ಕುಂದಾಪುರ:ವರ್ಷದಿಂದ ವರ್ಷಕ್ಕೆ ಸಂಘವು ಗುರಿ ಮೀರಿದ ಸಾಧನೆಯೊಂದಿಗೆ ಅಭಿವೃದ್ದಿ ಹೊಂದುತ್ತಾ ಬಂದಿದೆ.ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ವರದಿ ವರ್ಷದ ಅಂತ್ಯಕ್ಕೆ ರೂ.41,45,18,292.48 ಠೇವಣಾತಿ ಹೊಂದುವುದರೊಂದಿಗೆ ಠೇವಣಾತಿ ಸಂಗ್ರಹಣೆಯಲ್ಲಿ ಶೇ.15ರಷ್ಟು ಪ್ರಗತಿಯನ್ನು ಸಾಧಿಸಿದೆ.ಪ್ರಸ್ತುತ ವರದಿ ಸಾಲಿನಲ್ಲಿ ರೂ.68,00,561 ಲಾಭ ಗಳಿಸಲಾಗಿದೆ.ಶೇ.11 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಹೇಳಿದರು.
ಆಲೂರು ಶ್ರೀಮೂಕಾಂಬಿಕಾ ಸಭಾ ಭವನದಲ್ಲಿ ನಡೆದ ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ಒಟ್ಟು ರೂ.3,18,10,305 ವಿವಿಧ ನಿಧಿಗಳನ್ನು ಹೊಂದಿದ್ದು.ಸದಸ್ಯರಿಗೆ ಕಡಿಮೆ ಬಡ್ಡಿಯ ಕೃಷಿ ಸಾಲಗಳ ಅವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ರೈತ ಸದಸ್ಯರುಗಳಿಗೆ ಕ್ರಮಿಕ ಪತ್ತಿನ ಯಾದಾಸ್ತು ಮಿತಿ ನಿರ್ಧರಿಸಿಕೊಳ್ಳಲು ಪ್ರೋತ್ಸಾಹಿಸಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ರೂ.10,54,65,609 ಸಾಲ ಪಡೆಯಲಾಗಿದೆ.ವರದಿ ಸಾಲಿನಲ್ಲಿ ರೂ.40 ಕೋಟಿಯಷ್ಟು ಸಾಲ ನೀಡಲಾಗಿದೆ ಎಂದರು.
ಸಂಘದ ವಾರ್ಷಿಕ ವರದಿ ಮಂಡಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ ಪೂಜಾರಿ ಮಾತನಾಡಿ,ಸಂಘವು ಒಟ್ಟು 5,339 ಸದಸ್ಯರನ್ನು ಹೊಂದಿದ್ದು,ರೂ.1,40,24,657 ಪಾಲು ಹಣವನ್ನು ಹೊಂದಿದೆ ಎಂದರು.ಸಂಘದ ವ್ಯಾಪ್ತಿಯ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.ಸಂಘದ ಉಪಾಧ್ಯಕ್ಷರಾದ ಎನ್.ಸಂತೋಷ್ ಕುಮಾರ್ ಶೆಟ್ಟಿ,ನಿರ್ದೇಶಕರಾದ ರತ್ನಾಕರ ಎಂ.ಆಚಾರ್ಯ, ಹೆಚ್.ಶಂಕರ ಶೆಟ್ಟಿ,ಎಂ.ಚಂದ್ರಶೇಖರ ಶೆಟ್ಟಿ,ಗಂಗಾಧರ ಆಚಾರ್ಯ,ಸುಬ್ಬ ಪೂಜಾರಿ,ರಾಜೇಶ ದೇವಾಡಿಗ,ಅಮರನಾಥ ಶೆಟ್ಟಿ,ಸುರೇಂದ್ರ,ಹರೀಶ್, ಲಲಿತಾ ಕುಲಾಲ್,ಅಕ್ಕಯ್ಯ ಯಾನೆ ಆಶಾ ಉಪಸ್ಥಿತರಿದ್ದರು.ಸಂಘದ ಮೆನೇಜರ್ ಎ.ಸಂಜೀವ ಪೂಜಾರಿ ಸ್ವಾಗತಿಸಿದರು.ಸಂಘದ ಸಿಬ್ಬಂದಿ ಗಣೇಶ್ ವಂದಿಸಿದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…