ಕುಂದಾಪುರ:ಬೈಂದೂರು ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಡ ಗ್ರಾಮದ ನಾಡ ಗುಡ್ಡೆಅಂಗಡಿ ಸಮೀಪದ ಹಾಡಿಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತ ಪುರಷನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಬೈಂದೂರು ವೃತ್ತ ನಿರೀಕ್ಷಕ ಸವಿತೃ ತೇಜ್,ಗಂಗೊಳ್ಳಿ ಪಿ.ಎಸ್.ಐ ಹರೀಶ್ ಆರ್ ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಹಾಯಕ ಠಾಣಾಧಿಕಾರಿ ಮಂಜುನಾಥ್,ಸಿಬ್ಬಂದಿಗಳಾದ ಶಾಂತರಾಮ್ ಶೆಟ್ಟಿ,ನಾಗರಾಜ್,ದಿನೇಶ್ ಸ್ಥಳದಲ್ಲಿ ಹಾಜರಿದ್ದರು.ಇಬ್ರಾಹಿಂ ಗಂಗೊಳ್ಳಿ,ಬಬ್ಬಾ ಗಂಗೊಳ್ಳಿ,ಸುಭಾನ್,ಪ್ರಭಾಕರ್ ನಾಡ ಶವವನ್ನು ಸಾಗಿಸಲು ಸಹಕರಿಸಿದರು.ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಶೀತಲೀಕರಣ ಘಟಕದಲ್ಲಿ ಶವವನ್ನು ಸಂರಕ್ಷಿಸಿ ಇಡಲಾಗಿದೆ.ಈ ಸಂಬಂಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು ಐದರಿಂದ ಆರು ದಿನಗಳ ಹಿಂದೆ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ದುರ್ಗಮ ಹಾದಿಯಲ್ಲಿ ಶವವನ್ನು ಸಾಗಿಸಲು ಸ್ವಯಂ ಸೇವಕರು ಹರಸಾಹಸ ಪಟ್ಟರು.
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಡೈರೆಕ್ಟರ್ ಇಂಚಾರ್ಜ್,ಪಿಪಿಸಿ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕೈಮಗ್ಗ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು.ಉಡುಪಿ ಬ್ರಹ್ಮಗಿರಿ…
ಕುಂದಾಪುರ:ಪರೀಕ್ಷೆಯಲ್ಲಿ ತಾನು ಅಂದು ಕೊಂಡಷ್ಟು ಮಾಕ್ರ್ಸ್ ನೀಡುವಂತೆ ನಿವೇದಿಸಿ ವಿದ್ಯಾರ್ಥಿಯೊಬ್ಬ (ಳು) ಹೊಳ್ಮಗೆ ಹೋರ್ ಬೊಬ್ಬರ್ಯ ದೈವದ ಮೊರೆ ಹೋಗಿದ್ದು.ಚೀಟಿ…
ಕುಂದಾಪುರ:ಕರ್ನಾಟಕ ಪತ್ರಕರ್ತರ ಸಂಘ (ರಿ) ಪ್ರೆಸ್ ಕಾಲೊನಿ,ಬೆಳಗಾವಿ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿರಣ್ ಪೂಜಾರಿ ಅವರು ರಾಜ್ಯಾಧ್ಯಕ್ಷರಾದ ಎಂ.ಬಿ.ಶಿವಪೂಜಿ ಅವರ…
(ಪಂಜುರ್ಲಿ) ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ…
ನೇತ್ರ ಹೈಗುಳಿ ಕುಂದಾಪುರ:ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ನೇತ್ರ ಹೈಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಗೆಂಡ ಸೇವೆ…