ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ನಿವಾಸಿ ಪುಷ್ಪಲತಾ ಮತ್ತು ವಸಂತ ಅವರ ದಂಪತಿಗಳ ಪುತ್ರಿ ಬಾಲ ಪ್ರತಿಭೆ ಕು.ತನ್ವಿತಾ ಪೂಜಾರಿ ಯೋಗಾಸನದಲ್ಲಿ ಚಿನ್ನ,ಬೆಳ್ಳಿ,ಕಂಚು ಸೇರಿದಂತೆ ಒಟ್ಟು 65 ಕ್ಕೂ ಅಧಿಕ ಪ್ರಶಸ್ತಿಗಳನ್ನು ಜಯಿಸುವುದದರ ಮೂಲಕ ಯೋಗಾಸನದಲ್ಲಿ ವಿಶಿಷ್ಟವಾದ ಸಾಧನೆ ಮಾಡುತ್ತಿದ್ದಾರೆ.
ನಟ ದರ್ಶನ ಜತೆ ಕ್ರಾಂತಿ ಸಿನಿಮಾದಲ್ಲಿ ನಟನೆ ಮಾಡುವುದರ ಮುಖೇನ ಚಿತ್ರರಂಗದಲ್ಲಿಯೂ ಗುರುತಿಸಿ ಕೊಂಡಿದ್ದಾರೆ.ರಿಯಾಲಿಟಿ ಶೋ,ಭರತ ನಾಟ್ಯ,ಜಾಹೀರಾತು ವಿಭಾಗದಲ್ಲಿಯೂ ವಿಶೇಷ ರೀತಿಯ ಚಾಪನ್ನು ಮೂಡಿಸಿದ್ದಾರೆ.10 ನೇ ವಯಸ್ಸಿನಲ್ಲಿ ಯೋಗಾಭ್ಯಾಸದಲ್ಲಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆಯನ್ನು ಹೊಂದಿರುವ ಕು.ತನ್ವಿತಾ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಕಲಾಶ್ರೀ ಪ್ರಶಸ್ತಿ,ಅಬ್ದು ಕಲಾಂ ರಾಷ್ಟ್ರ ಸದ್ಭಾವನಾ ಪ್ರಶಸ್ತಿ,ಯೋಗರತ್ನ ಪ್ರಶಸ್ತಿ,ಬಾಲ ಪುರಸ್ಕಾರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿದೆ.
ಜಿಲ್ಲಾ,ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸರುವ ಕು.ತನ್ವಿತಾ 150ಕ್ಕೂ ಹೆಚ್ಚಿನ ವೇದಿಕೆಯಲ್ಲಿ ಯೋಗ ಪ್ರದರ್ಶನ ನೀಡಿರುತ್ತಾರೆ.2018-19 ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿ ವಾರ್ಷಿಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಯೋಗ ಸ್ಪರ್ಧೆಯಲ್ಲಿ ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ಭಾವಹಿಸಿದ್ದಾರೆ.
ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ ಮಾತನಾಡಿ,ಕುಂದಾಪುರ ತಾಲೂಕಿನ ಪುಟ್ಟ ಗ್ರಾಮವಾದ ಕುಂದಬಾರಂದಾಡಿ ನಿವಾಸಿ ಅಂತರಾಷ್ಟ್ರೀಯ ಯೋಗಪಟು ಕು.ತನ್ವಿತಾ ಅವರು ಬಹುಮುಖ ಪ್ರತಿಭೆ ಯೋಗ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಹೆಸರನ್ನು ಮಾಡಿರುವ ಬಾಲಪ್ರತಿಭೆಯನ್ನು ಗುರುತಿಸುವ ಕೆಲಸ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳು ಮಾಡಬೇಕು.ಯೋಗಾಸನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಲಿ ಎಂದು ಶುಭಹಾರೈಸಿದರು.
ಯೋಗಪಟು ತನ್ವಿತಾ ಅವರ ತಂದೆ ವಸಂತ ಪೂಜಾರಿ ಅವರು ಮಾತನಾಡಿ,ಬಾಲ್ಯದಲ್ಲೇ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರಿಂದ ಅವಳ ನೆಚ್ಚಿನ ಕ್ಷೇತ್ರಕ್ಕೆ ಬೆಂಬಲವನ್ನು ನೀಡಿ ಪ್ರೋತ್ಸಾಹಿಸಲಾಗಿದೆ.5ನೇ ತರಗತಿ ಯಿಂದಲೇ ಯೋಗಾದಲ್ಲಿ ತೊಡಗಿರುವ ತನ್ವಿತಾ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾಳೆ.ಯೋಗ ಮಾತ್ರವಲ್ಲದೆ ನೃತ್ಯ,ಯಕ್ಷಗಾನದಲ್ಲಿಯೂ ನಟನೆ ಮಾಡುವುದರ ಮೂಲಕ ತನ್ನ ಪ್ರತಿಭೆಯನ್ನು ಹೊರ ಜಗತ್ತಿಗೆ ತೊರ್ಪಡಿಸಿದ್ದಾಳೆ.ಅವಳ ಸಾಧನೆಗೆ ಸಂಘ ಸಂಸ್ಥೆಗಳು,ಸಮಾಜ ಬಾಂಧವರು ಬೆಂಬಲ ನೀಡಬೇಕು ಎಂದರು.
ಅಂತಾರಾಷ್ಟ್ರೀಯ ಯೋಗಪಟು ಕು.ತನ್ವಿತಾ ಮಾತನಾಡಿ,ಈಗಾಗಲೇ ಹಲವಾರು ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು,ಜಿಲ್ಲಾ,ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರಿಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದಿನಿ.ರಾಜ್ಯ ಸರಕಾರದಿಂದ ಕಲಾಶ್ರೀ ಪ್ರಶಸ್ತಿ ಕೂಡ ದೊರೆತ್ತಿದೆ.ಯೋಗಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ,ಆಸಕ್ತರಿಗೆ ಯೋಗಾವನ್ನು ಹೇಳಿ ಕೊಡಬೇಕು ಎನ್ನುವ ಆಸೆ ಇದೆ.ಐಎಎಸ್ ಓದಿ ಜನರ ಸೇವೆ ಮಾಡಬೇಕು ಎಂದು ಹೇಳಿದರು.
ವಿಶ್ವ ಪ್ರಸಿದ್ಧ ತ್ರಾಸಿ ಬೀಚ್ನಲ್ಲಿ ಯೋಗಾಪಟು ಕು.ತನ್ವಿತಾ ಪೂಜಾರಿ ಅವರು ನಾನಾ ಭಂಗಿಗಳ ಯೋಗಾಸನದ ಪ್ರದರ್ಶನವನ್ನು ಮಾಡಿದರು,ಅವರ ಯೋಗಾಸನ ಪ್ರದರ್ಶನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳನ್ನು ಉನ್ನತೀಕರಣಗೊಳಿಸುವುದರ ಜತೆಗೆ ಉಳಿಸಿ ಬೆಳೆಸುವಂತಹ ಕೆಲಸ ಆದಾಗ ಮಾತ್ರ ತಮ್ಮೂರಿನಲ್ಲೆ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು…
ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ…
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಶನಿವಾರ ನಡೆಯಿತು.ನೂತನ ರಂಗ ಮಂದಿರ ಉದ್ಘಾಟನೆಯನ್ನು…
ಕುಂದಾಪುರ:ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿರುವ ಕರಾವಳಿ ದೊನ್ನೆ ಬಿರಿಯಾನಿ ಔಟ್‍ಲೆಟ್ ಹರೀಶ್ ಶೆಟ್ಟಿ ಕೌಂಜೂರು ಮತ್ತು ಶರತ್ ಶೆಟ್ಟಿ ಸೆಳೆಕೋಡು…
ಕುಂದಾಪುರ:ಬೈಂದೂರು ವಲಯದ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಬಂಟ್ವಾಡಿ ಶಾಲೆಯಲ್ಲಿ ಅಮೃತ ಮಹೋತ್ಸವ-2025 ಕಾರ್ಯಕ್ರಮ ಅದ್ಧೂರಿಯಾಗಿ ಶುಕ್ರವಾರ ನಡೆಯಿತು.ಗುಡ್ಡಮ್ಮಾಡಿ ದೇವಸ್ಥಾನದಿಂದ…
ಕುಂದಾಪುರ: ಟ್ಯಾಬ್ಲೋ ಕುಣಿತ ಭಜನೆ ಪೇಟ ಸಹಿತ ಬಣ್ಣದ ಕೋಡೆ ಡೊಳ್ಳು ಕುಣಿತ ಚಂಡೆವಾದನ ಪೂರ್ಣಕುಂಭ ಸ್ವಾಗತದೊಂದಿಗೆ ಕುಂದಾಪುರ ತಾಲೂಕಿನ…