ಕುಂದಾಪುರ

ಮಂಡಾಡಿ ಹೋರ್ವರಮನೆಯ ಸಾಂಪ್ರದಾಯಿಕ ಕಂಬಳ ಮಹೋತ್ಸವ ಸಂಪನ್ನ

Share

ಕುಂದಾಪುರ:ಮಂಡಾಡಿ ಹೋರ್ವರಮನೆ ಕುಟುಂಬದವರ ನಡೆಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ಮಂಡಾಡಿ ಕಂಬಳ ಮಹೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಶುಕ್ರವಾರ ನಡೆಯಿತು.
ಕಂಬಳದ ದಿನ ಬೆಳಿಗ್ಗೆ ಕಂಬಳ ಗದ್ದೆಯ ಅಲಂಕಾರವನ್ನು ಮಾಡಲಾಗುತ್ತದೆ,ಧೂಮಾವತಿ ದೈವ,ದೇವರ ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಗುತ್ತದೆ ವಿಶಾಲವಾದ ಈ ಕಂಬಳ ಗದ್ದೆಯನ್ನು ತಳಿ ತೋರಣಗಳಿಂದ ಅಲಂಕಾರಿಸಲಾಗುತ್ತದೆ.
ಮಂಡಾಡಿ ಹೋರ್ವರಮನೆ ಕುಟುಂಬದವರ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಹಸಿರು ನಿಶಾನೆ ನೀಡಲಾಗುತ್ತದೆ.ಚಂಡೆ ವಾದ್ಯಗೋಷ್ಠಿಯೊಂದಿಗೆ ಮನೆ ಸದಸ್ಯರು ಸಮವಸ್ತ್ರ ಧರಿಸಿ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.ಈ ಬಾರಿ ಸೆನ್ಸಾರ್ ಮೂಲಕ ಕೋಣದ ಓಟದ ವೇಗದ ಮಿತಿಯನ್ನು ಅಳವಡಿಕೆ ಮಾಡಲಾಗಿದೆ.

ಜೋಡು ಕೆರೆ ಕಂಬಳ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು ಅವರು ದೀಪ ಬೆಳಗುವುದರ ಮೂಲಕ ಕಂಬಳವನ್ನು ಉದ್ಘಾಟಿಸಿ ಮಾತನಾಡಿ,ಕುಂದಾಪುರ ತಾಲೂಕಿನಲ್ಲಿ ಮೊದಲಿನಿಂದಲೂ ನಡೆದುಕೊಂಡ ಬಂದಂತಹ ಕಂಬಳ ಸಾಂಪ್ರದಾಯಿಕ ಕಂಬಳವಾಗಿದೆ. ಮಂಡಾಡಿ ಕಂಬಳ ಇಂದು ಸಾಂಪ್ರದಾಯಿಕ ಶೈಲಿಯಲ್ಲಿ ವಿಜೃಂಭಣೆಯಿಂದ ನಡೆದಿರುವುದು ಕಂಬಳದ ವೈಭವನ್ನು ಜಗತ್ತಿಗೆ ಸಾರಲಾಗಿದೆ.ಕುಂದಾಪುರ ಭಾಗದಲ್ಲಿ ನಡೆಯುವ ಸಾಂಪ್ರಾದಾಯಿಕ ಕಂಬಳಕ್ಕೆ ರಾಜ್ಯ ಸರ್ಕಾರ ಅನುದಾನವನ್ನು ನೀಡುವಲ್ಲಿ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರಕಾರವನ್ನು ಕೇಳಿಕೊಂಡರು.ಕುಂದಾಪುರ ಭಾಗದಲ್ಲಿಯೂ ಜೋಡು ಕೆರೆ ಕಂಬಳ ನಡೆಯುವಂತೆ ಪ್ರಯತ್ನಗಳು ನಡೆಯಲಿ ಎಂದು ಶುಭಹಾರೈಸಿದರು.

ಉದ್ಯಮಿ ಆದರ್ಶ ಶೆಟ್ಟಿ ಹೋರ್ವರಮನೆ ಮಂಡಾಡಿ ಮಾತನಾಡಿ,ಮಂಡಾಡಿ ಹೋರರ್ವರಮನೆ ಕಂಬಳವನ್ನು ಸಾಂಪ್ರದಾಯಿಕವಾಗಿ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ.ಕಂಬಳ ಎನ್ನುವುದು ರೈತ ಸಮುದಾಯದವರಿಗೆ ಹಬ್ಬವಿದ್ದಂತೆ ಶತ ಶತಮಾನಗಳ ಇತಿಹಾಸ ಹೊಂದಿರುವ ಕಂಬಳದ ಜನಪ್ರಿಯತೆ ಆಧುನಿಕ ಯುಗದಲ್ಲಿಯೂ ಜನ ಪ್ರೀತಿಗಳಿಸಿರುವುದು ಕಂಬಳಕ್ಕೆ ಸಿಕ್ಕ ವಿಶೇಷವಾದ ಮನ್ನಣೆ ಆಗಿದೆ ಎಂದು ಹೇಳಿದರು.ಮುಂದಿನಗಳಲ್ಲಿ ಕಂಬಳವೂ ಇನ್ನಷ್ಟು ವಿಜೃಂಭಣೆಯಿಂದ ಸಾಗಲು ಮನೆ ದೇವರಾದ ಕಾಡ್ತಿಯಮ್ಮ ಆರ್ಶೀವಾದ ನೀಡಲಿ ಎಂದು ದೇವರಲ್ಲಿ ಬೇಡಿಕೊಂಡರು.

ರತ್ನಾಕರ್ ಶೆಟ್ಟಿ ಮಾತನಾಡಿ,ಸಾಂಪ್ರದಾಯಿಕವಾಗಿ ನಡೆಯುವ ಮಂಡಾಡಿ ಹೋರ್ವರಮನೆ ಕಂಬಳಕ್ಕೆ 800 ವರ್ಷಗಳ ಇತಿಹಾಸವನ್ನು ಹೊಂದಿದೆ.ವರ್ಷದಿಂದ ವರ್ಷಕ್ಕೆ ಭಾಗವಹಿಸುವ ಕೋಣಗಳ ಸಂಖ್ಯೆ ಹೆಚ್ಚಾಗುತ್ತಿದೆ,ಕಂಬಳ ಪ್ರೇಮಿಗಳ ಸಂಖ್ಯೆಯೂ ಅಧಿಕವಾಗುತ್ತಿದೆ,ಕಂಬಳದ ಕೋಣಗಳ ಎಲ್ಲಾ ಯಜಮಾನರಿಗೆ ಗೌರವ ಧನ ನೀಡಲಾಗುತ್ತಿದ್ದು,ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಕಟುಂಬದಿಂದ ಇನ್ನಷ್ಟು ಶ್ರಮಿಸಲಿದೆ ಎಂದು ಎಂದು ಹೇಳಿದರು.ಮಂಡಾಡಿ ಕಂಬಳ ಊರ ಹಬ್ಬದಂತೆ ನಡೆಯುತ್ತಿದ್ದು,ಗ್ರಾಮಸ್ಥರ ಸಹಕಾರ ಮತ್ತು ದೈವ ದೇವರುಗಳ ಕೃಪೆಯಿಂದ ಸಾಧ್ಯವಾಗಿದೆ ಎಂದರು.

ಉದ್ಯಮಿ ಅಶೋಕ ಶೆಟ್ಟಿ ಮಾತನಾಡಿ,ಮಂಡಾಡಿ ಹೋರರ್ವರಮನೆ ಮನೆ ಕಂಬಳ ಈ ವರ್ಷ ಅದ್ದೂರಿಯಾಗಿ ನಡೆದಿದೆ.ಕಂಬಳದ ಕೋಣಗಳನ್ನು ಮತ್ತು ಅದರ ಯಜಮಾನರನ್ನು ಗೌರವದಿಂದ ನಡೆಸಿಕೊಳ್ಳುತ್ತಿರುವ ರೀತಿ ಎಲ್ಲರಿಗೂ ಮಾದರಿ ಆಗಿರುವಂತಹದ್ದು.ಜಗತ್ತಿನಾದ್ಯಂತ ಕಂಬಳದ ವೈಭವ ಪಸರಿಸಲಿ ಎಂದು ಶುಭ ಹಾರೈಸಿದರು.

ಉದ್ಯಮಿ ಸಂತೋಷ ಶೆಟ್ಟಿ ಮಾತನಾಡಿ,ಸಾಂಪ್ರದಾಯಿಕವಾಗಿ ನಡೆಯುವ ಮಂಡಾಡಿ ಕಂಬಳೋತ್ಸವಕ್ಕೆ ಕುಟುಂಬದವರ ಸಹಕಾರ ಅಮೂಲ್ಯವಾದದ್ದು ಎಂದು ಬಣ್ಣಿಸಿದರು.

ಸಂದರ್ಶ ಶೆಟ್ಟಿ ಮಾತನಾಡಿ,ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ಯುವಕರ ಪಾತ್ರ ಬಹಳಷ್ಟು ಪ್ರಮುಖವಾದದ್ದು,ಇಂದಿನ ಯುವ ಪೀಳಿಗೆ ಕಂಬಳವನ್ನು ನೋಡುವುದು ಮಾತ್ರವಲ್ಲದೆ ಕೋಣಗಳ ಸಾಕಾಣಿಕೆಯಲ್ಲೂ ಹಿರಿಯರ ಜತೆ ಕೈಜೋಡಿಸಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ.ಬಿ ಶಾಂತರಾಮ ಶೆಟ್ಟಿ,ಸಾಂಪ್ರದಾಯಿಕ ಕಂಬಳ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ,ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ,ವೆಂಕಟ ಪೂಜಾರಿ,ಆನಂದ,ಬಾಲಣ್ಣ ಹೋರ್ವ,ರತ್ನಾಕರ ಶೆಟ್ಟಿ ಮಂಡಾಡಿ,ಎನ್ ಮಂಜಯ್ಯ ಶೆಟ್ಟಿ,ಸನಾತ್ ಶೆಟ್ಟಿ ಮಂಡಾಡಿ,ಬಾರ್ಕೂರು ಶಾಂತರಾಮ ಶೆಟ್ಟಿ,ಮಂಡಾಡಿ ಹೋರ್ವರಮನೆ ಕುಟುಂಬಿಕರು ಮತ್ತು ಹೊಂಬಾಡಿ ಮತ್ತು ಮಂಡಾಡಿ ಸಮಸ್ತ ಗ್ರಾಮಸ್ಥರು,ಕಂಬಳ ಪ್ರೇಮಿಗಳು ಉಪಸ್ಥಿತರಿದ್ದರು.
ಸ್ಪರ್ಧೆಗಳ ವಿವರ ಕೋಣಗಳ ಹಗ್ಗದ ಓಟ,ಕೋಣಗಳ ಹಗ್ಗದ ಓಟ ಹಿರಿಯ ವಿಭಾಗ,ಕೋಣಗಳ ಹಗ್ಗದ ಓಟ ಕಿರಿಯ ವಿಭಾಗ,ಕೋಣಗಳ ಹಗ್ಗದ ಓಟ ಅತಿ ಕಿರಿಯ ವಿಭಾಗ,ಹಾಗೆ ಯುವಕರಿಗೆ ಕೆಸರುಗದ್ದೆ ಓಟ ನಡೆಯಿತು ಬಂದಂತಹ ಎಲ್ಲಾ ಕೋಣೆಗಳಿಗೂ ಕೂಡ ಗೌರವಧನವನ್ನು ನೀಡಿ ಗೌರವಿಸಲಾಯಿತು.
ವಿಜೇತರಾದ ಕೋಣಗಳ ಮಾಲೀಕರಿಗೆ ಮತ್ತು ಕ್ರೀಡಾಳುಗಳಿಗೆ ನಗದು ಮತ್ತು ಶಾಶ್ವತ ಫಲಕದೊಂದಿಗೆ ಪುರಸ್ಕರಿಸಲಾಯಿತು.

ರತ್ನಾಕರ ಶೆಟ್ಟಿ, ಹರ್ಷಿತಾ ಶೆಟ್ಟಿ,ಜಯರಾಮ ಶೆಟ್ಟಿ, ಸುಧಾಕರ ಕೊಠಾರಿ ಅವರು ಮಂಡಾಡಿ ಕಂಬಳದ ಯಶಸ್ಸಿಗೆ ಬಹಳಷ್ಟು ಶ್ರಮವನ್ನು ವಹಿಸಿದ್ದರು.

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

4 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

5 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago