ಕುಂದಾಪುರ:ಗಾಂಜಾ,ಡ್ರಗ್ಸ್‍ನಂತಹ ಮಾದಕ ವಸ್ತುಗಳಿಗೆ ಯುವಕರು ಬಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಛತ್ತೀಸ್‍ಗಢ ರಾಯಭಾಗ್ ಮೂಲದ ನಿವಾಸಿ ನೇಮ್ ಕುಮಾರ್ ಎನ್ನುವ ಯುವಕ ಸೈಕಲ್‍ನಲ್ಲೆ ದೇಶಾದ್ಯಂತ ಸುತ್ತಿ ಮಾದಕ ವಸ್ತುಗಳ ವಿರುದ್ಧ ಅಭಿಯಾನವನ್ನು ಕೈಗೊಂಡಿದ್ದಾರೆ.
ಕಳೆದ 75 ದಿನಗಳ ಹಿಂದೆ ಛತ್ತೀಸ್‍ಗಢ ರಾಯಭಾಗ್‍ನಿಂದ ಸೈಕಲ್ ಮೂಲಕ ತೆರಳಿದ್ದ ನೇಮ್ ಕುಮಾರ್ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದಿದ್ದ ಅವರು ಬುಧವಾರ ಕುಂದಾಪುರ ತಾಲೂಕನ್ನು ಪ್ರವೇಶ ಮಾಡಿದ್ದಾರೆ.ಈ ಸೈಕಲ್ ಅಭಿಯಾನ ಒಂದು ವರ್ಷಗಳ ಕಾಲ ಮುಂದುವರೆಯಲಿದ್ದು ದೇಶಾದ್ಯಂತ ಸುತ್ತಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಪರಿಣಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಉದ್ದೇಶವಾಗಿದೆ.ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಡ್ರಗ್ಸ್ ಅಭಿಯಾನದ ಅಂಗವಾಗಿ ಸಂವಾದವನ್ನು ಮಾಡಲಾಗುತ್ತದೆ ಎಂದು ಹೇಳುತ್ತಾರೆ.
ನಗರಗಳಲ್ಲಿ ಕಂಡು ಬರುತ್ತಿದ್ದ ಡ್ರಗ್ಸ್ ಜಾಲ ಇತ್ತೀಚಿನ ವರ್ಷಗಳಲ್ಲಿ ಕುಂದಾಪುರ,ಬೈಂದೂರು ತಾಲೂಕಿನ ಹಳ್ಳಿಗಳ ಕಡೆಗೂ ವ್ಯಾಪಿಸಿರುವುದು ಆತಂಕದ ವಿಚಾರವಾಗಿದೆ.ಪೆÇಲೀಸ್ ಠಾಣೆಗಳಲ್ಲಿ ಕೇಸ್‍ಗಳು ದಾಖಲಾಗುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಕಾಲೇಜು ವಿದ್ಯಾರ್ಥಿಗಳು,ಯುವ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ವ್ಯವಹಾರ ನಡೆಸುತ್ತಿರುವ ಡ್ರಗ್ಸ್,ಗಾಂಜಾ ಜಾಲಕ್ಕೆ ಯುವಕರೆ ಸಾರಥಿಗಳು.ಚಾಕಲೇಟ್ ಸಿಗುವಷ್ಟು ಸುಲಭದಲ್ಲಿ ಗಾಂಜಾ,ಡ್ರಗ್ಸ್‍ನಂತಹ ಮಾದಕ ವಸ್ತುಗಳು ಯುವಕರ ಕೈ ಸೇರುತ್ತಿದೆ.ಹೆಣ್ಣು ಮಕ್ಕಳು ಕೂಡ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಹೆತ್ತವರ ಚಿಂತೆಗೆ ಕಾರಣವಾಗಿದೆ.
ಶೋಕಿ ಜೀವನಕ್ಕೆ ಯುವಕರು ಬಲಿ:ನಶೆಯನ್ನು ಏರಿಸಿಕೊಳ್ಳುವ ಗೀಳಿಗೆ ಬಿದ್ದ ಯುವ ಸಮುದಾಯ ತಮ್ಮ ಜೀವನದ ಸುಂದರ ದಿನಗಳನ್ನು ಕಳೆದುಕೊಳ್ಳುತ್ತಿರುವುದು ಮಾತ್ರವಲ್ಲದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನ ಕಂಬಿಗಳನ್ನು ಏಣಿಸಿಸುವುದರ ಜತೆಗೆ ಮಾನಸಿಕ ಖಿನ್ನತೆ ಅಂತಹ ರೋಗಗಳಿಗೆ ತುತ್ತಾಗಿ,ಆತ್ಮಹತ್ಯೆಗಳಂತಹ ಕೃತ್ಯಗಳಿಗೂ ಬಲಿಯಾಗುತ್ತಿದ್ದಾರೆ.ಯುವ ಜನತೆ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗ ಬಾರದೆಂದು ಪೊಲೀಸ್ ಇಲಾಖೆ ಮನವಿಯನ್ನು ಮಾಡಿಕೊಳ್ಳುತ್ತಿದೆ.
(ಡ್ರಗ್ಸ್,ಗಾಂಜಾ ಜಾಲಕ್ಕೆ ಯುವಕರೆ ಸಾರಥಿಗಳು:ಶೋಕಿ ಜೀವನಕ್ಕೆ ಯುವ ಸಮುದಾಯ ಬಲಿ)
ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…
ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…