ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿ 12 ವರ್ಷಗಳ ಹಿಂದೆ ನಿರ್ಮಾಣಗೊಂಡ ತ್ರಾಸಿ ಡಾನ್ ಬೋಸ್ಕೊ ಶಾಲೆ ಶಿಕ್ಷಣ ರೂಪದಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ.ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಜತೆಗೆ ಪಠ್ಯೇತರ ಚಟುವಟಿಯಲ್ಲಿಯೂ ಭಾಗ ವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಜಯಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಡಾನ್ ಬೋಸ್ಕೊ ಶಾಲೆಯ ಪ್ರಿನ್ಸಿಪಾಲ್ ಫಾ.ಮ್ಯಾಕ್ಸಿಮ್ ಡಿಸೋಜ ಅವರು ಮಾತನಾಡ
ಕುಂದಾಪುರ ತಾಲೂಕಿನ ತ್ರಾಸಿ ಡಾನ್ ಬೋಸ್ಕೊ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದ ಜತೆಗೆ ಇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರ ಪ್ರತಿಭೆ ಹೊರಬರಲು ಸಹಕಾರಿ ಆಗುತ್ತೆ ಎಂದು ಹೇಳಿದರು.ನುರಿತವಾದ ಶಿಕ್ಷಕವೃಂದದಿಂದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರಕುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಾಲೆ ವಿದ್ಯೆಗೆ ಹೆಚ್ಚಿನ ಒತ್ತನ್ನು ನೀಡುವಲ್ಲಿ ಕೆಲಸ ಮಾಡುತ್ತಿದೆ ಎಂದರು.ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ದೃಷ್ಟಿಯಿಂದ ಇವೊಂದು ಸಾಂಸ್ಕøತಿಕ ಚಟುವಟಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಡಾ.ಜಾನ್ಸನ್ ಡಿಲೀಮಾ ಮಾತನಾಡಿ,ಮಕ್ಕಳ ಚಿಕ್ಕ ಚಿಕ್ಕ ಯಶಸ್ಸನ್ನು ಕೊಂಡಾಡಿದಾಗ ಇನ್ನಷ್ಟು ಸಾಧನೆ ಮಾಡಲು ಅವರಿಗೆ ಪ್ರೇರಣೆ ನೀಡುತ್ತದೆ.ವಿದ್ಯಾರ್ಥಿಗಳು ಚಿಂತನಾ ಶೀಲರಾಗುವುದರಿಂದ ಅವರ ಮನಸ್ಸು ಕೂತುಹಲಕಾರಿ ಯಿಂದ ಕೂಡಿರುತ್ತದೆ.ಪಾಠದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದನೆ ಮಾಡಿಕೊಳ್ಳ ಬಹುದು ಎಂದರು.ವಿದ್ಯಾರ್ಥಿಗಳು,ಶಿಕ್ಷಕರು,ಪೆÇೀಷಕರು ಎನ್ನುವ ಕೊಂಡಿ ಕೂಡಿಕೊಂಡಾಗ ಮಾತ್ರ ಸಕರಾತ್ಮಕ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.ಒಂದು ವಿದ್ಯಾ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ವಿದ್ಯಾರ್ಥಿಗಳು,ಶಿಕ್ಷಕರು,ಪೆÇೀಷಕರ ಪ್ರೆÇೀತ್ಸಾಹ ಅಗತ್ಯವಾಗಿದೆ ಎಂದು ಹೇಳಿದರು.
ಪಿಟಿಎ ಸಂತೋಷ ಪಾಯಸ್ ಮಾತನಾಡಿ,132 ದೇಶಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ಹೊಂದಿರುವ ಡಾನ್ ಬೋಸ್ಕೊ ಸಂಸ್ಥೆ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಾ ಬಂದಿದೆ.ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಪೂರಕವಾದ ವಾತಾವರಣವನ್ನು ಹೊಂದಿರುವ ಶಾಲೆಯಲ್ಲಿ ಮಕ್ಕಳು ಲವಲವಿಕೆಯಿಂದ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಇಲ್ಲಿನ ವಾತಾವರಣವನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದು ಹೇಳಿದರು.ಶಿಕ್ಷಕರು ಮತ್ತು ಶಾಲೆ ಆಡಳಿತ ಮಂಡಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸಾಕಷ್ಟು ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಕಾರ್ಯದರ್ಶಿ ಆಶಾ ಕರ್ವಾಲೊ ಮಾತನಾಡಿ,ನೈಸರ್ಗಿಕವಾದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಮಕ್ಕಳ ಬೌದ್ಧಿಕ ಶಕ್ತಿ ವೃದ್ಧಿಯಾಗುವುದರ ಜತೆಗೆ,ಒತ್ತಡ ರಹಿತವಾದ ಶಿಕ್ಷಣವನ್ನು ಪಡೆಯಲು ಅನುಕೂಲಕರವಾಗಿದೆ.ಮಕ್ಕಳ ಕಲಿಕಾ ಚಟುವಟಿಕೆಗೆ ಶುಭವಾಗಲಿ ಎಂದು ಶುಭಹಾರೈಸಿದರು.
ಡಾನ್ ಬೋಸ್ಕೋ ಕೊಂಕಣ ಪ್ರಾಂತೀಯ ಫಾ.ಕ್ಲೇವ್ ಟೆಲ್ಲಿಸ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ತ್ರಾಸಿ ಚರ್ಚಿನ ಧರ್ಮಗುರು ಫಾ.ರೋಜರಿಯೋ ಫೆರ್ನಾಂಡಿಸ್,ಫಾ.ರೋಷನ್ ಡಿಸೋಜ,ವೈಸ್ ಪ್ರಿನ್ಸಿಪಾಲ್ ಫಾ.ಬ್ರಯ್ಸ್ ರೋಡ್ರಿಗಸ್ ಮತ್ತು ಮಕ್ಕಳ ಪೆÇೀಷಕರು,ವಿದ್ಯಾರ್ಥಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.ಫಾ.ರೋಶನ್ ಸ್ವಾಗತಿಸಿದರು.ವಿದ್ಯಾರ್ಥಿವೃಂದವರು ನಿರೂಪಿಸಿದರು.ಶಾಲಾ ನಾಯಕ ರೀಷಿ ಪೂಜಾರಿ ಮತ್ತು ಜೆಸ್ಸೆಲ್ ಕೋಸ್ಟಾ ವಂದಿಸಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.
ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಉಡುಪಿ ವತಿಯಿಂದ ನವಚೇತನ ಸಮಾವೇಶ ಹಾಗೂ ಕುಂದಾಪುರ ತಾಲೂಕು…
ಉಡುಪಿ:ನೀಲಾವರದಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿನ ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ…
ಮಂಗಳೂರು:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ.ಹವಾಮಾನ ವೈಪರಿತ್ಯ ದಿಂದಾಗಿ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಜಿಲ್ಲೆಯ…
ಕುಂದಾಪುರ: ಕೃಷಿಕರಾದ ನಾವುಂದ ಕಾರಂತರ ಹಿತ್ತಲು ಸೂರ ಪೂಜಾರಿಯವರ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಭತ್ತವನ್ನು ಶೇಕರಿಸಿಡುವ ಕುಂದಾಪುರದ ಆಡು ಭಾಷೆಯಲ್ಲಿ…
https://youtu.be/Nuq2NNGkcP4?si=GBDHfmSHQBwcQO7R ಕುಂದಾಪುರ:ಬೆಳ್ವೆ ಸಮೀಪದ ಗೊಮ್ಮೋಲ್ಚರ್ಚ್ ಹಿಂಭಾಗದಿಂದಒಳ್ಳೆ ಹೊಂಡ ಕಜ್ಕೆ ಸಂತೆಕಟ್ಟೆ ಸಂಪರ್ಕದ ಒಳ್ಳೆ ಹೊಂಡ ಬಳಿಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಮಧ್ಯಾಹ್ನದ…
https://youtu.be/Nuq2NNGkcP4?si=GBDHfmSHQBwcQO7R ಕುಂದಾಪುರ:2000 ಇಸವಿಯಲ್ಲಿ ಆರಂಭಗೊಂಡಿರುವ ಡಾನ್ ಬಾಸ್ಕೊ ತ್ರಾಸಿ-ಹೊಸಾಡು ಸಂಸ್ಥೆಗೆ 25 ವರ್ಷ ತುಂಬಿರುವುದರಿಂದ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು…