ಕುಂದಾಪುರ

ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ವಿಫಲ ಯತ್ನ

Share

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಬೆಳಗಿನ ಜಾವಾ ಕಳವಿಗೆ ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೆ.3 ರಂದು ಶುಕ್ರವಾರ ಬೆಳಗಿನ ಜಾವಾ 1.40 ರ ಸುಮಾರಿಗೆ ರಾಷ್ಷ್ರೀಯ ಹೆದ್ದಾರಿ 66 ರಲ್ಲಿ ಬೈಕ್‍ನಲ್ಲಿ ಬಂದಿಳಿದ ಇಬ್ಬರು ಕಳ್ಳರು ಮರವಂತೆ ಶ್ರೀರಾಮ ಮಂದಿರದ ಪ್ರಾಂಗಣಕ್ಕೆ ನುಗ್ಗಿದ್ದಾರೆ.ಹೆಲ್ಮೆಟ್ ಧರಿಸಿದ ವ್ಯಕ್ತಿಯೊರ್ವ ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಮುರಿದು ಕಳವಿಗೆ ಯತ್ನಿಸಿದ್ದಾನೆ.ಕಬ್ಬಿಣದ ಬಾಗಿಲನ್ನು ಮುರಿದು ಒಳನುಗ್ಗಲು ಅಸಾಧ್ಯವೇನಿಸಿದಾಗ ಕಳ್ಳರಿಬ್ಬರೂ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ಯತ್ನಿಸಿ ವಿಫಲರಾಗಿದ್ದ ಕಳ್ಳರು,
ನಾವುಂದ-ಮರವಂತೆ ಜುಮ್ಮಾ ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬಿ ಬೀಗ ಮುರಿದ್ದಿದ್ದಾರೆ.
ಕಿರಿಮಂಜೇಶ್ವರ ಕಾನವೀರ ಮಾಸ್ತಿಅಮ್ಮ ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಸಹ ಮುರಿದಿದ್ದಾರೆ.
ಸರಣಿ ಕಳ್ಳತನದಲ್ಲಿ ಭಾಗಿಯಾಗಿದ್ದ ಕಳ್ಳರು ಅಮೂಲ್ಯವಾದ ಸ್ವತ್ತುಗಳನ್ನು ದೋಚಲು ವಿಫಲರಾಗಿದ್ದಾರೆ.
ಮೂರು ಕಡೆಗಳಲ್ಲಿ ನಡೆದ ಕಳ್ಳತನದಲ್ಲಿ ಒಂದೇ ತಂಡ ಭಾಗಿಯಾಗಿರುವ ಬಗ್ಗೆ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

2 months ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

3 months ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

3 months ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

4 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

4 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 months ago