ಕುಂದಾಪುರ:ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆ ಆಗುತ್ತಿದ್ದು ಸರಕಾರಿ ಆಸ್ಪತ್ರೆಯಲ್ಲಿರುವ ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾಡ,ಪಡುಕೋಣೆ,ಹಡವು,ಸೇನಾಪುರ ,ಬಡಾಕೆರೆ,ಮೊವಾಡಿ,ಹೆಮ್ಮುಂಜೆ ಭಾಗದ ಜನರು ನಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ.ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಜನರು ಆಸ್ಪತ್ರೆಗೆ ಆಗಮಿಸುತ್ತಿರುವುದರಿಂದ ರೋಗಿಗಳನ್ನು ಆರೈಕೆ ಮಾಡಲು ಬೆರಳೆಣಿಕೆಯಲ್ಲಿರುವ ಸಿಬ್ಬಂದಿಗಳಿಗೆ ಕಷ್ಟವಾಗುತ್ತಿದೆ.ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಕ್ರಮ ಕೈಗೊಂಡರೆ ಸಿಬ್ಬಂದಿಗಳಿಗೂ ಒತ್ತಡ ಕಡಿಮೆ ಆಗಲಿದೆ.ಸಾರ್ವಜನಿಕರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.ತಾಲೂಕು ಆಸ್ಪತ್ರೆಯಿಂದ ಸುಮಾರು 20.ಕಿ.ಮೀ ದೂರದಲ್ಲಿರುವ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕ್ಕೆನ್ನುವುದು ಸಾರ್ವಜನಿಕರ ಬಹು ವರ್ಷದ ಬೇಡಿಕೆ.ಸರಕಾರಿ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಿದರೆ ಗ್ರಾಮೀಣದ ಪ್ರದೇಶದ ಸಾವಿರಾರು ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…