ಕುಂದಾಪುರ:ತಾಲೂಕಿನ ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ವಾರ್ಪ್ ಬಂದರಿನಲ್ಲಿ ಸೋಮವಾರ ಬೆಳಿಗ್ಗೆ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದಲ್ಲಿ 09 ಬೋಟ್,4 ಡಿಂಗಿ ದೋಣಿ,1 ಸಣ್ಣ ದೋಣಿ ಸೇರಿದಂತೆ 6 ಸೇಟ್ ಮಾಟ್ ಬಲೆ,2 ದ್ವಿಚಕ್ರ ವಾಹನ ಅಗ್ನಿಗೆ ಆಹುತಿ ಆಗಿದೆ.ಇವೊಂದು ಘಟನೆಯಲ್ಲಿ ಅಂದಾಜು 10 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.
ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ವಾರ್ಪ್ ಬಂದರಿನಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕರೆ ಗಾಳಿಗೆ ಧಗದಹಿಸಿದ ಬೆಂಕಿ ವಾರ್ಪ್ ಬಂದರಿನಲ್ಲಿ ದುರಸ್ತಿ ಕಾರ್ಯಕ್ಕೆಂದು ನಿಲ್ಲಿಸಿದ ಬೋಟ್‍ಗಳಿಗೆ ತಗುಲಿದೆ.ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಕಿ ದುರಂತದಲ್ಲಿ ಯಕ್ಷೇಶ್ವರಿ,ಸಾಗರ,ಪ್ರಿಯದರ್ಶಿನಿ,ಮೂಕಾಂಬಿಕಾ,ಜಲರಾಣಿ,ಪರ್ಲ್,ಶ್ರೀಶನೇಶ್ವರ,ಮಧುಶ್ರೀ,ಮಂಜುನಾಥ -370 ಎಂಬ ಹೆಸರಿನ ಬೋಟ್ ಮತ್ತು ಡಿಂಗಿ ದೋಣಿಗಳು,ಬಲೆಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಹೋಗಿದೆ.
ಮಳೆಗಾಲಕ್ಕೂ ಮುಂಚೆ ಗಂಗೊಳ್ಳಿ ವಾರ್ಪ್ ಬಂದರಿನಲ್ಲಿ ಬೋಟ್‍ಗಳನ್ನು ರಿಪೇರಿ ಮಾಡಲೆಂದು ನಿಲ್ಲಿಸಲಾಗುತ್ತದೆ.ಹಾಗಾಗಿ ಈ ಬೋಟ್‍ಗಳು ಇಲ್ಲಿ ಲಂಗರು ಹಾಕಿದ್ದವು ಬೋಟ್‍ಗಳ ರಿಪೇರಿ ಕೆಲಸ ಕಾರ್ಯಗಳು ಮುಗಿದಿದ್ದು ಇನ್ನೆರಡು ದಿನದಲ್ಲಿ ಮೀನುಗಾರಿಕೆಗೆ ತೆರಳಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು.ದುರದೃಷ್ಟವಶಾತ್ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೀನುಗಾರರ ಕಣ್ಣೆದುರೆ ಬೋಟ್‍ಗಳು ಧಗದಹಿಸಿದೆ.ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಗಂಗೊಳ್ಳಿಯಲ್ಲಿ ಅಕ್ಷರಸಹ ಸೂತಕದ ವಾತಾವರಣ ಮಡುಗಟ್ಟಿತ್ತು.
ಸಮುದ್ರದಿಂದ ಬೀಸುತ್ತಿದ್ದ ಕರೆ ಗಾಳಿಗೆ ಬೆಂಕಿ ಕೆನ್ನಾಲಿಗೆಯನ್ನು ನಿಯಂತ್ರಿಸುವುದೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಸವಾಲಿನ ಕೆಲಸವಾಗಿತ್ತು.ಬೋಟ್‍ಗಳ ಇಂಜಿನ್‍ನಲ್ಲಿ ತುಂಬಿಸಿದ ಡಿಸೇಲ್ ಬೆಂಕಿ ಕೆನ್ನಾಲೆ ಇನ್ನಷ್ಷು ತೀವೃಗೊಳ್ಳಲು ಸಹಕಾರಿ ಆಗಿತ್ತು.ಕುಂದಾಪುರ,ಬೈಂದೂರು,ಉಡುಪಿ,ಮಲ್ಪೆ ಸೇರಿ ಒಟ್ಟು ನಾಲ್ಕ ಅಗ್ನಿಶಾಮಕ ದಳದ ವಾಹನಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿರಲಿಲ್ಲ.ಎಲ್ಲೆರ ಕಣ್ಣೆದುರೆ ಕೋಟ್ಯಾಂತರ.ರೂ ಮೌಲ್ಯದ ಸ್ವತ್ತುಗಳು ಭಸ್ಮವಾಗಿದೆ.
ಗಂಗೊಳ್ಳಿ ವಾರ್ಪ್ ಬಂದರಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಿಯಂತ್ರಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಪೆÇಲೀಸ್ ಸಿಬ್ಬಂದಿಗಳ ಜತೆ ಕೈಜೋಡಿಸಿದ ಸ್ಥಳೀಯರು ಖಾಸಗಿ ಗಾಡಿಗಳ ಮೂಲಕವೂ ನೀರನ್ನು ಪೂರೈಕೆ ಮಾಡಿದ್ದರು.4 ಪಂಪ್ ಸೇಟ್ ಮೂಲಕ ನದಿ ಮೂಲಕ ನೀರನ್ನು ಸಿಂಪಡಿಸಲಾಯಿತು.ಜನರು ಕೊಡಪಾನ,ಬಕೇಟ್‍ಗಳ ಮೂಲಕವೂ ನೀರನ್ನು ತಂದು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರು.ಗಂಗೊಳ್ಳಿ ಮತ್ತು ಆಸುಪಾಸಿನ ಗ್ರಾಮಗಳ ಭಾಗಗಳಲ್ಲಿ ಬೆಂಕಿ ಅನಾಹುತದಂತಹ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಕುಂದಾಪುರ ಅಥವಾ ಬೈಂದೂರಿನಿಂದ ಅಗ್ನಿ ಶಾಮಕದಳದ ವಾಹನಗಳು ಬರಬೇಕಾಗುತ್ತದೆ.ಘಟನೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ವಾಹನಗಳು ಸಕಾಲಕ್ಕೆ ತಲುಪಲು ಸಾಧ್ಯವಾಗದೆ ಇರುವುದರಿಂದಲೇ ಅನಾಹುತಗಳು ದೊಡ್ಡ ಪ್ರಮಾಣದಲ್ಲಿ ಹಾನಿಯನ್ನು ಉಂಟು ಮಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ
:ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಬಂದರಿನಲ್ಲಿ 200 ಅಧಿಕ ಬೋಟ್‍ಗಳು,ನೂರಾರು ಸಂಖ್ಯೆ ದೋಣಿಗಳು ಲಂಗರು ಹಾಕುತ್ತವೆ.ಗಂಗೊಳ್ಳಿ ಬಂದರಿನಲ್ಲಿ ಕೋಟ್ಯಾಂತರ.ರೂ ವ್ಯವಹಾರ ನಡೆಯುತ್ತಿದೆ.ಗಂಗೊಳ್ಳಿ ಬಂದರು ಮತ್ತು ಗ್ರಾಮೀಣ ಭಾಗದ ಜನರ ಹಿತ ದೃಷ್ಟಿಯಿಂದ ಗಂಗೊಳ್ಳಿ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಅಗ್ನಿಶಾಮಕ ದಳದ ಸಬ್ ಸ್ಟೇಷನ್ ನಿರ್ಮಾಣ ಮಾಡಬೇಕ್ಕೆನ್ನುವುದು ಸಾರ್ವಜನಿಕರ ಬಹು ಕಾಲದ ಬೇಡಿಕೆ ಆಗಿದೆ.ಜನರ ಹಲವಾರು ವರ್ಷಗಳ ಬೇಡಿಕೆಗೆ ಇಲ್ಲಿ ತನಕ ಯಾವುದೇ ಸರಕಾರಗಳು ಜನಪ್ರತಿನಿಧಿಗಳು ಸ್ಪಂದನೆ ಮಾಡಿಲ್ಲ.ಗಂಗೊಳ್ಳಿಯಲ್ಲಿ ಘಟಿದಿಸಿದ ಇದು ನಾಲ್ಕನೇ ದುರಂತವಾಗಿದೆ.
ಬಹು ಕೋಟಿ.ರೂ ವೆಚ್ಚದಲ್ಲಿ ಗಂಗೊಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಜಟ್ಟಿ ಕಳಪೆ ಕಾಮಗಾರಿಯಿಂದ ಕುಸಿದು ಬಿದ್ದಿದೆ.ವಾರ್ಪ್ ಬಂದರಿನಲ್ಲೂ ಮೂಲ ಸೌಕರ್ಯದ ವ್ಯವಸ್ಥೆಗಳಿಲ್ಲ.ಅತೀವ ಒತ್ತಡದಿಂದ ಕೂಡಿದ ಗಂಗೊಳ್ಳಿ ಬಂದರಿನಲ್ಲಿ ಬೋಟ್‍ಗಳನ್ನು ಲ್ಯಾಂಡ್ ಮಾಡಲು ಸರಿಯಾದ ಜಾಗದ ವ್ಯವಸ್ಥೆ ಇಲ್ಲಾ.ಬಲೆಗಳನ್ನು ಇಡಲು ಕೊಠಡಿಗಳಿಲ್ಲ.ಗಂಗೊಳ್ಳಿ ಬಂದರಿನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಥಮ ಆದ್ಯತೆ ನೀಡಬೇಕ್ಕುನ್ನುವುದು ಮೀನುಗಾರರ ಬಹುಮುಖ್ಯ ಬೇಡಿಕೆಯಾಗಿದೆ.
ಜೀವನಕ್ಕೆ ಆಧಾರವಾಗಿರುವ ಬೋಟ್‍ಗಳು ಸುಟ್ಟು ಕರಕಲಾಗಿದ್ದರಿಂದ ಮೀನುಗಾರರ ಬದುಕು ಆತಂಕಕ್ಕೆ ಸಿಲುಕಿದೆ.ಕೋಟ್ಯಾಂತರ.ರೂ ಮೌಲ್ಯದ ಸ್ವತ್ತುಗಳು ಬೆಂಕಿಯಲ್ಲಿ ಭಸ್ಮವಾಗಿದೆ.ತಮ್ಮ ಜೀವನವನ್ನು ಪುನರ್ ನಿರ್ಮಿಸಿಕೊಳ್ಳಲು ಪರಿಹಾರವನ್ನು ಆದಷ್ಟು ಬೇಗನೆ ನೀಡಲು ಕ್ರಮಕೈಗೊಳ್ಳಬೇಕೆಂದು ಘಟನೆ ಸ್ಥಳಕ್ಕೆ ಆಗಮಿಸಿದ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರ ಹತ್ತಿರ ಮೀನುಗಾರರು ಕಣ್ಣಿರಿನ ಮೂಲಕ ತಮ್ಮ ಮನವಿಯನ್ನು ಸಲ್ಲಿಸಿದರು.ಮೀನುಗಾರರಿಗೆ ಸಾಂತ್ವನದ ಮಾತುಗಳನ್ನು ಹೇಳಿದ ಸಚಿವರು ಆದಷ್ಟು ಬೇಗನೆ ಪರಿಹಾರ ನೀಡಲು ನಮ್ಮ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆಯನ್ನು ನೀಡಿದರು.
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಾಜಿಮಕ್ಕಿ ನಿವಾಸಿಯಾಗಿರುವ ಹವ್ಯಾಸಿ ಯಕ್ಷಗಾನ ಕಲಾವಿದ ಯಕ್ಷ ಪೋಷಕ,ಖ್ಯಾತ ದಾರು ಶಿಲ್ಪಿ ರವೀಂದ್ರ…
ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…