ಬೈಂದೂರು:ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ನಾವುಂದ ಕಂಬಳ ಮಹೋತ್ಸವ ಬುಧವಾರ ನಡೆಯಿತು.ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಗುತ್ತದೆ ವಿಶಾಲವಾದ ಈ ಕಂಬಳ ಗದ್ದೆಯನ್ನು ತೋರಣಗಳಿಂದ ಅಲಂಕಾರಿಸಲಾಗುತ್ತದೆ.
ಹಲವಾರು ವರ್ಷಗಳಿಂದ ಕಂಬಳವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ವೆಂಕಟರಮಣ ಗಾಣಿಗ ನಾವುಂದ ಅವರ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ.ಈ ಬಾರಿ ಸೆನ್ಸಾರ್ ಮೂಲಕ ಕೋಣದ ಓಟದ ವೇಗಮಿತಿಯನ್ನು ಅಳೆಯುವ ಸಾಧನ ಅಳವಡಿಸಲಾಗಿದೆ. ಹಗ್ಗದ ಓಟ ಹಿರಿಯ ವಿಭಾಗ ,ಕೋಣಗಳ ಹಗ್ಗದ ಓಟ ಕಿರಿಯ ವಿಭಾಗ ,ಕೋಣಗಳ ಹಗ್ಗದ ಓಟ ಅತಿ ಕಿರಿಯ ವಿಭಾಗ, ಕೋಣಗಳ ಹಲಗೆ ಓಟ ನಡೆಯಿತು.ವಿಜೇತರಾದ ಕೋಣಗಳ ಮಾಲೀಕರಿಗೆ ನಗದು ಮತ್ತು ಶಾಶ್ವತ ಫಲಕದೊಂದಿಗೆ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಗಣ್ಯರು, ಕೋಣಗಳ ಮಾಲೀಕರು, ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ನಾವುಂದ ಕಂಬಳ ಸಮಿತಿಯ ಸರ್ವ ಸದಸ್ಯರು ಊರ ಗ್ರಾಮಸ್ಥರು ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.
ಕುಂದಾಪುರ:ತಾಲೂಕಿನ ಆಲೂರು ಗ್ರಾಮದ ನಿವಾಸಿ ರತ್ನಾಕರ ಜೊಯಿಸ್ (48) ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದರ ಮುಖೇನ ಸಾವಿನಲ್ಲೂ ಸಾರ್ಥಕತೆ…
ಕುಂದಾಪುರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಎಲ್ಲಾ ಉಪನ್ಯಾಸಕರಿಗೆ "ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ" ಎಂಬ ಕಾರ್ಯಕ್ರಮ ನಡೆಸಲಾಯಿತು .ಈ…
ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದ ಶೆಟ್ರಮನೆ ಮೂಲಸ್ಥಾನವಾದ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ದಿನದಂದು ರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ…
ಕುಂದಾಪುರ:ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶಿಲಾಮಯ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಉಮಾಮಹೇಶ್ವರ,ಶ್ರೀ ನಂದಿಕೇಶ್ವರ ಹಾಗೂ…
ಕುಂದಾಪುರ:ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶಿಲಾಮಯ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಉಮಾಮಹೇಶ್ವರ,ಶ್ರೀ ನಂದಿಕೇಶ್ವರ ಹಾಗೂ…
ಕೃಷಿಕ ಸುಬ್ಬಣ್ಣ ಶೆಟ್ಟಿ ಅವರು ಸನ್ಮಾನವನ್ನು ಸ್ವೀಕರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ…