ಕುಂದಾಪುರ

ಹೆಮ್ಮಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟನಾ ಸಮಾರಂಭ

Share

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು,ಸಮೂಹ ಸಂಪನ್ಮೂಲ ಕೇಂದ್ರ ಹೆಮ್ಮಾಡಿ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಹೆಮ್ಮಾಡಿ ಕ್ಲಸ್ಟರ್ ಮಟ್ಟದ ಕಿರಿಯ,ಹಿರಿಯ ಮತ್ತು ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ ಶನಿವಾರ ಅದ್ದೂರಿಯಾಗಿ ನಡೆಯಿತು.

ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರ ಮಡಿವಾಳ ಅವರು ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ,ಪುಟ್ಟ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಲು ಪ್ರತಿಭಾ ಕಾರಂಜಿ ಅಂತಹ ಸ್ಪರ್ಧೆಗಳು ಉತ್ತಮವಾದ ವೇದಿಕೆ ಆಗಿದೆ.ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಬಹಳಷ್ಟು ಅನುಕೂಲವಾಗುತ್ತದೆ.ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.

ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಮಾಸ್ಟರ್ ಮಾತನಾಡಿ,ಹೆಮ್ಮಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಿರಿಯ,ಹಿರಿಯ ಮತ್ತು ಪ್ರೌಢಶಾಲಾ ವಿಭಾಗದ ಸುಮಾರು 14 ಶಾಲೆಯ ವಿದ್ಯಾರ್ಥಿಗಳು ಭಾಗವಿಹಿಸಿದ್ದಾರೆ.ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಊರಿನ ದಾನಿಗಳು ಸೇರಿದಂತೆ ಹಲವಾರು ಜನ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರವನ್ನು ನೀಡಿದ್ದಾರೆ.ಸೋತವರು ಕುಗ್ಗದೆ,ಗೆದ್ದವರು ಹಿಗ್ಗ ಬಾರದು,ಸ್ಪರ್ಧೆಯಲ್ಲಿ ಸೋಲು,ಗೆಲುವು ಎನ್ನುವುದು ಸರ್ವೆ ಸಾಮಾನ್ಯ,ವೇದಿಕೆಯನ್ನು ಸಮರ್ಥ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ಮುಖ್ಯ ಎಲ್ಲರಿಗೂ ಶುಭವಾಗಲಿ ಎಂದು ಶುಭಹಾರೈಸಿದರು.

ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೇತ್ರಾವತಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ಸಂದರ್ಭ ಹೆಮ್ಮಾಡಿ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಡಿ ಕಾಂಚನ್ ಮತ್ತು ಸದಸ್ಯೆ ರತ್ನಾ,ಹೆಮ್ಮಾಡಿ ಸಂಪನ್ಮೂಲ ಕೇಂದ್ರ ಶಿಕ್ಷಣ ಸಂಯೋಜಕ ಯೋಗೀಶ್,ಹಿರಿಯ ಎಸ್‌ಡಿಎಂಸಿ ಸದಸ್ಯೆ ಲೀಲಾವತಿ,ನಿವೃತ್ತ ಶಿಕ್ಷಕ ಅಣ್ಣಪ್ಪ,ಶಿಕ್ಷಕ ರವೀಂದ್ರ,ಸಿಆರ್‌ಪಿ ರಮನಾಥ್ ಮೇಸ್ತ,ಗುಜ್ಜಾಡಿ ಶಾಲೆ ಶಿಕ್ಷಕ ವಾಸುದೇವ ಬಂಗೇರ,ಜನತಾ ಪ್ರೌಢಶಾಲೆ ಶಿಕ್ಷಕ ಜಗದೀಶ್ ಶೆಟ್ಟಿ ಮತ್ತು ಪದವಿ ಕಾಲೇಜಿನ ಶಿಕ್ಷಕ ಅಭಿಜಿತ್,ದಾನಿಗಳಾದ ಹರೀಶ್ ಭಂಡಾರಿ, ಶಾಂತಾರಾಂ ಭಟ್, ಅಶೋಕ್ ಭಟ್ ಉಪಸ್ಥಿತರಿದ್ದರು.ಶಾಲೆ ಮುಖ್ಯ ಶಿಕ್ಷ ದಿವಾಕರ್ ಸ್ವಾಗತಿಸಿದರು.ಶಿಕ್ಷಣ ಸಂಯೋಜಕ ಯೋಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಒಲಂಪಿಯಾ ಮತ್ತು ರೇವತಿ ನಿರೂಪಿಸಿದರು.ಸುಪ್ರೀತಾ ವಂದಿಸಿದರು.ಪ್ರತಿಭಾ ಕಾರಂಜಿ ಸ್ಪಧೆಯಲ್ಲಿ ಭಾಗವಿಸಿದ್ದ ವಿದ್ಯಾರ್ಥಿಗಳು ವೇದಿಕೆ ಮೇಲೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದರು.

Advertisement

Share
Team Kundapur Times

Recent Posts

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

21 hours ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

1 day ago

ಹೊಸಾಡು ಸೇನಾಪುರ ಗ್ರಾಮೋತ್ಸವ ಶಾಸಕ ಗಂಟಿಹೊಳೆ ಉದ್ಘಾಟನೆ

ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…

1 week ago

ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ವಾರ್ಷಿಕ ಮಹಾಸಭೆ:2.5 ಕೋಟಿ ರೂ ವ್ಯವಾಹಾರ:ಒಟ್ಟು 1.81 ಲಕ್ಷ ರೂ. ನಿವ್ವಳ ಲಾಭ

ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…

1 week ago

ಲಯನ್ ಆಸರೆ ಯೋಜನೆ ಮನೆ ನಿರ್ಮಾಣ ಅಶಕ್ತರಿಗೆ ನೆರವು ವಿತರಣೆ

oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…

2 weeks ago

ಅಧ್ಯಕ್ಷರಾಗಿ ಸತೀಶ್‌ ಶೆಟ್ಟಿ ಹಕ್ಲಾಡಿ ಆಯ್ಕೆ

ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯ‌ರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…

2 months ago