ಕುಂದಾಪುರ:ಅಮೃತ ಮಹೋತ್ಸವ ಕಾರ್ಯಕ್ರಮ ಎನ್ನುವುದು ಕೇವಲ ಸಂಭ್ರಮಕ್ಕೆ ಮಾತ್ರ ಸೀಮಿತವಾಗದೆ ಶಾಲಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ ಎಂದು ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಹೇಳಿದರು.
ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲೆ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕಂಚುಗೋಡು ಶಾಲೆಯಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಾಲಾ ವಾಹನದ ವ್ಯವಸ್ಥೆ ಸಹಿತ ಸ್ಮಾರ್ಟ್ ಕ್ಲಾಸ್ ನಿರ್ಮಾಣ,ಇಂಗ್ಲಿಷ್ ಸ್ಪಿಕಿಂಗ್ ಕ್ಲಾಸ್,ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ,ವಿದ್ಯಾನಿಧಿ ಯೋಜನೆ ಹಾಗೂ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಎಲ್.ಕೆ.ಜಿ,ಯು.ಕೆ.ಜಿ ತರಗತಿ ಆರಂಭಿಸುವ ಚಿಂತನೆಯನ್ನು ಮಾಡಲಾಗಿದ್ದು ಎಲ್ಲಾ ಯೋಜನೆಗಳನ್ನು ಅಮೃತ ಮಹೋತ್ಸವ ಕಾರ್ಯಕ್ರಮದ ಮುಖೇನ ಹಮ್ಮಿಕೊಳ್ಳಲಾಗಿದೆ ಎಂದರು.ವಿದ್ಯಾಭಿಮಾನಿಗಳು,ದಾನಿಗಳು ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.
ಹಳೆ ವಿದ್ಯಾರ್ಥಿ ಸಂಘದ ಸಂಘದ ಕೋಶಾಧಿಕಾರಿ ಹರೀಶ್ ಖಾರ್ವಿ ಮಾತನಾಡಿ,1948 ರಲ್ಲಿ ಆರಂಭಗೊಂಡ ಕಂಚುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2024 ರಲ್ಲಿ 75 ವರ್ಷಗಳು ತುಂಬಲಿದೆ.ಅಮೃತ ಮಹೋತ್ಸವ ಕಾರ್ಯಕ್ರಮ ಒಂದೆ ವಿಷಯವಲ್ಲದೆ ಸರಕಾರಿ ಶಾಲೆಯನ್ನು ನಮ್ಮ ಭಾಗದಲ್ಲಿ ಉಳಿಸಿಕೊಳ್ಳುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಲ್ಲರೂ ಸಹಕಾರ ನೀಡಬೇಕೆಂದರು.
ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ.ಎಂ ಮಾತನಾಡಿ,ಹಳೆ ವಿದ್ಯಾರ್ಥಿ ಸಂಘ ಮತ್ತು ಎಸ್‍ಡಿಎಂಸಿ ಸದಸ್ಯರ ಅವಿತರ ಶ್ರಮದಿಂದ ಶಾಲೆಯಲ್ಲಿ ಹಾಜರಾತಿ ಪ್ರಮಾಣವೂ ಅಧಿಕಗೊಂಡಿದೆ ಎಂದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ವಿಮಲಾ ಸುರೇಶ್ ನಾಯಕ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೌಕಿ ಅಖೋಕ ಖಾರ್ವಿ ಮತ್ತು ಕಾರ್ಯದರ್ಶಿ ಕೃಷ್ಣ ಪಟೇಲ್,ಸಂಘಟನಾ ಕಾರ್ಯದರ್ಶಿ ರಮೇಶ್ ಖಾರ್ವಿ,ಅಮೃತ ಮಹೋತ್ಸವ ಸಮಿತಿ ಕೋಶಾಧಿಕಾರಿ ಪ್ರದೀಪ ಪೂಜಾರಿ,ಸುಖಪಾಲ್ ಖಾರ್ವಿ,ನಾಗರಾಜ,ದಿವಾಕರ,ಆಶಾ ಕಾರ್ಯಕರ್ತೆ ಪ್ರೇಮ ಭಂಡಾರಿ ಉಪಸ್ಥಿತರಿದ್ದರು.ಜನವರಿ 20,21 ರಂದು ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲೆ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…
ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…
ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ…