ಕುಂದಾಪುರ

ಹೆಮ್ಮಾಡಿ:ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಕೆ

Share

ಕುಂದಾಪುರ:ಕರ್ತವ್ಯಪಾಲನೆ ಎನ್ನುವುದು ಉಸಿರು ಇರುವ ತನಕ ನಮ್ಮನ್ನು ಸದಾ ಎಚ್ಚರಗೊಳ್ಳುವಂತೆ ಮಾಡುತ್ತದೆ,ನಾವು ಮಾಡುವ ಸಾಧನೆಗಳು ಮಾತನಾಡುವಂತೆ ಇರಬೇಕು ವಿನಹ,ಮಾತುಗಳೇ ಸಾಧನೆ ಆಗಬಾರದೆಂದು ಹಿರಿಯ ನಿವೃತ್ತ ಶಿಕ್ಷಕ ರವೀಂದ್ರನಾಥ ಶೆಟ್ಟಿ ಹೇಳಿದರು.
ಬೈಂದೂರು ವಲಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಗುರುವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಷ್ಯವರ್ಗದವರಿಂದ ಗುರುವಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಗುರುವಂದನೆ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷರಾದ ಹೆಚ್.ಮುತ್ತಯ್ಯ ಶೆಟ್ಟಿ,ಚಂದ್ರಶೇಖರ ಶೆಟ್ಟಿ,ಶಿವರಾಮ ಶೆಟ್ಟಿ,ಮರಿಯಾ ಮುಗ್ದಲಿನಾ ಕ್ರಾಸ್ತಾ,ಕೆ.ರವೀಂದ್ರನಾಥ ಶೆಟ್ಟಿ,ರಘುರಾಮ್ ನಾಯಕ್,ಎಂ.ವೆಂಕ ಹಾಂಡ,ಜಸಿಂತ್ ಜೂಡಿತ್ ಪಾಯ್ಸ್,ಭಾಸ್ಕರ ಶೆಟ್ಟಿ,ಸಾದಮಿನಿ ಚಂದ್ರಾವತಿ,ಸುಬ್ರಹ್ಮಣ್ಯ ಉಡುಪ,ಕೆ.ಆನಂದ ಶೆಟ್ಟಿ,ಶಂಕರ ಮಡಿವಾಳ,ಎಂ.ಚಂದ್ರ ನಾಯ್ಕ,ವಿಶಾಲಾಕ್ಷಿ ನರಸಿಂಹ ನಾಯಕ್,ರಮೇಶ ಮಹಾಲೆ ಹಾಗು ಸೇವಾ ನಿವೃತ್ತಿ ಹೊಂದಿದ ಶಾಲೆಯ ದೈಹಿಕ ಶಿಕ್ಷಕಿ ಜೂಲಿಯಟ್ ಒಲಿಂಪಿಯಾ ಲಾಜರಸ್ ಅವರನ್ನು ಸನ್ಮಾನಿಸಲಾಯಿತು.ಎಸ್‍ಡಿಎಂಸಿ ಅಧ್ಯಕ್ಷ ರಾಘವೇಂದ್ರ ದೇವಾಡಿಗ,ಪಂಚಾಯಿತಿ ಸದಸ್ಯ ರಾಘವೇಂದ್ರ ಪೂಜಾರಿ,ಶೈನಿ ಜೇಮ್ಸ್ ಕ್ರಾಸ್ತಾ,ಜಲಜ,ಸಿಲ್ವೆಸ್ಟರ್ ರಿಚರ್ಡ್ ಡಾಯಸ್,ಜನತಾ ಹೆಮ್ಮಾಡಿ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಮೊಗವೀರ ಮತ್ತು ಹೆಸ್ಕೂಲ್ ಮುಖ್ಯ ಶಿಕ್ಷಕ ಮಂಜು ಕಾಳವಾರ,ಮಮತಾ ಆಚಾರ್ಯ,ಶಂಕರ,ಕಿರಣ,ಶಿಕ್ಷಣ ಸಂಯೋಜಕ ಯೋಗೀಶ್,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾಡಿಗ,ರಾಮನಾಥ ಮೇಸ್ತ,ಈಶ್ವರ,ಯೋಗ ಶಿಕ್ಷಕಿ ಸುಜಾತ,ದೇವಪ್ಪ ಪೂಜಾರಿ,ಸುಮ,ಶಾಂತರಾಮ ಭಟ್,ಹರೀಶ್ ಭಂಡಾರಿ,ವಿದ್ಯಾರ್ಥಿ ನಾಯಕಿ ನಿಶಾ,ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ,ಕುಂದಾಪುರ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್,ಸಾಧು ಎಸ್ ಬಿಲ್ಲವ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕ ದಿವಾಕರ ಸ್ವಾಗತಿಸಿದರು.ಶಿಕ್ಷಕ ಜಗದೀಶ ಶೆಟ್ಟಿ ನಿರೂಪಿಸಿದರು.ಸುಶೀಲಾ ವಂದಿಸಿದರು.ಹಳೆ ವಿದ್ಯಾರ್ಥಿ ಶಿಕ್ಷಕರಾದ ಉದಯ ಬಳೆಗಾರ ಅವರು ಗುರುವಂದನೆಯನ್ನು ಸಲ್ಲಿಸಿ ಮಾತನಾಡಿದರು.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

1 month ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

2 months ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

2 months ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

3 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

3 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 months ago