ಕುಂದಾಪುರ:ಕರ್ತವ್ಯಪಾಲನೆ ಎನ್ನುವುದು ಉಸಿರು ಇರುವ ತನಕ ನಮ್ಮನ್ನು ಸದಾ ಎಚ್ಚರಗೊಳ್ಳುವಂತೆ ಮಾಡುತ್ತದೆ,ನಾವು ಮಾಡುವ ಸಾಧನೆಗಳು ಮಾತನಾಡುವಂತೆ ಇರಬೇಕು ವಿನಹ,ಮಾತುಗಳೇ ಸಾಧನೆ ಆಗಬಾರದೆಂದು ಹಿರಿಯ ನಿವೃತ್ತ ಶಿಕ್ಷಕ ರವೀಂದ್ರನಾಥ ಶೆಟ್ಟಿ ಹೇಳಿದರು.
ಬೈಂದೂರು ವಲಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಗುರುವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಷ್ಯವರ್ಗದವರಿಂದ ಗುರುವಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಗುರುವಂದನೆ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷರಾದ ಹೆಚ್.ಮುತ್ತಯ್ಯ ಶೆಟ್ಟಿ,ಚಂದ್ರಶೇಖರ ಶೆಟ್ಟಿ,ಶಿವರಾಮ ಶೆಟ್ಟಿ,ಮರಿಯಾ ಮುಗ್ದಲಿನಾ ಕ್ರಾಸ್ತಾ,ಕೆ.ರವೀಂದ್ರನಾಥ ಶೆಟ್ಟಿ,ರಘುರಾಮ್ ನಾಯಕ್,ಎಂ.ವೆಂಕ ಹಾಂಡ,ಜಸಿಂತ್ ಜೂಡಿತ್ ಪಾಯ್ಸ್,ಭಾಸ್ಕರ ಶೆಟ್ಟಿ,ಸಾದಮಿನಿ ಚಂದ್ರಾವತಿ,ಸುಬ್ರಹ್ಮಣ್ಯ ಉಡುಪ,ಕೆ.ಆನಂದ ಶೆಟ್ಟಿ,ಶಂಕರ ಮಡಿವಾಳ,ಎಂ.ಚಂದ್ರ ನಾಯ್ಕ,ವಿಶಾಲಾಕ್ಷಿ ನರಸಿಂಹ ನಾಯಕ್,ರಮೇಶ ಮಹಾಲೆ ಹಾಗು ಸೇವಾ ನಿವೃತ್ತಿ ಹೊಂದಿದ ಶಾಲೆಯ ದೈಹಿಕ ಶಿಕ್ಷಕಿ ಜೂಲಿಯಟ್ ಒಲಿಂಪಿಯಾ ಲಾಜರಸ್ ಅವರನ್ನು ಸನ್ಮಾನಿಸಲಾಯಿತು.ಎಸ್‍ಡಿಎಂಸಿ ಅಧ್ಯಕ್ಷ ರಾಘವೇಂದ್ರ ದೇವಾಡಿಗ,ಪಂಚಾಯಿತಿ ಸದಸ್ಯ ರಾಘವೇಂದ್ರ ಪೂಜಾರಿ,ಶೈನಿ ಜೇಮ್ಸ್ ಕ್ರಾಸ್ತಾ,ಜಲಜ,ಸಿಲ್ವೆಸ್ಟರ್ ರಿಚರ್ಡ್ ಡಾಯಸ್,ಜನತಾ ಹೆಮ್ಮಾಡಿ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಮೊಗವೀರ ಮತ್ತು ಹೆಸ್ಕೂಲ್ ಮುಖ್ಯ ಶಿಕ್ಷಕ ಮಂಜು ಕಾಳವಾರ,ಮಮತಾ ಆಚಾರ್ಯ,ಶಂಕರ,ಕಿರಣ,ಶಿಕ್ಷಣ ಸಂಯೋಜಕ ಯೋಗೀಶ್,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾಡಿಗ,ರಾಮನಾಥ ಮೇಸ್ತ,ಈಶ್ವರ,ಯೋಗ ಶಿಕ್ಷಕಿ ಸುಜಾತ,ದೇವಪ್ಪ ಪೂಜಾರಿ,ಸುಮ,ಶಾಂತರಾಮ ಭಟ್,ಹರೀಶ್ ಭಂಡಾರಿ,ವಿದ್ಯಾರ್ಥಿ ನಾಯಕಿ ನಿಶಾ,ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ,ಕುಂದಾಪುರ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್,ಸಾಧು ಎಸ್ ಬಿಲ್ಲವ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕ ದಿವಾಕರ ಸ್ವಾಗತಿಸಿದರು.ಶಿಕ್ಷಕ ಜಗದೀಶ ಶೆಟ್ಟಿ ನಿರೂಪಿಸಿದರು.ಸುಶೀಲಾ ವಂದಿಸಿದರು.ಹಳೆ ವಿದ್ಯಾರ್ಥಿ ಶಿಕ್ಷಕರಾದ ಉದಯ ಬಳೆಗಾರ ಅವರು ಗುರುವಂದನೆಯನ್ನು ಸಲ್ಲಿಸಿ ಮಾತನಾಡಿದರು.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…