ಬೈಂದೂರು:ತಾಲೂಕಿನ ಶಿರೂರು ಶ್ರೀ ಜೈನ ಶೇಡಿಬೀರ ನಾಗ ಪರಿವಾರ ದೈವಸ್ಥಾನದ ವಾರ್ಷಿಕ ಹಾಲು ಹಬ್ಬ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ಅದ್ದೂರಿಯಾಗಿ ನಡೆಯಿತು.
ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿ ಅಂತೆ ಜೈನ ಶೇಡಿಬೀರ ದೇವರಿಗೆ ಸಮರ್ಪಿಸುವ ಚಿನ್ನಾಭರಣವನ್ನು
ಆರ್ಮಕ್ಕಿ ಮನೆಯಿಂದ ವೈಭವದ ಮೆರವಣಿಗೆ ಮೂಲಕ ತರಲಾಗುತ್ತದೆ.ಪೂಜೆ ಸಲ್ಲಿಸಿ ದೇವರಿಗೆ ಚಿನ್ನಾಭರಣವನ್ನು ತೋಡಿಸುವುದರ ಮೂಲಕ ವಾರ್ಷಿಕವಾಗಿ ನಡೆಯುವ ಜಾತ್ರೆಗೆ ಚಾಲನೆ ಸಿಗುತ್ತದೆ.ಜೈನ ಶೇಡಿಬೀರ ದೇವರಿಗೆ ಸಮರ್ಪಿಸುವ ಚಿನ್ನವನ್ನು ಆರ್ಮಕ್ಕಿ ಮನೆಯಲ್ಲಿ ಪೂಜಿಸಿ, ಸಿಹಿಯನ್ನು ವಿತರಿಸುವ ಪದ್ಧತಿಯೂ ಇದೆ.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ,ಶಿರೂರು ಗ್ರಾಮದ ಗ್ರಾಮ ದೇವರಾದ ಶ್ರೀ ಜೈನ ಶೇಡಿಬೀರ ಜಾತ್ರಾ ಮಹೋತ್ಸವ ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತದೆ.ನಂಬಿದ ಕುಟುಂಬಸ್ಥರು ಕಷ್ಟ ಕಾಲದಲ್ಲಿ ಹೇಳಿಕೊಂಡ ಹರಕೆಯನ್ನು ಸಲ್ಲಿಸಿ ದೇವರ ದರ್ಶನವನ್ನು ಪಡೆಯುತ್ತಾರೆ.ಕಟ್ಟುಕಟ್ಟಲೆ ಅಂತೆ ಆರ್ಮಕ್ಕಿ ಮನೆಯಿಂದ ದೇವರಿಗೆ ತೋಡಿಸುವ ಚಿನ್ನವನ್ನು ಮೆರವಣಿಗೆ ಮೂಲಕ ತಂದು ತೋಡಿಸುವ ಪದ್ಧತಿ ಇದೆ ಎಂದು ಹೇಳಿದರು.ದೇವಸ್ಥಾನದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳು ಬಾಕಿ ಇದ್ದು ದಾನಿಗಳು,ನಂಬಿದ ಭಕ್ತರು ಸಹಕಾರ ನೀಡಬೇಕೆಂದು ಕೇಳಿಕೊಂಡರು.
ದೇವಸ್ಥಾನದ ಕಾರ್ಯದರ್ಶಿ ಆರ್ಮಕ್ಕಿ ರವೀಂದ್ರ ಶೆಟ್ಟಿ ಮಾತನಾಡಿ,ಆರ್ಮಕ್ಕಿ ಮನೆಯವರ ಮುಂದಾಳತ್ವ ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜೈನ ಶೇಡಿಬೀರ ನಾಗ ಪರಿವಾರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತದೆ ಎಂದರು.ಜಾತ್ರೆಯ ಅಂಗವಾಗಿ ಗೆಂಡಸೇವೆ ಅನ್ನದಾನ ಸೇವೆ ಹಾಗೂ ವಿಶೇಷಯನ್ನು ಪೂಜೆ ದೇವರಿಗೆ ಸಲ್ಲಿಸಲಾಯಿತು ಎಂದು ಹೇಳಿದರು.
ಸುಕೇಶ್ ಶೆಟ್ಟಿ ಆರ್ಮಕ್ಕಿ ಮಾತನಾಡಿ,ಇತಿಹಾಸ ಪ್ರಸಿದ್ಧ ಶಿರೂರು ಜಾತ್ರೆ ಸಂಪ್ರದಾಯ ಬದ್ಧವಾಗಿ ಕಟ್ಟು ಕಟ್ಟಲೇ ಅಂತೆ ನಡೆಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಮಕ್ಕಿ ಮನೆಯವರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
ಅಶ್ವಿನಿ ರೋಹನ್ ಶೆಟ್ಟಿ ಉಮ್ಮಣ್ಣ ಶೆಟ್ರ ಮನೆ ಶಿರೂರು ಅನ್ನದಾನ ಸೇವೆ ನೆರವೇರಿಸಿದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…