ಕುಂದಾಪುರ:ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ರೈತರಿಗೆ ಮಾದರಿ ಸಂಸ್ಥೆಯಾಗಿ ಸೇವೆ ನೀಡುತ್ತಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.ಇದಕ್ಕೆ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಯವರ ಅನನ್ಯ ಕೊಡುಗೆ ಕಾರಣವಾಗಿದೆ.ರೈತರಿಗೆ ಹೆಚ್ಚು ಸೇವೆ ನೀಡಿದಷ್ಟು ಕೃಷಿ ಸೇರಿದಂತೆ ಹೈನುಗಾರಿಕೆ ಕ್ಷೇತ್ರ ಬಲಪಡಿಸಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ಖ.ರೈ.ಸೇ.ಸಂಘದ ರೈತರ ಕಾರ್ಯಕ್ರಮಗಳು ಮಾದರಿಯಾಗಿ ಗುರುತಿಸಿಕೊಂಡಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆದ ರೈತರ ಸೇವಾ ಸಹಕಾರಿ ಸಂಘ ನಿ.,ಉಪ್ಪುಂದ ಹಾಗೂ ರೈತ ಸಿರಿ,ರೈತ ಸೇವಾ ಒಕ್ಕೂಟ ಉಪ್ಪುಂದ ಅವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಹಿರಿಯ ರೈತರ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ಸರಕಾರ ಕೃಷಿ ಇಲಾಖೆಯನ್ನು ಬಲಪಡಿಸಿ ರೈತರ ಜೊತೆಗೆ ನಿಲ್ಲುವ ಅಗತ್ಯವಿದೆ.ರೈತರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ರೈತರಿಗೆ ಆತ್ಮಸ್ತರ್ಯ ತುಂಬುವ ನಿಟ್ಟಿನಲ್ಲಿ ಇನ್ನಷ್ಟು ಆದ್ಯತೆಗಳು ಸರಕಾರದ ಮಟ್ಟದಲ್ಲಿ ದೊರಕುವಂತಾದಾಗ ಕೃಷಿ ಕ್ಷೇತ್ರದ ಉಳಿವಿಗೆ ಸಹಕಾರಿಯಾಗಲಿದೆ ಎಂದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ,ಸಹಕಾರಿ ಕ್ಷೇತ್ರಕ್ಕೆ ಧರ್ಮ ಜಾತಿ ಇಲ್ಲ ಎಲ್ಲರೂ ಒಂದೇ ಎನ್ನುವ ಭಾವನೆ ಆಗಿದೆ.ಕೃಷಿ ಮತ್ತು ಹೈನುಗಾರಿಕೆಗೆ ಜಗತ್ತಿನ ಹಸಿವನ್ನು ನೀಗಿಸುವ ಶಕ್ತಿ ಇದೆ ಎಂದು ಹೇಳಿದರು.ಸಶಕ್ತ ಸದೃಢ ಭಾರತ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕಿದೆ ಎಂದರು.
ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಶೇಖರ ಖಾರ್ವಿ,ಕುಂದಾಪುರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಜೆ. ನಿಽಶ್ ಹೊಳ್ಳ,ರೂಪಾ ಜೆ. ಮಾಡ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಕುಂದಾವುರ,ಡಾ. ಬಿ. ಧನಂಜಯ ಹಿರಿಯ ವಿಜ್ಞಾನಿಗಳು, ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ,ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ,ಕೆ.ಮೋಹನ ಪೂಜಾರಿ,ಬಿ.ಎಸ್.ಸುರೇಶ ಶೆಟ್ಟಿ,ಗುರುರಾಜ ಹೆಬ್ಬಾರ್,ವೀರೇಂದ್ರ ಶೆಟ್ಟಿ,ಮಂಜು ದೇವಾಡಿಗ,ನಾಗರಾಜ ಖಾರ್ವಿ,ಭರತ್ ದೇವಾಡಿಗ,ಹೂವ ನಾಯ್ಕ,ದಿನೀತಾ ಶೆಟ್ಟಿ,ಜಲಜಾಕ್ಷಿ ಪೂಜಾರಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹಿರಿಯ ಪ್ರಗತಿಪರ ಕೃಷಿಕರಾದ ವೆಂಕಟ ಪೂಜಾರಿ ಉಬ್ಜೇರಿ ಯವರನ್ನು ಸಮ್ಮಾನಿಸಲಾಯಿತು ಹಾಗೂ ಅತೀ ಹೆಚ್ಚು ಹಾಲು ಮಾರಾಟ ಮಾಡಿದ ಹಾಲು ಉತ್ಪಾದಕರನ್ನು ಗೌರವಿಸಲಾಯಿತು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸ್ವಾಗತಿಸಿದರು.ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.ಉಪಾಧ್ಯಕ್ಷ ಈಶ್ವರ ಹಕ್ಷತೋಡ್ ವಂದಿಸಿದರು.
ಕುಂದಾಪುರ:ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಯೋಧರಾದ ಅನೂಪ್ ಪೂಜಾರಿ ಅವರು ವಿಧ್ಯಾರ್ಥಿ ಜೀವನದಲ್ಲೆ ದೇಶ ಸೇವೆಯ ಕನಸು ಕಂಡು ಅದನ್ನ…
ಕುಂದಾಪುರ:ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಯೋಧರಾದ ಅನೂಪ್ ಪೂಜಾರಿ ಅವರು ವಿಧ್ಯಾರ್ಥಿ ಜೀವನದಲ್ಲೆ ದೇಶ ಸೇವೆಯ ಕನಸು ಕಂಡು ಅದನ್ನ…
ಕುಂದಾಪುರ:ತ್ರಾಸಿ ಬೀಚ್‍ನಲ್ಲಿ ಜೆಸ್ಕಿ ರೈಡ್ ಮೂಲಕ ರೈಡ್ ಮಾಡುತ್ತಿದ್ದ ಸಂದರ್ಭದಲ್ಲಿ ಜೆಸ್ಕಿ ರೈಡ್ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಮಗುಚಿ ಬಿದ್ದ…
ಬೆಂಗಳೂರು:ಹೊಟೇಲ್ ಸರ್ವಿಸ್ ಕ್ಷೇತ್ರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ವರ್ಷಗಳ ಕಾಲದ ಅನುಭವನ್ನು ಹೊಂದಿರುವ ಕುಂದಾಪುರ ತಾಲೂಕಿನ ಯೋಗೀಶ್ ಗಾಣಿಗ ನಾಗೂರು…
ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಮಂಗಳವಾರ ನಡೆಯಿತು.ಜಂಟಿ ಕಾರ್ಯದರ್ಶಿ ಭಗಿನಿ ಅವರು ಅಧ್ಯಕ್ಷತೆ ವಹಿಸಿ…
ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿ ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಶೀಘ್ರವಾಗಿ ತನ್ನ ಶೈಕ್ಷಣಿಕ ವಿಶೇಷತೆಯಿಂದ ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕವಾಗಿ ಗುರುತಿಸಿಕೊಂಡ ಹೆಗ್ಗಳಿಕೆಗೆ…