ಮನೆಯಲ್ಲಿ ನಿರವ ಮೌನ
ಕುಂದಾಪುರ:ನೆಲಕ್ಕೆ ಬಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ದಾರುಣವಾಗಿ ಸಾವನ್ನಪ್ಪಿದ ಕುಂದಾಪುರ ತಾಲೂಕಿನ ಕಟ್‍ಬೇಲ್ತೂರು ಗ್ರಾಮದ ಸುಳ್ಸೆ ನಿವಾಸಿಗಳಾದ ಮಹಾಬಲ ದೇವಾಡಿಗ (55) ಹಾಗೂ ಅವರ ಪತ್ನಿ ಲಕ್ಷ್ಮೀ ದೇವಾಡಿಗ (49) ಅವರ ಮೃತದೇಹದ ಶವ ಸಂಸ್ಕಾರದ ಕಾರ್ಯ ಸ್ವಗ್ರಾಮವಾದ ಸುಳ್ಸೆಯಲ್ಲಿ ಶನಿವಾರ ನಡೆಯಿತು.ಸಪ್ತಪತಿ ತುಳಿದು ಹಸೆಮಣೆ ಏರಿದ್ದ ಆದರ್ಶ ದಂಪತಿಗಳು ಸಾವಿನಲ್ಲೂ ಒಂದಾಗುವುದರ ಮುಖೇನ ಇಹಲೋಕವನ್ನು ತ್ಯಜಿಸಿದ್ದಾರೆ.ಅವರು ಒಂದು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.
ಸೌಮ್ಯ ಸ್ವಭಾವವನ್ನು ಹೊಂದಿದ್ದ ಮಾಹಾಬಲ ದೇವಾಡಿಗ ಅವರು ಸೇವಂತಿಗೆ ಕೃಷಿಕರಾಗಿದ್ದು,ಗದ್ದೆ ಕೆಲಸ ಸಹಿತ ಇನ್ನಿತರ ಕೃಷಿಕೂಲಿ ಕೆಲಸಗಳನ್ನು ಮಾಡುತ್ತಾ ಕುಟುಂಬದ ನಿರ್ವಹಣೆಯನ್ನು ನೋಡಿಕೋಳ್ಳುತಿದ್ದರು.ಅವರ ಅಕಾಲಿಕ ನಿಧನದಿಂದ ಕುಟುಂಬದ ಆಧಾರ ಸ್ತಂಭ ಉರುಳಿ ಬಿದ್ದಿದ್ದು ಅವರ ಮಕ್ಕಳಿಬ್ಬರೂ ಅನಾಥರಾಗಿದ್ದಾರೆ.ದಂಪತಿಗಳ ಸಾವಿನಿಂದ ಗ್ರಾಮವು ಶೋಕ ಸಾಗರದಲ್ಲಿ ಮುಳುಗಿದೆ.
ಅನಾಥ ಮಕ್ಕಳಿಗೆ ಉದ್ಯೋಗ ನೀಡಲು ಆಗ್ರಹ:ಮೆ.ಸ್ಕಾಂ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ದಂಪತಿಗಳ ಕುಟುಂಬಕ್ಕೆ ಸರಕಾರ ಪರಿಹಾರದ ಧನವನ್ನು ಕೂಡಲೆ ನೀಡಬೇಕು.ತಂದೆ ತಾಯಿಯನ್ನು ಕಳೆದು ಕೊಂಡಿದ್ದ ಮಕ್ಕಳಿಗೆ ಸರಕಾರಿ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾಗರಾಜ್ ಪುತ್ರನ್ ಮಾಜಿ ಅಧ್ಯಕ್ಷರು,ಹಾಲಿ ಸದಸ್ಯರು ಗ್ರಾಮ ಪಂಚಾಯತ್ ಕಟ್‍ಬೇಲ್ತೂರು:-
ಮಹಾಬಲ ದೇವಾಡಿಗ ಅವರ ಕುಟುಂಬದ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ.ಅವರ ಅಕಾಲಿಕ ನಿಧನದಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ.ಮಕ್ಕಳಿಬ್ಬರು ಅನಾಥರಾಗಿದ್ದಾರೆ.ಮೆ.ಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ಇವೊಂದು ಸಾವುಗಳು ಸಂಭಂವಿಸಿದ್ದರಿಂದ ಅವರ ಮಕ್ಕಳಿಗೆ ನ್ಯಾಯದ ಭಾಗವಾಗಿ ಮೆ.ಸ್ಕಾಂ ಇಲಾಖೆಯಲ್ಲಿ ಕೆಲಸವನ್ನು ನೀಡಲು ಸರಕಾರ ಕ್ರಮವನ್ನು ಕೈಗೊಳ್ಳಬೇಕು.ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿಯನ್ನು ನೀಡಲಾಗುವುದು.30 ರಿಂದ 40 ವರ್ಷಗಳಷ್ಟು ಹಳೆಯದಾದ ವಿದ್ಯುತ್ ತಂತಿಗಳನ್ನು ಬದಾಲಾವಣೆ ಮಾಡದೆ ಇದ್ದಿದ್ದರಿಂದ ಈ ಅನಾಹುತ ಸಂಭಂವಿಸಿದೆ.
ಶ್ಯಾಮಲ ಮೊಗವೀರ ಸ್ಥಳೀಯ ನಿವಾಸಿ:-
ತಂದೆ ಮತ್ತು ತಾಯಿಯ ಅಕಾಲಿಕ ಸಾವಿನಿಂದ ಮಕ್ಕಳಿಬ್ಬರೂ ಅನಾಥರಾಗಿದ್ದಾರೆ ವಿದ್ಯಾವಂತರಾದ ಅವರಿಗೆ ಸರಕಾರಿ ಕೆಲಸವನ್ನು ನೀಡಲು ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು.ಇಂತಹ ಘಟನೆಗಳು ನಮ್ಮ ತಾಲೂಕಿನಲ್ಲಿ ಮರಳುಕಳಿಸದಿರುವ ದೃಷ್ಟಿಯಿಂದ ಮೆ.ಸ್ಕಾಂ ಇಲಾಖೆ ಹಳೆ ವಿದ್ಯುತ್ ತಂತಿಗಳನ್ನು ಬದಲಿಸಿ ಹೊಸ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
@ವರದಿ:ಜಗದೀಶ ದೇವಾಡಿಗ ಮುಳ್ಳಿಕಟ್ಟೆ
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…