ಬೈಂದೂರು:ತಾಲೂಕಿನ ಕಂಬದಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 125ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಆರ್.ಕೆ ಸಂಜೀವ ರಾವ್ ಸ್ಮಾರಕ ವಿಜಯ ರಂಗ ಮಂದಿರದಲ್ಲಿ ಅದ್ದೂರಿಯಾಗಿ ಶನಿವಾರ ನಡೆಯಿತು.ಶಾಲಾ ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಶಾಲಾ ಶಿಕ್ಷಕರನ್ನು,ದಾನಿಗಳನ್ನು,ಅಡುಗೆ ಸಾಹಯಕರನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಂಜಾರು ಕಾಮಧೇನು ಗೋಶಾಲೆ ಮಹಾ ಪೋಷಕರು,ಕಂಬಕೋಣೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಮತ್ತು ಆರ್.ಕೆ ಸಂಜೀವ ರಾವ್ ದತ್ತಿ ಧರ್ಮರ್ಶಿಗಳು,ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು ಅದರ ಸಂಸ್ಥಾಪಕ ಟ್ರಸ್ಟಿಗಳಲ್ಲಿ ಒಬ್ಬರಾದ ಕೆ.ಎಸ್ ಪ್ರಮೋದ್ ಅಣ್ಣನವರ ಶುಭಾಂಶನೆಗೈದು ಮಾತನಾಡಿ,ಗುಣ ಮಟ್ಟದ ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಕಾರ್ಯಯೋಜನೆಯನ್ನು ಹಾಕೊಕೊಂಡಾಗ ಮಾತ್ರ ಮಕ್ಕಳು ಸರಕಾರಿ ಶಾಲೆಗಳತ್ತಾ ಬರುತ್ತಾರೆ ಎನ್ನುವುದು ನನ್ನ ಅಭಿಪ್ರಾಯವಾಗಿದ್ದು.ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ,ಭಾರತ್ನ ಸರ್.ಎಂ ವಿಶೇಶ್ವರಯ್ಯ,ಮಾಜಿ ಲೋಕಯುಕ್ತ ಸಂತೋಷ್ ಹೆಗ್ಡೆ ಅವರು ಕೂಡ ಸರಕಾರಿ ಶಾಲೆಯಲ್ಲಿ ಓದಿ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇನೆ ಎಂದು ಹೇಳಿದರು.ಕಂಬದಕೋಣೆ ಶಾಲಾ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಪ್ರಮೋದ ಅಣ್ಣನವರು ಭರವಸೆಯನ್ನು ನೀಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಮಹಾಬಲ.ಕೆ ಅವರು ವರದಿಯನ್ನು ವಾಚಿಸಿ ಮಾತನಾಡಿ,ಸುಮಾರು 25 ವರ್ಷಗಳ ಇತಿಹಾಸವನ್ನು ಹೊಂದಿರುವ ಕಂಬದಕೋಣೆ ಶಾಲೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಆರ್.ಕೆ ಸಂಜೀವ ರಾವ್ ಮತ್ತು ಕೆ.ಎಸ್ ಪ್ರಮೋದ್ ರಾವ್ ಅವರ ಕೊಡುಗೆ ಅಪಾರವಾದುದು.ಶೈಕ್ಷಣಿಕ,ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಮನ್ನಣೆಯನ್ನು ನೀಡುತ್ತಾ ಬಂದಿರುವ ಪ್ರಮೋದ್ ಅಣ್ಣನವರು ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಒಂದು ಲಕ್ಷ.ರೂ ದೇಣಿಗೆಯನ್ನು ಕೊಟ್ಟು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಕಂಬಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿ,125 ವರ್ಷಗಳ ಕಾಲದ ಇತಿಹಾಸವನ್ನು ಹೊಂದಿರುವ ನಮ್ಮ ಶಾಲೆಯಲ್ಲು ನುರಿತ ಶಿಕ್ಷಕರ ಬಳಗದವರ ವತಿಯಿಂದ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ.ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಚ್.ವಿಜಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ,ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿಸಬೇಕು ಎನ್ನುವ ದೃಷ್ಟಿಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸಲಾಗಿದೆ.ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದರು.ಆರ್.ಕೆ ಸಂಜೀವರು ಅವರು ಕೊಡುಗೆ ಕೊಟ್ಟಂತಹ ಈ ಶಾಲೆ ಉಳಿಯಬೇಕಾದರೆ ಗ್ರಾಮದ ಮಕ್ಕಳು ಶಾಲೆಗೆ ಬರುವಂತೆ ಆಗಬೇಕೆಂದರು.ಹೊಸ ಕಟ್ಟಡ ನಿರ್ಮಣಕ್ಕೆ ದಾನಿಗಳು,ಗ್ರಾಮಸ್ಥರು,ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಜಯಶೀಲ ಶೆಟ್ಟಿ ಸ್ವಸ್ತಿವಾಚನ ಮಾಡಿ ಮಾತನಾಡಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ರಾಧ ಪೂಜಾರಿ ಮಾತನಾಡಿ,ಶಾಲಾ ಅಭಿವೃದ್ದಿಗೆ ಮೊದಲಿನಿಂದಲೂ ಪ್ರೋತ್ಸಾಹವನ್ನು ನೀಡಿ ಬೆನ್ನು ತಟ್ಟಿ ಹುರಿದುಂಬಿಸುತ್ತಿರುವ ಪ್ರಮೋದ್ ಅಣ್ಣನವರ ಕೊಡುಗೆ ಅಪಾರವಾದದು ಅವರಿಗೆ ಶ್ರೀಮಹಾಲಿಂಗೇಶ್ವರ ದೇವರು ಒಳ್ಳೆಯದು ಮಾಡಲಿ ಎಂದು ಶುಭಹಾರೈಸಿದರು.
ಕಂಬದಕೋಣೆ ಗ್ರಾಮ ಪಂಚಾಯತ್ ಸದಸ್ಯ ರಾಜೇಶ ದೇವಾಡಿಗ ಮಾತನಾಡಿ,ಶತಮಾನಗಳಷ್ಟು ಇತಿಹಾಸವನ್ನು ಹೊಂದಿರುವ ಕಂಬಕೋಣೆ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಕಟ್ಟಡ ನಿರ್ಮಾಣಕ್ಕೆ ಪ್ರಮೋದ್ ಅಣ್ಣನವರು ಮಿಂಚುಣಿಯಲ್ಲಿ ನಿಂತು ಕಾರ್ಯಗಳನ್ನು ಮಾಡುವಂತೆ ನೋಡಿಕೊಳ್ಳಬೇಕು.ದಾನಿಗಳು ಮತ್ತು ಗ್ರಾಮಸ್ಥರು ಶಾಲೆಯನ್ನು ಅಭಿವೃದ್ಧಿಗೊಳಿಸಲು ಮುಂದೆ ಬರಬೇಕು ಎಂದು ಕೇಳಿಕೊಂಡರು.
ಶಾಲಾ ಕ್ರೀಡಾ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಮಾತನಾಡಿ,ಆರ್.ಕೆ ಸಂಜೀವರು ಕಟ್ಟಿದಂತಹ ಶಾಲೆಯಲ್ಲಿ 125ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿರುವುದು ಬಹಳಷ್ಟು ಖುಷಿ ಸಂಗತಿ ಆಗಿದೆ. ಊರಿನ ಶಾಲೆ ಬಗ್ಗೆ ಸದಾ ಅಭಿಯಾನವನ್ನು ಹೊಂದಿರುವ ಪ್ರಮೋದ್ ಅಣ್ಣನವರ ಸೇವೆ ಮುಂದಿನಗಳಲ್ಲಿ ಮತದಷ್ಟು ದೊರೆಯುವಂತೆ ಆಗಲಿ ಎಂದರು.
ಕಂಬಕೋಣೆ ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕ ಗುರುರಾಜ ಹೆಬ್ಬಾರ್ ಮಾತನಾಡಿ,ಶಾಲೆಯ ಕಟ್ಟಡಗಳು ಬಹಳಷ್ಟು ಹಳೆಯದ್ದಾಗಿದೆ ಪ್ರಮೋದ್ ಅಣ್ಣ ಮತ್ತು ಕಂಬಕೋಣೆ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರ ಜಂಟಿ ಸಾರಥ್ಯದಲ್ಲಿ ಶಾಲೆ ನವೀಕರಣಗೊಳಲಿ ಎಂದು ಶುಭಹಾರೈಸಿದರು.
ಕದಂಬಯುವಕ ಮಂಡಲ ಗೌರವಾಧ್ಯಕ್ಷ ಸಂತೋಷ ಪೂಜಾರಿ ಮಾತನಾಡಿ,ಶುಭಹಾರೈಸಿದರು.
ಸತ್ಯಾನ ಕೊಡೇರಿ ಅವರು ಲೇಖನಿ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.ಉದ್ಯಮಿ ನಾಗರಾಜ ಶೆಟ್ಟಿ ನಾರ್ಕಳಿ,ಮಂಜುನಾಥ ಕಾರಂತ,ಪ್ರಾತಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ಅಧ್ಯಕ್ಷ ಶೇಖರ ಪೂಜಾರಿ,ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ,ಗಣೇಶ ದೇವಾಡಿಗ ಮೆಕ್ಕೆಮನೆ,ನಾಗರತ್ನ ಗೋಳಿಬೆಟ್ಟು,ಸಿಆರ್‍ಪಿ ಮಂಜುನಾಥ ನಾಯ್ಕ್,ವಿದ್ಯಾರ್ಥಿ ನಾಯಕಿ ಕೃತಿಕಾ,ಗ್ರಾಮಸ್ಥರು ಉಪಸ್ಥಿತರಿದ್ದರು.
ಸಹ ಶಿಕ್ಷಕ ನಾಗ ದೇವಾಡಿಗ ಸ್ವಾಗತಿಸಿದರು.ಶಿಕ್ಷಕಿ ಪದ್ಮಾವತಿ ನಿರೂಪಿಸಿದರು.ಮುಖ್ಯ ಶಿಕ್ಷಕ ಮಹಾಬಲ.ಕೆ ವಂದಿಸಿದರು.
ಅತಿಥಿಗಳಿಗೆ ಗಿಡಗಳನ್ನು ಕೊಡುವುದರ ಮೂಲಕ ಪರಿಸರದ ಮೇಲಿನ ಕಾಳಜಿಯನ್ನು ತೋರಿಸಿರುವುದು ವಿಶೇಷವಾದ ಸಂಗತಿ ಆಗಿದೆ.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…