ಕುಂದಾಪುರ

ಬಂಜರು ಭೂಮಿಗೆ ಜೀವ ತುಂಬುತ್ತಿರುವ ಪ್ರಗತಿಪರ ಕೃಷಿಕ ಸುಬ್ಬಣ್ಣ ಶೆಟ್ಟಿ ಕಿರಿಮಂಜೇಶ್ವರ

Share

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಿವಾಸಿಯಾಗಿರುವ ಸುಬ್ಬಣ್ಣ ಶೆಟ್ಟಿ ಅವರು ಕಳೆದ 35 ವರ್ಷಗಳಿಂದ ಕೃಷಿ ಚಟುವಟಿಕೆ ಕಾರ್ಯದಲ್ಲಿ ತೊಡಗಿಕೊಳ್ಳುವುದರ ಮೂಲಕ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.ತನ್ನ 17ನೇ ವಯಸ್ಸಿನಲ್ಲಿಯೇ ತಂದೆಯವರ ಜೊತೆ ಗದ್ದೆ ಕೆಲಸದಲ್ಲಿ ತೊಡಗಿಕೊಂಡಿರುವ ಅವರು ಕೃಷಿ ಕಾಯಕವನ್ನೆ ತನ್ನ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಕುಟುಂಬದ ಜತೆ ಸಂತೃಪ್ತಿಯಾದ ಜೀವನವನ್ನು ನಡೆಸುತ್ತಿದ್ದಾರೆ.ಕೃಷಿಯಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಸುಬ್ಬಣ್ಣ ಶೆಟ್ಟಿ ಅವರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ನಿಸ್ಸಿಮ್ಮರು.

ಹಡವು ಬಿದ್ದ ಭೂಮಿಗೆ ಚೈತನ್ಯ ನೀಡುವ ದೃಷ್ಟಿಯಿಂದ ಪಾಳು ಬಿದ್ದಿರುವ ಭೂಮಿಯನ್ನು ಲೀಜಿಗೆ ಪಡೆದುಕೊಂಡು ಕೃಷಿ ಮಾಡುತ್ತಿರುವ ಸುಬ್ಬಣ್ಣ ಶೆಟ್ಟಿ ಅವರು ಸುಮಾರು 10 ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿಯನ್ನು ಮಾಡುತ್ತಿದ್ದಾರೆ.

ಮುಂಗಾರಿನಲ್ಲಿ 8 ಎಕರೆ ಭೂಮಿಯಲ್ಲಿ ಭತ್ತವನ್ನು ಬೆಳೆಯುತ್ತಾರೆ,ಹಿಂಗಾರಿನಲ್ಲಿ 4 ಎಕರೆ ಪ್ರದೇಶದಲ್ಲಿ ನೆಲಗಡಲೆ ಹಾಗೂ ಇನ್ನುಳಿದ 4 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನು ವರ್ಷದಲ್ಲಿ ಎರಡು ಬೆಳೆಯನ್ನು ಬೆಳೆಯುತ್ತಾರೆ.ಅವರ ಬಳಿ 1 ಎಕರೆ ಅಡಿಕೆ ತೋಟ ಸಹಿತ 100 ತೆಂಗಿನ ಮರಗಳಿವೆ.ದವಸ ಧಾನ್ಯವನ್ನಾಗಿ ಉದ್ದನ್ನು ಬೆಳೆಯುತ್ತಿರುವ ಸುಬ್ಬಣ್ಣ ಶೆಟ್ಟಿ ಅವರು ಅವಡೆ ಸಹಿತ ಇನ್ನಿತರ ತರಕಾರಿಯನ್ನು ಸಹ ಬೆಳೆಯುತ್ತಾರೆ.ಹೈನುಗಾರಿಯಲ್ಲಿ ತೊಡಗಿಕೊಂಡಿರುವ ಸುಬ್ಬಣ್ಣ ಶೆಟ್ಟಿ ಅವರು ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿಯೂ ಜನಪ್ರಿಯ ಕೆಲಸವನ್ನು ಮಾಡುತ್ತಿದ್ದಾರೆ.ಪಂಚಾಯತ್ ಸದಸ್ಯರಾಗಿಯೂ ಸಾಮಾಜಿಕ ಕೆಲಸವನ್ನು ಮಾಡುತ್ತಿರುವ ಸುಬ್ಬಣ್ಣ ಶೆಟ್ಟಿ ಅವರು ಜನರ ಪ್ರೀತಿ ಗಳಿಸಿದ್ದಾರೆ.ಹವ್ಯಾಸಿ ಯಕ್ಷಗಾನ ಕಲಾವಿದರಾಗಿರುವ ಅವರು ಯಕ್ಷ ವೇದಿಕೆಯಲ್ಲಿ ಮಿಂಚಿನ ಗುಣಿತದ ಮೂಲಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

52 ವರ್ಷ ತುಂಬಿದ್ದರೂ ಅವರದ್ದು ಇನ್ನು ಹರೆಯದ ವಯಸ್ಸು ಎಂದೇ ಹೇಳಬಹುದು,ಉತ್ಸಾಹದಿಂದಲೇ ಕೃಷಿ ಕಾಯದಲ್ಲಿ ತೊಡಗಿಕೊಳ್ಳುವ ಸುಬ್ಬಣ್ಣ ಶೆಟ್ಟಿ ಅವರು ಸ್ವತಹ ಕೃಷಿ ಭೂಮಿಯಲ್ಲಿ ಕೆಲಸ ಮಾಡುವುದರ ಮೂಲಕ ವರ್ಷಕ್ಕೆ ಸುಮಾರು 600 ರಿಂದ 700 ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸವನ್ನು ಕೂಡ ನೀಡುತ್ತಿದ್ದಾರೆ.ರಾಜ್ಯಕೀಯ,ಸಾಮಾಜಿಕ,ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸುಬ್ಬಣ್ಣ ಶೆಟ್ಟಿ ಅವರು ಬೈಂದೂರು ತಾಲೂಕಿನ ಯಶಸ್ವಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.ಯುವಕರಿಗೆ ಪ್ರೇರಣೆಯಾಗಿರುವ ಪಗ್ರಗತಿಪರ ಕೃಷಿಕ ಸುಬ್ಬಣ್ಣ ಶೆಟ್ಟಿ ಅವರ ಕೃಷಿ ಕಾಯಕಕ್ಕೆ ಮನ್ನಣೆ ಕೊಡುವ ಕೆಲಸ ಸರಕಾರ,ಇಲಾಖೆ ಮಾಡಬೇಕಾಗಿದೆ.

ಮೆಲೋಡಿ ಎನ್ನುವ ಹೊಸ ಕಲ್ಲಂಗಡಿ ಬೀಜದ ತಳಿಯನ್ನು ತನ್ನ ಭೂಮಿಯಲ್ಲಿ ಬೆಳೆಯುವುದರ ಮೂಲಕ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ.295- ನಾಮಧಾರಿ ಕ್ಕಿಂತ

ಕಪ್ಪು ಬಣ್ಣವನ್ನು ಹೊಂದಿರುವ ಮೆಲೋಡಿ ಕಲ್ಲಂಗಡಿ ಬೆಳೆ ಕರಾವಳಿ ಮಣ್ಣಿಗೆ ಸೂಕ್ತ ಎಂದು ಸುಬ್ಬಣ್ಣ ಶೆಟ್ಟಿ ಹೇಳುತ್ತಾರೆ.ತನ್ನ ಭೂಮಿಯಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ಪ್ರಗತಿಪರ ಕೃಷಿಕರಾದ ಸುಬ್ಬಣ್ಣ ಶೆಟ್ಟಿ ಅವರು ಮಾತನಾಡಿ,ಏಳೆಯ ವಯಸ್ಸಿನಲ್ಲಿಯೇ ತಂದೆ ಮತ್ತು ಹಿರಿಯರ ಜತೆ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದರಿಂದ ಕೃಷಿಯಲ್ಲಿ ಮುಂದುವರೆಯಲು ಸಾಧ್ಯವಾಗಿದೆ.ಭೂಮಿಯನ್ನು ಬಂಜರು ಗೈಯಬಾರದು ಎನ್ನುವ ಉದ್ದೇಶದಿಂದ ಹಡವು ಬಿದ್ದ ಭೂಮಿಯನ್ನು ಲೀಜಿಗೆ ಪಡೆದುಕೊಂಡು ಕಳೆದ 35 ವರ್ಷಗಳಿಂದ ಕೃಷಿ ಕೆಲಸ ಮಾಡುತ್ತಿದ್ದೇನೆ.ಕೃಷಿಯನ್ನು ಉದ್ಯೋಗವನ್ನಾಗಿ ಪರಿಗಣಿಸಿದಾಗ ಮಾತ್ರ ಲಾಭಾಂಶಗಳಿಸಲು ಸಾಧ್ಯವಿದೆ.ಬೈಂದೂರು ಭಾಗದಲ್ಲಿ ಕಲ್ಲಂಗಡಿ ಮತ್ತು ನೆಲಗಡಲೆ ಮುಖ್ಯವಾದ ಬೆಳೆಯಾಗಿರುವುದರಿಂದ ರೈತರನ್ನು ಪ್ರೋತ್ಸಾಹಿಸಿಸುವ ದೃಷ್ಟಿಯಿಂದ ಎರಡು ವರ್ಷಕ್ಕೊಮ್ಮೆ ಕೃಷಿ ಸಬ್ಸಿಡಿ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯವಾಗಿದೆ.

ವಿಶೇಷ ವರದಿ -ಜಗದೀಶ ದೇವಾಡಿಗ ಮುಳ್ಳಿಕಟ್ಟೆ
ಮೊಬೈಲ್ ಸಂಖ್ಯೆ -9916284048

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

2 weeks ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

2 weeks ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

1 month ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

1 month ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

1 month ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

1 month ago