ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ಸುಮಾರು 2.ಲಕ್ಷ.ರೂ ಮೌಲ್ಯದ ಶ್ರೀಗಂಧದ ಮರದ ತಂಡುಗಳನ್ನು ಕ್ಷೀಪ್ರ ಕಾರ್ಯಾಚರಣೆ ಮೂಲಕ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬೆಳ್ಳಾಲ ಗ್ರಾಮದ ಕಾರಿಬೈಲು ಪರಿಸರದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಅನುಮಾನಾಸ್ಪದ ಪಟ್ಟ ಸ್ಥಳದಲ್ಲಿದ್ದ ಬೆಲೆಬಾಳುವ ಒಂದು ಶ್ರೀಗಂಧದ ಮರವನ್ನು ಆರೋಪಿಗಳು ಕಡಿದು ಸಾಗಾಟ ಮಾಡುವ ಹೊತ್ತಿನಲ್ಲಿ ಖಚಿತ ಮಾಹಿತಿ ಮೇರೆಗೆ ಡಿಸಿಎಫ್ ಉದಯ ಎಂ ನಾಯಕ್ ಅವರ ನಿರ್ದೇಶನದಂತೆ,ಎಸಿಎಫ್ ಕ್ಲಿಫರ್ಡ್ ಲೋಬೋ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು ಟಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಆನಂದ ಬಳೆಗಾರ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಇವೊಂದು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶರತ್ ಗಾಣಿಗ,ಗೀತ ಯಾಸಣ್ಣನವರ್,ಗಸ್ತು ಅರಣ್ಯ ಪಾಲಕ ರಾಘವೇಂದ್ರ,ವಿಜಯ ಕೆ,ಅರಣ್ಯ ವೀಕ್ಷಕ ಉದಯ ಮತ್ತು ವಾಹನ ಚಾಲಕ ಅಶೋಕ ಪಾಲ್ಗೊಂಡಿದ್ದರು.
ಕುಂದಾಪುರ:ದೇಶದ ಭದ್ರತೆ ಹಿತದೃಷ್ಠಿಯಿಂದ ನೌಕಪಡೆ,ಕಸ್ಟಮ್ಸ್ ಇಲಾಖೆ,ಕರಾವಳಿ ಕಾವಲು ಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬುಧವಾರದಿಂದ 2 ದಿನಗಳ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…