ಕುಂದಾಪುರ:ಶಿಕ್ಷಣ ಮತ್ತು ಸಂಸ್ಕಾರದ ಕುರಿತಾಗಿ ಸಾಕಷ್ಟು ಸ್ವಾರಸ್ಯಕರವಾಗಿರುವ ವಿಚಾರಗಳನ್ನು ಮನ ಮುಟ್ಟುವಂತೆ ವಿದ್ಯಾರ್ಥಿಗಳಿಗೆ ಜನತಾ ಕಾಲೇಜು ಶಿಕ್ಷಣ ಸಂಸ್ಥೆ ಬೋಧನೆ ಮಾಡುತ್ತಿರುವುದು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಂತೆ ಇದೆ ಎಂದು ಕಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ವಿಶ್ವನಾಥ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಗುರು ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಆಡಳಿತ ಮಂಡಳಿ ಅಧ್ಯಕ್ಷರಾದ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಜನತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜು ಕಾಳವಾರ,ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ್ ಪೂಜಾರಿ,ಬೋಧಕ,ಬೋಧಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಲಾಯಿತು.ಉಪನ್ಯಾಸಕ ಉದಯ್ ನಾಯ್ಕ್ ಪರಿಚಯಿಸಿದರು.ವಿದ್ಯಾರ್ಥಿಗಳಾದ ಕೇದಾರ್ ಮರವಂತೆ ಪ್ರಾರ್ಥಿಸಿದರು.ಪ್ರತೀಕ್ಷಾ ನಿರೂಪಿಸಿದರು.ಗೌತಮ್ ವಂದಿಸಿದರು.ಜನತಾ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶುಭಾಶಯವನ್ನು ಕೋರಿದರು.
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…