ಕುಂದಾಪುರ:ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ವತಿಯಿಂದ ಕುಂದಗನ್ನಡ ಉತ್ಸವ 2023 ಕಾರ್ಯಕ್ರಮ ಅ.29 ರಂದು ದುಬೈನ ಅಜ್ಮಾನ್‍ನಲ್ಲಿ ನಡೆಯಲಿದೆ.ಪ್ರಥಮ ಬಾರಿಗೆ ಶ್ರೀ ಕ್ಷೇತ್ರ ಮಂದಾರ್ತಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಉತ್ಸವದಲ್ಲಿ ಅಪರೂಪದ ಸಾಧಕರನ್ನು ಗೌರವಿಸಿ ಕುಂದಾಪುರ ರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ರಘುರಾಮ ದೇವಾಡಿಗ ಆಲೂರು ಹೇಳಿದರು.
ತ್ರಾಸಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ದುಬೈನಲ್ಲಿ ವಾಸವಾಗಿರುವ ಕುಂದಗನ್ನಡಿಗರ ಸಹಾಯ ಹಾಗೂ ದಾನಿಗಳ ಸಹಕಾರದಿಂದ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ವತಿಯಿಂದ ಈ ವರ್ಷ ದುಬೈನಲ್ಲಿ ಕುಂದಗನ್ನಡ ಉತ್ಸವ ಆಯೋಜನೆ ಮಾಡಲಾಗಿದೆ.ವಿಶಿಷ್ಟ ರೀತಿಯಲ್ಲಿ ಸಾಧನೆಯನ್ನು ಮಾಡಿರುವ ನಾಟಿ ವೈದ್ಯ ಮ್ಯಾಕ್ಸಿಮ್ ಒಲಿವೆರಾ ಪಡುಕೋಣೆ,ಗೋಪ್ರೇಮಿ ಸಂಜೀವ ದೇವಾಡಿಗ ಹಾಗೂ ಜೀವ ರಕ್ಷಕ ಮುಳುಗುತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಅವರಿಗೆ ಕುಂದಾಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುದೆಂದು ತಿಳಿಸಿದರು.
ಪ್ರಕರ್ತ ಅರುಣ್ ಶಿರೂರು ಮಾತನಾಡಿ,ಅರಬ್ ದೇಶದಲ್ಲಿ ಕನ್ನಡ ಸಂಘವನ್ನು ಕಟ್ಟಿಕೊಂಡು ಕನ್ನಡ ನಾಡುನುಡಿ ಉಳುವಿನ ಬಗ್ಗೆ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವುದು ಮಾತ್ರವಲ್ಲದೆ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಸಮಾಜಿಕ,ಶೈಕ್ಷಣಿಕ ಚಟುವಟಿಕೆಗಳಿಗೂ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದೆ ಎಂದರು.ಈ ಸಂದರ್ಭ ಸಂಘದ ಸದಸ್ಯರಾದ ಶೀನ ದೇವಾಡಿಗ,ಸುಧಾಕರ ಆಚಾರ್ಯ,ತಮ್ಮಯ್ಯ ದೇವಾಡಿಗ ಉಪಸ್ಥಿತರಿದ್ದರು.
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…
ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…