ಕುಂದಾಪುರ:ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ಅಲೆಯ ರಭಸಕ್ಕೆ ನಾಡದೋಣಿಯೊಂದು ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಓರ್ವ ಮೀನುಗಾರ ಮೃತ ಪಟ್ಟಿದ್ದು,ಇನ್ನೋರ್ವ ಮೀನುಗಾರ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುವ ಹಿನ್ನೆಲೆಯಲ್ಲಿ 8 ಜನರಿದ್ದ ಮೀನುಗಾರರ ತಂಡ ನಾಡದೋಣಿ ಮೂಲಕ ಸಮುದ್ರಕ್ಕೆ ತೆರಳಿದ್ದಾರೆ,ಮೀನುಗಾರಿಕೆ ಮುಗುಸಿಕೊಂಡು ಮರಳಿ ದಡಕ್ಕೆ ಬರುತ್ತಿರುವ ಸಂದರ್ಭದಲ್ಲಿ ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿದ ನಾಡದೋಣಿ ಮಗುಚಿ ಬಿದ್ದಿದೆ.ದೋಣಿ ದುರಂತದಲ್ಲಿ ನಾಗೇಶ್ ಖಾರ್ವಿ (30) ಮೃತ ಪಟ್ಟಿದ್ದಾರೆ,ಸತೀಶ್ ಖಾರ್ವಿ (34) ಎಂಬುವವರು ಸಮುದ್ರದಲ್ಲಿ ನಾಪತ್ತೆ ಆಗಿದ್ದಾರೆ.6 ಜನ ಮೀನುಗಾರರು ಈಜಿ ಕೊಂಡು ದಡ ಸೇರಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಉಪ್ಪುಂದ ಭಾಗದಲ್ಲಿ ಸೂತಕದ ಛಾಯೆ ಮಡುಗಟ್ಟಿದೆ.ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ,ಸರ್ಕಲ್ ಸಂತೋಷ್ ಕಾಯ್ಕಿಣಿ,ಅಗ್ನಿಶಾಮಕ ದಳ ಸಿಬ್ಬಂದಿ,ಮೀನುಗಾರಿಕಾ ಸಹಾಯಕ ನಿರ್ದೇಶಕರು,ಮುಳುಗುತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಘಟನಾ ಸ್ಥಳದಲ್ಲಿ ಹಾಜರಿದ್ದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…