ಕುಂದಾಪುರ

ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹೆಮ್ಮಾಡಿ ಜನತಾ ಕಾಲೇಜಿಗೆ-21 ಪದಕ: ಜಿಲ್ಲಾ ಚಾಂಪಿಯನ್ ಪಟ್ಟ

Share

ಕುಂದಾಪುರ-ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 13 ಚಿನ್ನ,7 ಬೆಳ್ಳಿ,1 ಕಂಚಿನ ಪದಕ ಸೇರಿ ಒಟ್ಟು 21ಪದಕ ಗಳಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ
ಹರ್ಷಿಣಿ ಪ್ರಥಮ ಪಿ.ಯು.ಸಿ.59 ಕೆ.ಜಿ ವಿಭಾಗದಲ್ಲಿ ಚಿನ್ನ,62ಕೆ.ಜಿ.ವಿಭಾಗದಲ್ಲಿ ಭೂಮಿಕಾ ದ್ವಿತೀಯ ಪಿ.ಯು.ಸಿ.ಚಿನ್ನ,68ಕೆ.ಜಿ.ವಿಭಾಗದಲ್ಲಿ ಅಮಿಶಾ ಚೌದ್ರಿ ದ್ವಿತೀಯ ಪಿ.ಯು.ಸಿ.ಚಿನ್ನ,70ಕೆ.ಜಿ.ವಿಭಾಗದಲ್ಲಿ ಪ್ರಜ್ವಲ್ ಎಸ್ ಪೂಜಾರಿ ದ್ವಿತೀಯ ಪಿ.ಯು.ಸಿ.ಚಿನ್ನ,74ಕೆ.ಜಿ.ವಿಭಾಗದಲ್ಲಿ ಅದ್ವಿತ್ ದ್ವಿತೀಯ ಪಿ.ಯು.ಸಿ.ಚಿನ್ನ,86ಕೆ.ಜಿ.ವಿಭಾಗದಲ್ಲಿ ಶ್ರೀನಿಧಿ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ,92ಕೆ.ಜಿ.ವಿಭಾಗದಲ್ಲಿ ರೋಹಿತ್ ದ್ವಿತೀಯ ಪಿ.ಯು.ಸಿ.ಚಿನ್ನ,97 ಕೆ.ಜಿ.ವಿಭಾಗದಲ್ಲಿ ಚೇತನ್ ಖಾರ್ವಿ ದ್ವಿತೀಯ ಪಿ.ಯು.ಸಿ. ಚಿನ್ನ,125ಕೆ.ಜಿ.ವಿಭಾಗದಲ್ಲಿ ಶ್ರೀಷ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ,60ಕೆ.ಜಿ.ವಿಭಾಗದಲ್ಲಿ ಸ್ವಸ್ತಿಕ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ,72ಕೆ.ಜಿ.ವಿಭಾಗದಲ್ಲಿ ಗಗನ್ ಎಮ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ,87ಕೆ.ಜಿ.ವಿಭಾಗದಲ್ಲಿ ಗಣೇಶ್ ಕೆ.ದ್ವಿತೀಯ ಪಿ.ಯು.ಸಿ. ಚಿನ್ನ,97ಕೆ.ಜಿ.ವಿಭಾಗದಲ್ಲಿ ಸಂಪತ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಚಿನ್ನ,53ಕೆ.ಜಿ.ವಿಭಾಗದಲ್ಲಿ ದಿಶಾ ದ್ವಿತೀಯ ಪಿ.ಯು.ಸಿ. ಬೆಳ್ಳಿ,57ಕೆ.ಜಿ.ವಿಭಾಗದಲ್ಲಿ ಶ್ವೇತಾ ದ್ವಿತೀಯ ಪಿ.ಯು.ಸಿ. ಬೆಳ್ಳಿ,60ಕೆ.ಜಿ.ವಿಭಾಗದಲ್ಲಿ ರತನ್ ಪ್ರಥಮ ಪಿ.ಯು.ಸಿ. ಬೆಳ್ಳಿ,55ಕೆ.ಜಿ‌.ವಿಭಾಗದಲ್ಲಿ ಅಕ್ಷೋಭ್ಯ ದ್ವಿತೀಯ ಪಿ.ಯು.ಸಿ. ಬೆಳ್ಳಿ, 63ಕೆ‌.ಜಿ.ವಿಭಾಗದಲ್ಲಿ ಚೇತನ್ ಕುಮಾರ್ ದ್ವಿತೀಯ ಪಿ.ಯು.ಸಿ.ಬೆಳ್ಳಿ,77ಕೆ.ಜಿ.ವಿಭಾಗದಲ್ಲಿ ಆಶಿಕ್ ದೇವಾಡಿಗ ದ್ವಿತೀಯ ಪಿ.ಯು.ಸಿ. ಬೆಳ್ಳಿ,130ಕೆ.ಜಿ ವಿಭಾಗದಲ್ಲಿ ಸಮ್ರದ್ದ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ಬೆಳ್ಳಿ,50ಕೆ.ಜಿ.ವಿಭಾಗದಲ್ಲಿ ಅನನ್ಯ ಪ್ರಥಮ ಪಿ.ಯು.ಸಿ ಕಂಚಿನ ಪದಕ ಗಳಿಸಿದ್ದಾರೆ.

ಚಿನ್ನದ ಪದಕ ಪಡೆದ 13 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗುವುದರ ಮೂಲಕ ಸಾಧನೆ ಮೆರೆದಿದ್ದಾರೆ. ಒಟ್ಟಾರೆಯಾಗಿ 13 ಚಿನ್ನ, 7 ಬೆಳ್ಳಿ, 1 ಕಂಚಿನ ಪದಕ ಗಳಿಸುದರೊಂದಿಗೆ ಉಡುಪಿ ಜಿಲ್ಲೆಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ವಿದ್ಯಾರ್ಥಿಗಳ ಅದ್ಭುತ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು
ಅಭಿನಂದನೆ ಸಲ್ಲಿಸಿದ್ದಾರೆ.

Advertisement

Share
Team Kundapur Times

Recent Posts

ಲಯನ್ ಆಸರೆ ಯೋಜನೆ ಮನೆ ನಿರ್ಮಾಣ ಅಶಕ್ತರಿಗೆ ನೆರವು ವಿತರಣೆ

oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…

6 days ago

ಅಧ್ಯಕ್ಷರಾಗಿ ಸತೀಶ್‌ ಶೆಟ್ಟಿ ಹಕ್ಲಾಡಿ ಆಯ್ಕೆ

ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯ‌ರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…

1 month ago

ಕಾಪು:ಗೂಡ್ಸ್ ಟೆಂಪೋ ಪಲ್ಟಿ ನಾಲ್ವರು ಸಾವು

ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…

2 months ago

ಶಿಕ್ಷಕ ಸುರೇಂದ್ರಗೆ ಮಕ್ಕಳ ಮಿತ್ರ ಪ್ರಶಸ್ತಿ

ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…

2 months ago

ತ್ರಾಸಿ:ನಿಂತ್ತಿದ್ದ ಲಾರಿಯಲ್ಲಿ ಚಾಲಕನ ಶವ ಪತ್ತೆ

ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…

2 months ago

ಮರವಂತೆ ಸಮುದ್ರ ಕಿನಾರೆ ಸ್ವಚ್ಚತೆ

ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…

3 months ago