವರ ನೇತೃತ್ವದಲ್ಲಿ ಜಾಗದ ಪರಿಶೀಲನೆ ಮಾಡಲಾಯಿತು.ಶ್ರೀರಾಮ ತಾರಕ ಜಪಾ ಹೋಮ ಮಾಡುವುದರ ಕುರಿತು ಹೋಮದ ಕುಂಡವನ್ನು ಅರ್ಚಕರ ಉಪಸ್ಥಿತಿಯಲ್ಲಿ ರಚಿಸಲಾಯಿತು.ಮಹಿಳಾ ಸಮಿತಿ ಯಿಂದ ಸಭೆ ಜರುಗಿತು.
ವೇ.ಮೂರ್ತಿ ಚೆನ್ನಕೇಶವ ಗಾಯಿತ್ರಿ ಭಟ್ ಆನಗಳ್ಳಿ ಅವರು ಧಾರ್ಮಿಕ ಸೂಚನೆಗಳನ್ನು ವಿವರಿಸಿ ಮಾತನಾಡಿ,ದೇವರ ಪೂಜೆ ಮಾಡುವುದರಿಂದ ಮನಸ್ಸು ನಿರ್ಮಲಗೊಳ್ಳುವುದರ ಜತೆಗೆ ನಮ್ಮೊಳಗೆ ಧಾರ್ಮಿಕ ಪ್ರಜ್ಞೆ ಜಾಗ್ರತಾಗೊಳ್ಳುವಂತೆ ಮಾಡುತ್ತದೆ.ತ್ಯಾಗದ ಮನೋಭಾವದಿಂದ ದೇವತಾ ಕಾರ್ಯದಲ್ಲಿ ತೊಡಗಿಕೊಂಡಾಗ ಮಾತ್ರ ಪುಣ್ಯದ ಫಲ ನಮಗೆ ದೊರಕುತ್ತದೆ ಎಂದು ಹೇಳಿದರು.
ರಾಘು ವಿ.ಕೆ ಧಾರ್ಮಿಕ ಕಾರ್ಯಕ್ರಮದ ಕುರಿತು ವಿವರಿಸಿ ಮಾತನಾಡಿ,ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಅಂಗವಾಗಿ ಎಪ್ರಿಲ್ 11 ರಿಂದ ಧಾರ್ಮಿಕ ಕಾರ್ಯಕ್ರಮವು ದೀಪಸ್ಥಾಪನೆಯೊಂದಿಗೆ ಆರಂಭಗೊಂಡು ಅಷ್ಟ ದಿನಗಳ ಪರ್ಯಾಂತ ನಡೆಯಲಿದೆ ಎಂದು ಹೇಳಿದರು.ಎಪ್ರಿಲ್ 15 ರಂದು ಸಾಗರೇಶ್ವರ ಪೂಜೆ ಅಂಬಿಗರ ಚೌಡಯ್ಯ ಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆಲಿದೆ ಹಾಗೂ ಎಪ್ರಿಲ್ 18 ರಂದು ಐತಿಹಾಸಿಕ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಜರುಗಲಿದೆ ದೇವತಾ ಕಾರ್ಯದ ನಿಮಿತ್ತ ಹಮ್ಮಿಕೊಳ್ಳುವ ಮಹಾಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಕೇಳಿಕೊಂಡರು.
ಕಂಚುಗೋಡು ಶ್ರೀರಾಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು,ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಚೌಕಿ 888 ಸಂತೋಷ್ ಖಾರ್ವಿ ಮತ್ತು ಗೌರವಾಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ,ಸಲಹೆಗಾರ ದೇವಿದಾಸ್,ಮಹಿಳಾ ಸಮಿತಿ ಅಧ್ಯಕ್ಷೆ ಯಶೋಧ ಖಾರ್ವಿ ಹಾಗೂ ಎಲ್ಲಾ ಸಮಿತಿಗಳ ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…