ಕುಂದಾಪುರ:ಲಯನ್ಸ್ ಕ್ಲಬ್ ಹಕ್ಲಾಡಿ,ರೋಟರಿ ಕ್ಲಬ್ ಗಂಗೊಳ್ಳಿ,ಇಂಡಿಯನ್ ರೆಡ್‍ಕ್ರಾಸ್ ಕುಂದಾಪುರ,ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ,ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ,ಪಂಚಂಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ,ಗ್ರಾಮ ಪಂಚಾಯತ್ ಹೊಸಾಡು ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಸಂಯುಕ್ತ ಆಶ್ರಯದಲ್ಲಿ ಹೊಸಾಡು ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ,ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಭಾನುವಾರ ನಡೆಯಿತು.
ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುಮಾರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವುದರಿಂದ ರೋಗಿಗಳಿಗೆ ಸೂಕ್ತವಾದ ಸಮಯದಲ್ಲಿ ರಕ್ತವನ್ನು ಪೂರೈಕೆ ಮಾಡಲು ಬಹಳಷ್ಟು ಅನಾನುಕೂಲತೆಗಳು ಎದುರಾಗುತ್ತಿರುವ ಸಂದರ್ಭವನ್ನು ನಾವು ನೋಡ ಬಹುದಾಗಿದೆ.ರಕ್ತದ ಅಭಾವವನ್ನು ತಗ್ಗಿಸಲು ಪೇಟೆ,ಪಟ್ಟಣಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ರಕ್ತದಾನದಂತಹ ಶಿಬಿರಗಳನ್ನು ಆಂದೋಲನದ ರೀತಿಯಲ್ಲಿ ಆಯೋಜನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಝೋನ್ ಚೆರ್ ಪರ್ಸನ್ ಜಗದೀಶ್ ಶೆಟ್ಟಿ ಕುದ್ರುಕೋಡು ಮಾತನಾಡಿ,ಹಳ್ಳಿ ಹಳ್ಳಿಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ನಾಗೇಂದ್ರ ಪೈ ಮಾತನಾಡಿ,30 ಕ್ಕೂ ಅಧಿಕ ವರ್ಷಗಳಿಂದ ಗಂಗೊಳ್ಳಿ ರೋಟರಿ ಕ್ಲಬ್ ಸಾಮಾಜಿಕ ಚಟುವಟಿಕೆ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ.ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಕೆಲಸಗಳನ್ನು ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಅಧ್ಯಕ್ಷ ಗಣಪಯ್ಯ ಶೆಟ್ಟಿ ಬಾಳೆಮನೆ ಮಾತನಾಡಿ,ಜನರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಸಂಘಟನೆಗಳ ಉದ್ದೇಶ ಈಡೇರಿಕೆ ಆಗುತ್ತದೆ ಎಂದು ಹೇಳಿದರು.
ಹಕ್ಲಾಡಿ ಪಂಚಾಯಿತಿ ಉಪಾಧ್ಯಕ್ಷ ಸುಭಾಶ ಶೆಟ್ಟಿ ಹೊಳ್ಮಗೆ,ರೆಡ್ ಕ್ರಾಸ್ ಸಂಸ್ಥೆಯ ಎಸ್.ಜಯಕರ ಶೆಟ್ಟಿ,ಪಾರ್ವತಿ ಮಹಾಬಲ ಟ್ರಸ್ಟ್ ಮುದ್ದುಮನೆ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ,ಮರವಂತೆ ಆಸ್ಪತೆ ವೈದ್ಯಾಧಿಕಾರಿ ಗಣೇಶ್ ಭಟ್,ಹೊಸಾಡು ಶಾಲೆ ಎಸ್‍ಡಿಎಂಸಿ ಅಧ್ಯಕ್ಷೇ ರೇಖಾ,ಹೊಸಾಡು ಪಿಡಿಒ ಪಾರ್ವತಿ,ಹೊಸಾಡು ಶಾಲೆ ಮುಖ್ಯ ಶಿಕ್ಷಕ ರಾಜೇಶ್ ಹಾಗೂ ರೋಟರಿ ಮತ್ತು ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.ನಾಗೇಂದ್ರ ಪೈ ಸ್ವಾಗತಿಸಿದರು.ರಾಮನಾಥ್ ನಾಯಕ್ ನಿರೂಪಿಸಿದರು.ಸಂಜೀವ ಬಿಲ್ಲವ ವಂದಿಸಿದರು.
ಕುಂದಾಪುರ:ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಯೋಧರಾದ ಅನೂಪ್ ಪೂಜಾರಿ ಅವರು ವಿಧ್ಯಾರ್ಥಿ ಜೀವನದಲ್ಲೆ ದೇಶ ಸೇವೆಯ ಕನಸು ಕಂಡು ಅದನ್ನ…
ಕುಂದಾಪುರ:ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಯೋಧರಾದ ಅನೂಪ್ ಪೂಜಾರಿ ಅವರು ವಿಧ್ಯಾರ್ಥಿ ಜೀವನದಲ್ಲೆ ದೇಶ ಸೇವೆಯ ಕನಸು ಕಂಡು ಅದನ್ನ…
ಕುಂದಾಪುರ:ತ್ರಾಸಿ ಬೀಚ್‍ನಲ್ಲಿ ಜೆಸ್ಕಿ ರೈಡ್ ಮೂಲಕ ರೈಡ್ ಮಾಡುತ್ತಿದ್ದ ಸಂದರ್ಭದಲ್ಲಿ ಜೆಸ್ಕಿ ರೈಡ್ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಮಗುಚಿ ಬಿದ್ದ…
ಬೆಂಗಳೂರು:ಹೊಟೇಲ್ ಸರ್ವಿಸ್ ಕ್ಷೇತ್ರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ವರ್ಷಗಳ ಕಾಲದ ಅನುಭವನ್ನು ಹೊಂದಿರುವ ಕುಂದಾಪುರ ತಾಲೂಕಿನ ಯೋಗೀಶ್ ಗಾಣಿಗ ನಾಗೂರು…
ಕುಂದಾಪುರ:ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಮಂಗಳವಾರ ನಡೆಯಿತು.ಜಂಟಿ ಕಾರ್ಯದರ್ಶಿ ಭಗಿನಿ ಅವರು ಅಧ್ಯಕ್ಷತೆ ವಹಿಸಿ…
ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿ ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಶೀಘ್ರವಾಗಿ ತನ್ನ ಶೈಕ್ಷಣಿಕ ವಿಶೇಷತೆಯಿಂದ ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕವಾಗಿ ಗುರುತಿಸಿಕೊಂಡ ಹೆಗ್ಗಳಿಕೆಗೆ…