ಕುಂದಾಪುರ

ಬೋಳಂಬಳ್ಳಿ:ಶ್ರೀ ಪಾರ್ಶ್ವನಾಥ ಶ್ರೀ ಪದ್ಮಾವತಿ ದೇವಿ ಬಸದಿ ಇತಿಹಾಸ

Share

Advertisement
Advertisement

ಕುಂದಾಪುರ:ಕಾರಣಿಕ ಕ್ಷೇತ್ರವಾದ ಶ್ರೀ ಪಾರ್ಶ್ವನಾಥ ತೀರ್ಥಂಕರ ಮತ್ತು ಶ್ರೀ ಪದ್ಮಾವತಿ ದೇವಿಯ ಬಸದಿಯ ಧರ್ಮದರ್ಶಿಗಳಾದ ಧರ್ಮರಾಜ್ ಜೈನ್ ಅವರು ದೇವಸ್ಥಾನದ ಇತಿಹಾಸ ಕುರಿತು ಮಾತನಾಡುತ್ತಾ,15 ವರ್ಷಗಳ ಇತ್ತೀಚಿಗೆ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆದಿದೆ,ಕ್ಷೇತ್ರದ ದೇವರಿಗೆ ತ್ರಿಕಾಲ ಪೂಜೆಯನ್ನು ನೆರವೇರಿಸಲಾಗುತ್ತಿದೆ ದೇವಸ್ಥಾನಕ್ಕೆ ಊರಪರೂರಿನ,ಹೊರ ರಾಜ್ಯದ ಭಕ್ತರು ಬರುತ್ತಾರೆ ಅನ್ಯ ಧರ್ಮದ ಭಕ್ತಾದಿಗಳು ಸಹ ಕ್ಷೇತ್ರಕ್ಕೆ ಬಂದು ಹರಕೆಯನ್ನು ಸಲ್ಲಿಸಿ ಹೋಗುತ್ತಿದ್ದಾರೆ.ಭಕ್ತರ ಕಷ್ಟಕಾರ್ಪಣ್ಯಗಳಿಗೆ ಮುಕ್ತಿ ನೀಡಿದಂತಹ ಅದೆಷ್ಟೊ ನಿದರ್ಶನಗಳಿವೆ ಎಂದರು.ಮಾನವ ಜೀವನದಲ್ಲಿ ಎದುರಾಗುವಂತಹ ಕಷ್ಟಗಳಿಗೆ,ಮಕ್ಕಳಾಗದೆ ಇದ್ದವರಿಗೆ,ಜಾಗದ ತೊಂದರೆ ಇದ್ದವರೂ,ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವರು,ಭೂಮಿ ವ್ಯವಹಾರದ ತೊಂದರೆ ಇದ್ದವರೂ ಈ ಸ್ಥಳಕ್ಕೆ ಬಂದು ಬೇಡಿಕೊಂಡು ಹೋಗುತ್ತಿದ್ದಾರೆ ದೇವರ ಕಾರಣಿಕ ಶಕ್ತಿಯಿಂದ ಭಕ್ತರ ಕಷ್ಟ ಪರಿಹಾರವಾಗಿರುವುದನ್ನು ನಾವು ನೋಡಿದ್ದೆವೆ.ಯಾವುದೇ ರೀತಿ ತೊಂದರೆ ಇದ್ದರೂ ದೇವರ ಹೆಸರಿನಲ್ಲಿ ಪ್ರಸಾದವನ್ನು ನೀಡಿದರೆ ಅವರ ತೊಂದರೆ ವಿಮುಖ ವಾಗುತ್ತಿದೆ ಎಂದರು.

Advertisement

ದುಡ್ಡಿನ ಬೆನ್ನಿಗೆ ಹೋಗದೆ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಲ್ಯಾಣ ಮಂಟಪವನ್ನು ಕಟ್ಟಲಾಗಿದ್ದು ವಿವಾಹ ಕಾರ್ಯಕ್ರಮಕ್ಕೆ ಉಚಿತವಾಗಿ ನೀಡಲಾಗುತ್ತಿದೆ.ದಾನ ಧರ್ಮಗಳಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಲಾಗುತ್ತಿದೆ.ವೈರಾಗ್ಯದಿಂದ ತಪಸ್ಸನ್ನು ಆಚಾರಿಸಿದ ಗೊಮ್ಮಟೇಶ್ವರನ ವಿಗ್ರಹ ಹಾಗೂ ವನವಾಶಕ್ಕೆ ತೆರಳಿದ್ದ ಶ್ರೀರಾಮ ದೇವರ ವಿಗ್ರಹವನ್ನು ಕಾಡಿನಲ್ಲಿ ಪ್ರತಿಷ್ಠಾಪಿಸಲಾಗುವುದು ಅಂದಾಜು 2 ಕೋಟಿ.ರೂ ವೆಚ್ಚ ತಗುಲಲಿದೆ ಎಲ್ಲವೂ ದೇವರ ಆಶೀರ್ವಾದಿಂದಲೆಂದರು.ಜೀವನದಲ್ಲಿ ಮಾನವ ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದು ಇಲ್ಲಾ,ಧರ್ಮ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾಗಿದೆ.ದೇವರಿಗೆ ಹರಕೆಯನ್ನು ಹೇಳಿಕೊಳ್ಳುವುದಕ್ಕಿಂತ ಭಕ್ತಿ ಮುಖ್ಯವಾಗಿದೆ ಸತ್ಯ ಧರ್ಮದಿಂದ ಜೀವನ ನಡೆಸಬೇಕು ಎಂದು ಹೇಳಿದರು.


ಶ್ರೀ ಪಾರ್ಶ್ವನಾಥ ಶ್ರೀ ಪದ್ಮಾವತಿ ದೇವಿ ಬಸದಿ ಬೋಳಂಬಳ್ಳಿ ಇತಿಹಾಸದ ಪಕ್ಷಿನೋಟ

ಶ್ರೀ ಪಾಶ್ರ್ವನಾಥ ತೀರ್ಥಂಕರ ಮತ್ತು ಶ್ರೀ ಪದ್ಮಾವತಿ ದೇವಿಯ ಬಸದಿಯು ಉಡುಪಿಯಿಂದ 65ಕಿ.ಲೋ ಮೀಟರ್ ಹಾಗೂ ಕುಂದಾಪುರದಿಂದ 30 ಕಿಮೀ ದೂರದಲ್ಲಿರುವ ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮದ ಬೋಳಂಬಳ್ಳಿ ಜೈನರ ಮನೆ ಎಂಬಲ್ಲಿದ್ದು,ಇಲ್ಲಿ ಅಲ್ಪಸಂಖ್ಯಾತ ಜೈನರು 4 ಶತಮಾನಗಳಿಂದ ನೆಲೆಸಿದ್ದಾರೆ.ಜೈನರ ಮನೆ ಪಕ್ಕಸಲ್ಲಿಯೇ ಕುಶಸ್ಥಳಿ ನದಿಯು ಹರಿಯುತ್ತಿರುವುದು ವಿಶೇಷವಾಗಿದೆ.
ಶ್ರೀ ಪದ್ಮಾವತಿ ದೇವಿ ಬಸದಿಯ ಪಕ್ಕದಲ್ಲಿಯೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಒಂದೇ ಆವರಣದಲ್ಲಿ ಕಂಡು ಬರುವುದು ಇಲ್ಲಿನ ವಿಶೇಷ.ಕಾರಣಿಕ ಶಕ್ತಿಯನ್ನು ಹೊಂದಿರುವ ದೇವಿ ಶ್ರೀ ಪದ್ಮಾವತಿಯು ಪ್ರಾಚೀನ ತುಳುನಾಡಿನ ರಾಜಧಾನಿ ಬಾರ್ಕೂರುನಲ್ಲಿ ಅಳುಪ ಅರಸರಿಂದ ಪೂಜಿಸಲ್ಪಟ್ಟ ವಿಗ್ರಹವಾಗಿದೆ.16ನೇ ಶತಮಾನದಲ್ಲಿ ಬಾರ್ಕೂರು ಸಂಸ್ಥಾನವು ತನ್ನ ಕೊನೆಯ ಆಡಳಿತ ಕಾಲದಲ್ಲಿ ಕುಟುಂಬದೊಳಗಿನ ವಿಭಜನೆಯಿಂದಾಗಿ ಎರಡು ಭಾಗಗಳಾಗಿ ಅದರಲ್ಲಿ ಒಂದು ಭಾಗವು ರಾಜ ವೀರಮರ್ಮ ಮತ್ತು ಅವನ ಸಹೋದರ ದೇವಿಯ ವಿಗ್ರಹದೊಂದಿಗೆ ತಮ್ಮ ಪಾಲಿನ ಸ್ವತ್ತುಗಳನ್ನು ಹೇರುಗತ್ತೆಗಳ ಮೇಲೆ ಹೇರಿಕೊಂಡು ಉತ್ತರಕ್ಕೆ ಗಂಗೊಳ್ಳಿ ನದಿಯನ್ನು ದಾಟಿ ಈ ಭಾಗದಲ್ಲಿ ಬಂದು ನೆಲೆಸಿದರೆಂದು ಪ್ರತೀತಿ.ರಾಜ ವೀರವರ್ಮನ ತಾಯಿ ಶ್ರೀಯಾಳ ದೇವಿಯು ತನ್ನ ಇನ್ನೋರ್ವ ಪುತ್ರ ಶೂರವರ್ಮನ ಜೊತೆಗೂಡಿ ಬಾರ್ಕೂರನ್ನು ತೊರೆದು ಬಂದರೆಂದು ಇತಿಹಾಸ ಹೇಳುತ್ತದೆ ಎಂದು ಶ್ರೀ ಪಾಶ್ವನಾಥ ಶ್ರೀ ಪದ್ಮಾವತಿ ದೇವಿ ಬಸದಿ ಬೋಳಂಬಳ್ಳಿ ಧರ್ಮದರ್ಶಿಗಳಾದ ಧರ್ಮರಾಜ್ ಜೈನ್ ಹೇಳುತ್ತಾರೆ.
ಹನ್ನೊಂದನೆಯ ಶತಮಾನದ ಅಳುಪ ಕುಲಶೇಖರ ತನ್ನ ಮಕ್ಕಳಾದ ಪದುಮಲದೇವಿ,ಚಂದಲ ದೇವಿ ಅವರಿಗೆ ಈ ಪ್ರದೇಶವನ್ನು ಭಟ್ಟಾರಕರ ಸಾನಿಧ್ಯದಲ್ಲಿ ಕನ್ಯಾದಾನ ಕೊಟ್ಟಿರುವಂತಹ ಶಿಲಾಶಾಸನವಿದ್ದು ಅದರ ವಿವರಗಳಿವೆ.ನಂದಿ ವಿಗ್ರಹ ಕಾಂತು ಈ ಶಾಸನವನ್ನು ಕೊರೆದವನು ಎಂದು ತಿಳಿಸಲಾಗಿದೆ.ಮೊದಲು ಬೊಳ್ಳಂಬಳ್ಳಿಯ ಜೈನರ ಮನೆ ಪಕ್ಕದಲ್ಲಿರುವ ಬಸ್ತಿಗದ್ದೆ ಎಂಬಲ್ಲಿ ಶ್ರೀ ಪಾಶ್ರ್ವನಾಥ ತೀರ್ಥಂಕರ ಮತ್ತು ಶ್ರೀ ಪದ್ಮಾವತಿ ದೇವಿಗೆ ಬಸದಿಯನ್ನು ಕಟ್ಟಿ ಆರಾಧಿಸುತ್ತಿದ್ದು ನಂತರ ಅದು ಶಿಥಿಲಾವಸ್ಥೆಯನ್ನು ಹೊಂದಿದಾಗ ದೇವರ ವಿಗ್ರಹವನ್ನು ಮನೆಯಲ್ಲಿ ತಂದಿರಿಸಿ ನಿತ್ಯಪೂಜೆಗಳನ್ನು ನಡೆಸಲಾಗುತ್ತಿದ್ದಿತ್ತು.ಶ್ರೀ ಧರ್ಮರಾಜ್ ಜೈನ್ ಮತ್ತು ವನಿತಾ ಧರ್ಮರಾಜ್ ಜೈನ್ ದಂಪತಿಗಳು ಹೊಸದಾಗಿ ಬಸದಿ ನಿರ್ಮಾಣ ಮಾಡಿ ಪಂಚಕಲ್ಯಾಣ ವಿಧಿವಿಧಾನಗಳೊಂದಿಗೆ 2011 ರಲ್ಲಿ ಪ್ರತಿಷ್ಠಾಪನೆಯನ್ನು ಮಾಡಿ ಆರಾಧಿಸಿಕೊಂಡು ಬರಲಾಗುತ್ತಿದೆ.
ಭಕ್ತಿಯಿಂದ ಪ್ರಾರ್ಥಿಸಿ ಪೂಜೆಯನ್ನು ಮಾಡಿಸಿದಾಗ ದೇವಿ ಪದ್ಮಾವತಿಯು ತನ್ನ ಶಿರಾ ಅಥವಾ ಬಲಬದಿಯಿಂದ ಹೂಗಳನ್ನು ಉದುರಿಸಿ ಒಪ್ಪಿಗೆ ಅಥವಾ ಅಪ್ಪಣೆಯನ್ನು ನೀಡುವುದು ಈ ಕ್ಷೇತ್ರದ ವಿಶೇಷವಾಗಿದೆ.ಮೂಲ ಜೈನರಿಂದ ಆರಾಧಿತ ಪದ್ಮಾವತಿಯಾದರೂ ಇತರ ಎಲ್ಲಾ ಧರ್ಮಗಳ (ಮುಸಲ್ಮಾನರು,ಕ್ರೈಸ್ತರು ) ಭಕ್ತರು ದೇವಿಗೆ ಹರಕೆಯನ್ನು ಹೊತ್ತು ಆಗಮಿಸುವುದು ಇಲ್ಲಿ ಸಾಮಾನ್ಯ.
ಮೊದಲಿಗೆ ಬೋಳಂಬಳ್ಳಿ ಪಕ್ಕದಲ್ಲಿರುವ ಪಾರೆ (ಪಹರೆ) ಎಂಬ ಜಾಗದಲ್ಲಿ ಅಳುಪ ಅರಸರ ಉಪಕೋಟೆಯೊಂದು ಇದ್ದು ಅಲ್ಲಿ ಬಂದು ನೆಲೆಸಿದ್ದರು.ಮುಂದೆ ಪೆÇೀರ್ಚುಗೀಸರ ಆಕ್ರಮಣ ಕಾಲದಲ್ಲಿ ಸಂಪತ್ತಿಗಾಗಿ ಕೋಟೆಯ ಅರಮನೆಯನ್ನು ದೋಚಲು ಬಂದಾಗ ಅದನ್ನು ಪ್ರತಿಭಟಿಸಿದ ಸಮಯದಲ್ಲಿ ಕುಟುಂಬದ ಹಿರಿಯ ಸ್ತ್ರೀಯೊಬ್ಬಳನ್ನು ಸಾಯಿಸಿದರು.ತದನಂತರ ಸಂಪತ್ತನ್ನು ಹಿರಿಯ ಸ್ತ್ರೀಯನ್ನು ಕಳೇದುಕೊಂಡ ಕುಟುಂಸ್ಥರು ಬೇಸರಗೊಂಡು ದೇವಿ ಪದ್ಮಾವತಿಯೊಂದಿಗೆ ಅಲ್ಲೇ ಪಕ್ಕದಲ್ಲಿರುವ ಬೋಳಂಬಳ್ಳಿ ಬಂದು ನೆಲೆಸಿದರು ಎಂಬುದು ಇತಿಹಾಸ.
40 ವರ್ಷಗಳ ಹಿಂದೆ ಊರಿನಲ್ಲಿ ಕಾಡಿಗೆ ಮೇಯಲು ಹೋದ ಜಾನಿವಾರುಗಳು ಹಿಂತಿರುಗಿ ಬರದಿದ್ದರೆ ಕೋಟೆ ಜಟ್ಟಿಂಗನ ಬಳಿ ಹೋಗಿ ಹರಕೆ ಹೇಳಿ ಪ್ರಾರ್ಥಿಸಿದಾಗ ಜಾನುವಾರುಗಳು ತಿರುಗಿ ಮನೆಗೆ ಬರುತ್ತಿದ್ದವು.ಶ್ರೀ ಪಾಶ್ರ್ವನಾಥ ತೀರ್ಥಂಕರ ಮತ್ತು ಶ್ರೀ ಪದ್ಮಾವತಿ ದೇವಿಯ ಬಸದಿಯ ವಠಾರದಲ್ಲಿ ಹಳೆಯ ಕಾಲದ ವಸ್ತುಗಳನ್ನು ಸಂಗ್ರಹಾಲಯದಲ್ಲಿ ಸಂಗ್ರಿಸಲಾಗಿದ್ದು,ಸಾರ್ವಜನಿಕರು ನೋಡಬಹುದಾಗಿದೆ.

Advertisement
Advertisement

Share
Team Kundapur Times

Recent Posts

ಹವ್ಯಾಸಿ ಯಕ್ಷಗಾನ ಕಲಾವಿದ ರವೀಂದ್ರ ಆಚಾರ್ಯ ನಿಧನ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಾಜಿಮಕ್ಕಿ ನಿವಾಸಿಯಾಗಿರುವ ಹವ್ಯಾಸಿ ಯಕ್ಷಗಾನ ಕಲಾವಿದ ಯಕ್ಷ ಪೋಷಕ,ಖ್ಯಾತ ದಾರು ಶಿಲ್ಪಿ ರವೀಂದ್ರ…

11 hours ago

ಸೀ ವಿಜ್ಹಿವಲ್ ಅಣುಕು ಕಾರ್ಯಚಾರಣೆ,ನಕಲಿ ಉಗ್ರರ ಟೀಮ್ ಬಂಧನ

ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ…

1 day ago

ಬ್ರಹ್ಮಾವರ ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ಬಿ.ಸಿ.ಎ ವಿಭಾಗದಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಉದ್ಘಾಟನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…

3 days ago

ಎಎನ್ ಎಫ್ ಎನ್ ಕೌಂಟರ್ ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ,ಮುಂದುವರಿದ ಕೂಂಬಿಂಗ್ ಕಾರ್ಯಾಚರಣೆ

ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…

4 days ago

ವಿದ್ಯಾರಣ್ಯ ಶಾಲೆಯಲ್ಲಿ ಉಚಿತ ಎನ್. ಎಂ.ಎಂ.ಎಸ್. ಕಾರ್ಯಾಗಾರ ಉದ್ಘಾಟನೆ

ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…

5 days ago

ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ,ಇಬ್ಬರು ಮಹಿಳೆಯರಿಗೆ ಗಾಯ

ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…

1 week ago