ಕುಂದಾಪುರ:ಪರಿಸರದ ಮೇಲಿನ ಅಸಮತೋಲನದಿಂದಾಗಿ ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ ತಾಪಮಾನದ ಏರಿಕೆಯ ಬಿಸಿಯನ್ನು ತಪ್ಪಿಸಬೇಕಾದರೆ ಸ್ವಚ್ಛಾ ಪರಿಸರವನ್ನು ನಿರ್ಮಿಸುವುದು ಎಲ್ಲರ ಜವಾಬ್ದಾರಿ ಆಗಿದೆ ಎಂದು ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು.
ಕ್ಸಿಯಾವೋ ಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಎಸ್‍ಆರ್ ಮತ್ತು ಸಾಹಸ್ ಸಂಸ್ಥೆ ಸಹಯೋಗದೊಂದಿಗೆ ಹಾಗೂ ತ್ರಾಸಿ ಗ್ರಾಮ ಪಂಚಾಯತಿ ಸಹಕಾರದೊಂದಿಗೆ ತ್ರಾಸಿ ಬೀಚ್‍ನಲ್ಲಿ ನಡೆದ ಸ್ವಚ್ಛಾ ಕರಾವಳಿ ಮಿಷನ್ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ತಾ.ಪಂ ಇ.ಒ ಶಶಿಧರ್ ಅವರು ಕರಪತ್ರವನ್ನು ಉದ್ಘಾಟಿಸಿ ಮಾತನಾಡಿ,ಮನೆಯಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಪರಿಸರವನ್ನು ಇನ್ನಷ್ಟು ಸ್ವಚ್ಚಾವಾಗಿ ಇಟ್ಟುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಹಸ ಎನ್.ಜಿ.ಒ ಸಂಸ್ಥೆಯ ಪ್ರೋಗ್ರಾಂ ಮ್ಯಾನೇಜರ್ ಪ್ರೀತಾ ಆರ್.ಕೆ ಮಾತನಾಡಿ,ಸಮುದ್ರಕ್ಕೆ ತ್ಯಾಜ್ಯಗಳು ಸೇರಬಾರದು ಎನ್ನುವ ಉದ್ದೇಶದಿಂದ ವಿಶೇಷವಾದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮುಂದಿನ ಮೂರು ವರ್ಷಗಳ ಅವಧಿ ವರೆಗೆ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಆಯ್ದ 12 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದರು.
ಬೈಂದೂರು ತಾ.ಪಂ ಇ.ಒ ಭಾರತಿ,ಕ್ಸಿಯಾವೋ ಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮನೀಶ್ ಜೈನ್ ಮತ್ತು ಜಯಂತ ಕೆ.ಆರ್,ಹೊಸಾಡು ಪಿಡಿಒ ಪಾರ್ವತಿ,ತ್ರಾಸಿ ಪಿಡಿಒ ಶೋಭಾ.ಎಸ್,ಗುಜ್ಜಾಡಿ ಪಿಡಿಒ ನಾಗವೇಣಿ,ಹೊಸಾಡು ಮಿನಿ ಎಂಆರ್‍ಎಫ್ ಘಟಕದ ಮೇಲ್ವಿಚಾರಕಿ ಸುನೀತಾ ಮರವಂತೆ,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು,ಸಾಹಸ್ ಸಂಸ್ಥೆಯ ಪ್ರತಿನಿಧಿಗಳು,ವಿದ್ಯಾರ್ಥಿಗಳು,ಸಂಜೀವಿ ಸಂಘದ ಸದಸ್ಯರು,ಶಿಕ್ಷಕರು ಉಪಸ್ಥಿತರಿದ್ದರು.ಶಶಿಕಲಾ ಸ್ವಾಗತಿಸಿದರು.ಶಿಕ್ಷಕ ರಾಜೇಶ ನಿರೂಪಿಸಿ,ವಂದಿಸಿದರು.
ತ್ರಾಸಿ ಗ್ರಾಮ ಪಂಚಾಯತಿ ಮತ್ತು ಸಾಹಸ ಸಂಸ್ಥೆ ಹಾಗೂ ಕ್ಸಿಯಾವೋ ಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಎಸ್‍ಆರ್,ಕರಾವಳಿ ಕಾವಲು ಪಡೆ ಗಂಗೊಳ್ಳಿ,ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲಾ ವಿದ್ಯಾರ್ಥಿಗಳ ವತಿಯಿಂದ ಕುಂದಾಪುರ ತಾಲೂಕಿನ ತ್ರಾಸಿ ಬೀಚ್‍ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸಮುದ್ರ ಕಿನಾರೆಯಲ್ಲಿ ಬಿದ್ದ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.ಈ ಸಂದರ್ಭದಲ್ಲಿ ನಾನಾ ಸಂಸ್ಥೆಯ ಪ್ರತಿನಿಗಳು ಉಪಸ್ಥಿತರಿದ್ದರು.
ಕುಂದಾಪುರ:ಸಂಸ್ಕೃತಿ, ಸಂಪ್ರದಾಯ,ಆಚರಣೆಯ ಕುರಿತು ಅಭಿಮಾನವನ್ನು ಹೊಂದಿರುವ ಹೆಮ್ಮೆಯ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.…
ಕುಂದಾಪುರ:ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಯೋಧರಾದ ಅನೂಪ್ ಪೂಜಾರಿ ಅವರು ವಿಧ್ಯಾರ್ಥಿ ಜೀವನದಲ್ಲೆ ದೇಶ ಸೇವೆಯ ಕನಸು ಕಂಡು ಅದನ್ನ…
ಕುಂದಾಪುರ:ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಯೋಧರಾದ ಅನೂಪ್ ಪೂಜಾರಿ ಅವರು ವಿಧ್ಯಾರ್ಥಿ ಜೀವನದಲ್ಲೆ ದೇಶ ಸೇವೆಯ ಕನಸು ಕಂಡು ಅದನ್ನ…
ಕುಂದಾಪುರ:ತ್ರಾಸಿ ಬೀಚ್‍ನಲ್ಲಿ ಜೆಸ್ಕಿ ರೈಡ್ ಮೂಲಕ ರೈಡ್ ಮಾಡುತ್ತಿದ್ದ ಸಂದರ್ಭದಲ್ಲಿ ಜೆಸ್ಕಿ ರೈಡ್ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಮಗುಚಿ ಬಿದ್ದ…
ಬೆಂಗಳೂರು:ಹೊಟೇಲ್ ಸರ್ವಿಸ್ ಕ್ಷೇತ್ರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ವರ್ಷಗಳ ಕಾಲದ ಅನುಭವನ್ನು ಹೊಂದಿರುವ ಕುಂದಾಪುರ ತಾಲೂಕಿನ ಯೋಗೀಶ್ ಗಾಣಿಗ ನಾಗೂರು…
ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಮಂಗಳವಾರ ನಡೆಯಿತು.ಜಂಟಿ ಕಾರ್ಯದರ್ಶಿ ಭಗಿನಿ ಅವರು ಅಧ್ಯಕ್ಷತೆ ವಹಿಸಿ…