ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಕೋಯಾನಗರ ಶಾಲೆಯನ್ನು ಕಳೆದ ಎಂಟು ವರ್ಷಗಳಿಂದ ದತ್ತು ತೆಗೆದು ಕೊಂಡು ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುತ್ತಿರುವ ಕನಕ ಗ್ರೂಪ್ ಜಗದೀಶ್ ಶೆಟ್ಟಿ ಕುದ್ರುಕೋಡು ಅವರನ್ನು ಜ.13 ರಂದು ಶಾಲೆಯಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಪೋಷಕ ವೃಂದದವರ ವತಿಯಿಂದ ವಿದ್ಯಾ ಪೋಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.
ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ ಉದ್ಯಮಿ:ನಾವುಂದ 5.ಸೆಂಟ್ಸ್ ಕಾಲೋನಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಕೋಯಾನರ ಶಾಲೆಯಲ್ಲಿ 5ನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದ್ದು ಪ್ರಸ್ತುತ 57 ವಿದ್ಯಾರ್ಥಿಗಳು ಓದುತ್ತಿದ್ದಾರೆ.ಕಾಲೋನಿಯ ಮಕ್ಕಳೆ ಹೆಚ್ಚಾಗಿ ಬರುವ ಕೋಯಾನಗರ ಶಾಲೆಯನ್ನು ಕನಕ ಗ್ರೂಪ್ ಉದ್ಯಮಿ ಜಗದೀಶ್ ಶೆಟ್ಟಿ ಕುದ್ರಕೋಡು ಅವರು ಕಳೆದ ಎಂಟು ವರ್ಷಗಳ ಹಿಂದೆಯೇ ದತ್ತು ಸ್ವೀಕಾರ ಮಾಡಿ ಶಾಲೆಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವುದರ ಮುಖೇನ ಅತಿಥಿ ಶಿಕ್ಷಕರ ಸಂಬಳ,ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಿಕ್ಷಾ ವ್ಯವಸ್ಥೆ ಸಹಿತ ತಿಂಗಳಿಗೆ 20,000.ರೂ ಅನ್ನು ವಿನಿಯೋಗ ಮಾಡುತ್ತಿದ್ದಾರೆ.ಪ್ರತಿ ವರ್ಷ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡುವುದರ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಯಲ್ಲಿ ಸ್ಥಾಪನೆ ಮಾಡಿದ್ದಾರೆ.
ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಕನಕ ಗ್ರೂಪ್ ಜಗದೀಶ ಶೆಟ್ಟಿ ಕುದ್ರಕೋಡು ಮಾತನಾಡಿ,ಇಂಗ್ಲಿಷ್ ಶಿಕ್ಷಣದ ಮೇಲಿನ ವ್ಯಾಮೋಹ ಮತ್ತು ಆಧುನಿಕ ಜೀವನ ಶೈಲಿಗೆ ಮಾರು ಹೋಗಿದ್ದರಿಂದ ಇಂದು ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳು ಬಾಗಿಲು ಹಾಕುವ ಸ್ಥಿತಿಗೆ ಬಂದು ತಲುಪಿದೆ.ಆದರೆ ಯಾವುದೇ ವ್ಯವಸ್ಥೆಯನ್ನು ಅನುಭವಿಸಲು ಸಾಧ್ಯವಿಲ್ಲದ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸರಕಾರಿ ಶಾಲೆಗಳ ಬಾಗಿಲು ಸದಾ ತೆರೆದಿರಬೇಕು ಎಂದು ಹೇಳಿದರು.
ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ಮಾತನಾಡಿ,ಪ್ರತಿಯೊಬ್ಬ ಉದ್ಯಮಿ ಕೂಡ ತನ್ನ ಊರಿನಲ್ಲಿರುವ ಶಾಲೆಯನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಊರಿನ ಮಕ್ಕಳ ಶಿಕ್ಷಣೆಕ್ಕೆ ಪ್ರೋತ್ಸಾಹ ನೀಡಬೇಕು.ಸರಕಾರಿ ಶಾಲೆಗಳು ಉಳಿದರೆ ಮಾತ್ರ ಬಡ ಮಕ್ಕಳು ಶಿಕ್ಷಣವಂತರಾಗಲು ಸಾಧ್ಯ ಎಂದರು.
ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ
[8:35 pm, 12/01/2024] At Work: ಪ್ರೋತ್ಸಾಹ
[8:35 pm, 12/01/2024] At Work: ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ,
ಕುಂದಾಪುರ:ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಷನ್ ನಲ್ಲಿ ಆಯುಷ್ ಜಿ ಖಾರ್ವಿ ಚ್ಯಾಂಪಿಯನ್…
ಕುಂದಾಪುರ:ಗುಜ್ಜಾಡಿ ಗ್ರಾಮದ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ,ವಿದ್ಯಾರ್ಥಿವೇತನ ಮತ್ತು ಸನ್ಮಾನ ಕಾರ್ಯಕ್ರಮ…
ಕುಂದಾಪುರ:ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸೇವೆ…
https://youtu.be/KzeCIaIN1a8?si=8hfKxwVg_d8ubZRW ಕುಂದಾಪುರ:ಮರವಂತೆಯಲ್ಲಿ ಕಳೆದ ಎಂಟು ವರ್ಷಗಳಿಂದ ಬ್ರೆಕ್ ವಾಟರ್ ಕೆಲಸ ಸಿಆರ್‍ಝಡ್ ನಿಮಯ ಹಾಗೂ ಬೇರೆ ಬೇರೆ ಕಾರಣಗಳಿಂದ ನೆನೆಗುದ್ದಿಗೆ…
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾಷಿಕ ಹಾಲು ಸೇವೆ ನಾನಾ…
ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ದೆಯಲ್ಲಿ ಗಂಗೊಳ್ಳಿ ಕೊಂಚಾಡಿ…