ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಣೆಗೆರೆ ಶ್ರೀಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದರು ಶ್ರೀ ಜಟ್ಟಿಗೇಶ್ವರ ಸಮುದಾಯ ಭವನವದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು.ಸಭಾಭವನದ ನಿರ್ಮಾಣಕ್ಕೆ ಧನಸಾಹಯ ಮಾಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಮಕರ ಸಂಕ್ರಮಣದ ಅಂಗವಾಗಿ ಶ್ರೀಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿಯ ವಾರ್ಷಿಕ ಹಾಲು ಹಬ್ಬ ನಡೆಯಿತು.ಅನ್ನದಾನ ಸೇವೆ ಜರುಗಿತು.ಕುಂದಾಪುರ,ಬೈಂದೂರು ತಾಲೂಕು ಸೇರಿದಂತೆ ಇತರ ಜಿಲ್ಲೆಗಳಿಂದ ಭಕ್ತರು ದೈವದ ಮನೆಗೆ ಆಗಮಿಸಿ ಹರಕೆಯನ್ನು ಸಲ್ಲಿಸಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಕರಾವಳಿ ಭಾಗದಲ್ಲಿ ಜಾತಿ ಧರ್ಮ ರಾಜಕೀಯ ಹೆಸರಿನಲ್ಲಿ ಜನರನ್ನು ಒಗ್ಗೂಡಿಸುವುದು ಕಷ್ಟ ಆದರೆ ದೈವ ದೇವಸ್ಥಾನದ ವಿಚಾರದಲ್ಲಿ ಇಲ್ಲಿನ ಜನರು ಒಗ್ಗಟ್ಟಿನಿಂದ ಮುಂದೆ ಸಾಗುತ್ತಾರೆ ಎನ್ನುವುದಕ್ಕೆ ದೈವ ದೇವಸ್ಥಾನಗಳು ಅಭಿವೃದ್ಧಿ ಹೊಂದಿರುವುದೆ ಸಾಕ್ಷಿ ಆಗಿದೆ.ನಮ್ಮ ಸಂಸ್ಕøತಿ ಆಚಾರ ವಿಚಾರಗಳನ್ನು ಹಿರಿಯರು ಯುವ ಪೀಳಿಗೆಗೆ ಒಪ್ಪಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಶ್ರೀಜಟ್ಟಿಗೇಶ್ವರ ಭದ್ರಮಹಾಂಕಾಳಿ ಸಪರಿವಾರ ಗರಡಿ ದೇವಸ್ಥಾನದ ಅಧ್ಯಕ್ಷ ಬಾಬು.ಕೆ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ,ದೈವ ಸ್ಥಾನವನ್ನು ನಂಬಿದ ಭಕ್ತರು ಮತ್ತು ದಾನಿಗಳ ಸಹಕಾರದಿಂದ ಅಜೀರ್ಣ ಅವಸ್ಥೆಯಲ್ಲಿದ್ದ ದೈವಸ್ಥಾನದ ಜೀರ್ಣೋದ್ಧಾರ ಸಹಿತ,ಸಭಾಭವನ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.ನಮ್ಮ ದೇವಸ್ಥಾನದಲ್ಲಿ ಸುಮಾರು 35 ದೈವಗಳಿದ್ದು ಪ್ರತಿಯೊಂದು ದೈವದಲ್ಲಿ ಒಂದೊಂದು ರೀತಿ ಶಕ್ತಿ ಅಡಗಿದೆ.ಕಷ್ಟವೆಂದು ಬಂದ ಭಕ್ತರ ಇಷ್ಟಾರ್ಥವನ್ನು ಸಿದ್ಧಿಸುವ ಕಾರಣಿಕ ಶಕ್ತಿಯನ್ನು ನಮ್ಮ ಶ್ರೀಜಟ್ಟಿಗೇಶ್ವರ ಮತ್ತು ಶ್ರೀಭದ್ರಮಹಾಂಕಾಳಿ ಅಮ್ಮನವರ ಶಕ್ತಿ ಅಪಾರವಾದದ್ದು ಎಂದು ಹೇಳಿದರು.ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕೆಂದು ವಿನಂತಿಸಿಕೊಂಡರು.
ಎಪಿಎಂಸಿ ನಿಕಟ ಪೂರ್ವ ಉಪಾಧ್ಯಕ್ಷ ಕೃಷ್ಣ ಪೂಜಾರಿ ಮಾತನಾಡಿ,ಬಾಬು ಜೆ ಪೂಜಾರಿ ಮತ್ತು ಸಮಿತಿ ಅವರ ನೇತೃತ್ವದಲ್ಲಿ ಕಳೆದ 6 ವರ್ಷಗಳಿಂದ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ.ನನ್ನ ಕೈಲಾದಷ್ಟು ಸಹಾಯವನ್ನು ಮಾಡಲಾಗಿದ್ದು ನನಗೆ ದೇವರು ಕೊಟ್ಟಿರುವುದನ್ನು ಕಾಣಿಕೆ ರೂಪದಲ್ಲಿ ಒಂದಿಷ್ಟು ಮೊತ್ತವನ್ನು ದೇವರಿಗೆ ಸಮರ್ಪಿಸಿದ್ದೇನೆ ಎಂದರು.ಶ್ರೀಜಟ್ಟಿಗೇಶ್ವರ ಸ್ವಾಮಿ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ,ಕೆ.ಗೋಪಾಲ ಪೂಜಾರಿ,ವಿದ್ಯಾಧರ ಗುರೂಜಿ ಶಿರಸಿ ಶುಭಹಾರೈಸಿದರು.ಗುಜ್ಜಾಡಿ ಗ್ರಾ.ಪಂ ಸದಸ್ಯ ಹರೀಶ್ ಮೇಸ್ತ,ಸದಾನಂದ ಪೂಜಾರಿ,ರಾಮ ಪೂಜಾರಿ,ದುಗ್ಗಪ್ಪ ಪೂಜಾರಿ,ಬಿ.ಮಹಾಬಲ ದೇವಾಡಿಗ,ಎಪಿಎಂಸಿ ಸದಸ್ಯ ಕೃಷ್ಣ ಪೂಜಾರಿ,ಎಸ್.ಕೆ ಪೂಜಾರಿ,ಆರತಿ ಪೂಜಾರಿ ಯಡಕಂಠ,ಮಾಧವ ಪೂಜಾರಿ ಬಡಾಕೆರೆ,ಅಚ್ಚುತ ನಾಯಕವಾಡಿ,ಅನಂತ ಖಾರ್ವಿ,ಪ್ರಾತ್ರಿಗಳಾದ ನಾರಾಯಣ ಪೂಜಾರಿ,ಗ್ರಾಮಸ್ಥರು,ದೇವಸ್ಥಾನದ ಅರ್ಚಕರು,ಸಿಬ್ಬಂದಿಗಳು ಉಪಸ್ಥಿತರಿದ್ದರು.ಬಾಬು.ಕೆ ಪೂಜಾರಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ದೈಹಿಕ ಶಿಕ್ಷಕ ಗುರುರಾಜ ವಂದಿಸಿದರು.
ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಸನ್ನಪ್ರಸಾದವನ್ನು ಸ್ವೀಕರಿಸಿದರು.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…