ಕುಂದಾಪುರ:ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು,ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ, ಹಾಗೂ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ,ಯಡಾಡಿ-ಮತ್ಯಾಡಿ ಇದರ ಸಹಯೋಗದಲ್ಲಿ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದೀಪಾವಳಿಯ ಸಾಂಪ್ರದಾಯಿಕ ಆಚರಣೆಗಳಾದ ಗೋಪೂಜೆ,ಬಲೀಂದ್ರ ಕೂಗುವುದು,ತುಳಸಿ ಪೂಜೆ,ಕೃಷಿ ಪರಿಕರ ಮತ್ತು ಸರಸ್ವತಿ ಪೂಜೆಯನ್ನು ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು.
ಕುಂದಕನ್ನಡದ ರಾಯಬಾರಿ,ಗ್ರಾವಿಟಿ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷರಾಗಿರುವ ಮನು ಹಂದಾಡಿಯವರು ವಿದ್ಯಾರ್ಥಿಗಳಿಗೆ ದೀಪಾವಳಿ ಸಂದೇಶವನ್ನು ನೀಡುತ್ತಾ ಮಾತನಾಡಿ,ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕøತಿ,ಪರಂಪರೆ ಬಗ್ಗೆ ಕಾಳಜಿ ಮತ್ತು ತಿಳುವಳಿಕೆ ಕಡಿಮೆಯಾಗುತ್ತಿದ್ದು ಎಕ್ಸಲೆಂಟ್ ಸಮೂಹ ಸಂಸ್ಥೆ ಹಮ್ಮಿಕೊಂಡಿರುವ ಗೋಪೂಜೆ,ತುಳಸಿ ಪೂಜೆ,ಸರಸ್ವತಿ ಪೂಜೆಯಂತಹ ದೀಪಾವಳಿಯ ಸಾಂಪ್ರದಾಯಿಕ ಪೂಜೆಯು ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕøತಿ ಮತ್ತು ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದರು.
ಸಂಸ್ಥೆಯ ಸುಜ್ಞಾನ ಎಜುಕೇಶನಲ್ ಟ್ರಸ್ಟ್‍ನ ಅಧ್ಯಕ್ಷರಾಗಿರುವ ಡಾ. ರಮೇಶ ಶೆಟ್ಟಿ ಮಾತನಾqಡಿ,ನಮ್ಮ ಹಿರಿಯರು ಆಚರಿಸಿದ ಹಬ್ಬಗಳು,ಆಚರಣೆಗಳ ಮಹತ್ವ ವಿದ್ಯಾರ್ಥಿಗಳಿಗೆ ಸಾರಬೇಕು,ನಮ್ಮ ನಾಡು-ನುಡಿ, ನೆಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಬೇಕು ಎಂಬ ಕಾರಣಕ್ಕಾಗಿ ಈ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ,ಸಂಸ್ಥೆಯ ವಿದ್ಯಾರ್ಥಿಗಳು ಮನೆಯವರನ್ನು ಬಿಟ್ಟು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‍ನಲ್ಲಿದ್ದಾರೆ ಈ ಸಂದರ್ಭದಲ್ಲಿ ಅವರಿಗೆ ಮನೆಯಲ್ಲಿ ಆಚರಿಸುವ ಯಾವುದೇ ಹಬ್ಬಗಳಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಎಲ್ಲಾ ಹಬ್ಬಗಳನ್ನು ಸಂಪ್ರದಾಯ ಬದ್ದವಾಗಿ ಆಚರಿಸಲಾಗುತ್ತದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್‍ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ದೀಪಾವಳಿ ಸಾಂಪ್ರದಾಯಿಕ ಪೂಜೆ
ದೀಪಾವಳಿಯ ಆಚರಣೆಯ ಸಂದರ್ಭದಲ್ಲಿ ಕುಂದಾಪುರದ ಎಕ್ಸಲೆಂಟ್ ಕಾಲೇಜಿನ ಆವರಣ ಹಬ್ಬದಂತೆ ಕಂಗೊಳಿಸುತಿತ್ತು.ವಿದ್ಯಾರ್ಥಿಗಳೆಲ್ಲಾ ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು ಬಹಳ ಉತ್ಸಾಹದಿಂದ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಎಕ್ಸಲೆಂಟ್ ಆವರಣದಲ್ಲಿ ಗೋಪೂಜೆಗೆ ದನ ಮತ್ತು ಕರು ಶೃಂಗಾರಗೊಂಡಿರುವುದು ಎಲ್ಲರ ಕೂತುಹಲ ಕೆರಳಿಸಿತು. ಬೃಹತಾಕಾರದ ತುಳಸಿ ಕಟ್ಟೆಯನ್ನು ಹೂವಿನಿಂದ ಶೃಂಗಾರಗೊಳಿಸಲಾಗಿತ್ತು.
ಬಲೀಂದ್ರ ಕರೆಯುವ ವಿಧಿ – ವಿಧಾನಗಳನ್ನು ಸಂಪ್ರದಾಯಕ್ಕೆ ತಕ್ಕಂತೆ ಸಿದ್ಧಗೊಳಿಸಲಾಗಿತ್ತು. ಕೃಷಿ ಪರಿಕರಗಳಾದ ನೇಗಿಲು-ನೊಗ, ಹಾರೆ, ಕತ್ತಿ ಹಾಗೂ ಇತರ ಪರಿಕರಗಳನ್ನು ಪೂಜೆಗೆ ಸಿದ್ಧಗೊಳಿಸಿದ್ದು ವಿದ್ಯಾರ್ಥಿಗಳಿಗೆ ಹಳೆಯ ಕೃಷಿ ಪರಿಕರಗಳ ಬಗ್ಗೆ ಕುತೂಹಲ ಹೆಚ್ಚಿಸಿತು. ಒಟ್ಟಾರೆ ಅಪ್ಪಟ ಭಾರತೀಯ ಸಂಸ್ಕøತಿಯ ದೀಪಾವಳಿ ಎಕ್ಸಲೆಂಟ್ ಆವರಣದಲ್ಲಿ ಕಂಗೊಳಿಸುತ್ತಿದ್ದು ವಿದ್ಯಾರ್ಥಿಗಳೆಲ್ಲರೂ ಉತ್ಸಾಹಕರಾಗಿ ಓಡಾಡುತ್ತಿದ್ದು ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಸಂಸ್ಕøತ ಉಪನ್ಯಾಸಕಿ ಶ್ರೀಮತಿ ಸುದಕ್ಷಿಣ, ಕನ್ನಡ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಮತ್ತು ಗುರುಪ್ರಸಾದ ಅವರು ಕಾರ್ಯಕ್ರಮ ನಿರ್ವಹಿಸಿದರು. ಹಬ್ಬದ ಅಂಗವಾಗಿ ವಿಶೇಷ ಭೋಜನ ಏರ್ಪಡಿಸಲಾಗಿತ್ತು.
ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…