ಕುಂದಾಪುರ

ಮೂರ್ತೆದಾರರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ವಾರ್ಷಿಕ ಮಹಾಸಭೆ:ಶೇ.10 ಡಿವಿಡೆಂಡ್ ಘೋಷಣೆ

Share

ಕುಂದಾಪುರ:ಮೂರ್ತೆದಾರರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಅದರ 32ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸಂಘದ ತಲ್ಲೂರು ಮೂರ್ತೆದಾರರ ಸಭಾಭವನದಲ್ಲಿ ಬುಧವಾರ ನಡೆಯಿತು.ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಉದಯ ಪೂಜಾರಿ ಬಡಾಕೆರೆ ಸಭೆಯನ್ನುದ್ದೇಶಿಸಿ ಮಾತನಾಡಿ ಸಂಘವು ಎ ದರ್ಜೆಯ ಆಡಿಟ್ ವರ್ಗೀಕರಣ ಹೊಂದಿದ್ದು ವರದಿ ವರ್ಷದಲ್ಲಿ ರೂ.93,75,152.57 ನಿವ್ವಳ ಲಾಭ ಗಳಿಸಿದೆ.ಈ ಸಾಲಿನಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪೂಜಾರಿ ವರದಿ ಮಂಡಿಸಿ ಮಾತನಾಡಿ,ಸಂಘವು 90,90,950.ರೂ ಪಾಲು ಬಂಡವಾಳವನ್ನು ಹೊಂದಿದೆ.ಶೇ.5.59 ರಷ್ಟು ಪ್ರಗತಿ ಸಾಧಿಸಲಾಗಿದೆ. ವರ್ಷಾಂತ್ಯಕ್ಕೆ ಒಟ್ಟು 9814 ಸದಸ್ಯರಿದ್ದು ವರದಿ ವರ್ಷದಲ್ಲಿ ಸಂಘವು 50,50,83,953.39 ಠೇವಣಿ ಸಂಗ್ರಹಣೆ ಮಾಡಿದ್ದು,ಠೇವಣಿ ಸಂಗ್ರಹಣೆಯಲ್ಲಿ ಶೇ.17.94% ರಷ್ಟು ಹೆಚ್ಚಳ ಸಾಧಿಸಿದೆ.ಪ್ರಸತ್ತ ಸಾಲಿನಲ್ಲಿ ಒಟ್ಟು 39,57,37,389 ಸಾಲ ನೀಡಿದೆ ಇದರಲ್ಲಿ 38,58,84,651.80 ರೂ ಹೊರಬಾಕಿ ಸಾಲ ಇದ್ದು ಶೇ.7.72% ರಷ್ಟು ವೃದ್ಧಿಯಾಗಿದೆ.299 ಕಲ್ಪತರು ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರಯೋಜಿಸಿದ್ದು ಮಹಿಳಾ ಸಶಕ್ತಿಕರಣಕ್ಕಾಗಿ 7,44,22,129.ರೂ ಸಾಲ ನೀಡಲಾಗಿದ್ದು,ಲಾಭಾಂಶ ವಿತರಿಸಲಾಗಿದೆ ಎಂದರು.ಸಂಸ್ಥೆಯು ವರದಿ ವರ್ಷದಲ್ಲಿ ಒಟ್ಟು ವಹಿವಾಟು 227,57,98,267.24 ಇದರಲ್ಲಿ ದುಡಿಯುವ ಬಂಡವಾಳ 55,14,63,397.74 ಹೊಂದಿದೆ.ವಿವಿಧ ಬ್ಯಾಂಕು ಹಾಗೂ ಸಹಕಾರ ಸಂಘಗಳಲ್ಲಿ ಒಟ್ಟು 17,53,18,124.16 ಧನ ವಿನಿಯೋಗ ಮಾಡಲಾಗಿದೆ ಎಂದರು.ಕಲ್ಪತರು ಸ್ವಸಹಾಯ ಗುಂಪುಗಳ ಸದಸ್ಯರುಗಳಿಗೆ ಆಂತರಿಕ ಸಾಲ ಮರುಪಾವತಿ ವಿಷಯದಲ್ಲಿ ಎಸ್.ಎಂ.ಎಸ್ ಮೂಲಕ ಮಾಹಿತಿ ನೀಡುವ ತಂತ್ರಾಂಶವನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ನರಸಿಂಹ ಪೂಜಾರಿ ಹಕ್ಲಾಡಿ,ನಿರ್ದೇಶಕರಾದ ಕೃಷ್ಣ ಪೂಜಾರಿ,ಶಂಕರ ಪೂಜಾರಿ,ರಘು ಪೂಜಾರಿ,ನಾರಾಯಣ ಪೂಜಾರಿ,ಶ್ರೀನಿವಾಸ ಪೂಜಾರಿ,ಶೇಖರ ಪೂಜಾರಿ,ಜಯಪದ್ಮ ಸೇನಾಪುರ,ಸರೋಜ ಜಿ.ಪೂಜಾರಿ,ಮಹಾಮಂಡಳದ ನಿರ್ದೇಶಕ ಮಂಜು ಪೂಜಾರಿ ಉಪಸ್ಥಿತರಿದ್ದರು.ನಿರ್ದೇಶಕ ಕೃಷ್ಣ ಪೂಜಾರಿ ಸ್ವಾಗತಿಸಿದರು.ಆಲೂರು ಶಾಖಾ ವ್ಯವಸ್ಥಾಪಕ ನಾಗರಾಜ ಪೂಜಾರಿ ಬಜೆಟ್ ಮಂಡಿಸಿದರು.ಹಿರಿಯ ಲೆಕ್ಕಿಗ ರಮೇಶ ನಿವ್ವಳ ಲಾಭ ವಿಂಗಡಣೆ ವಾಚಿಸಿದರು.ನಾಗರಾಜ ಪೂಜಾರಿ ಕುರು ವಂದಿಸಿದರು.ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

(ಮೂರ್ತೆದಾರರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಅದರ 32ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸಂಘದ ತಲ್ಲೂರು ಮೂರ್ತೆದಾರರ ಸಭಾಭವನದಲ್ಲಿ ಬುಧವಾರ ನಡೆಯಿತು)

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

6 days ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

6 days ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 weeks ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

1 month ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

1 month ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

1 month ago