ಕುಂದಾಪುರ:ಓಮ್ನಿ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಆರೋಪಿಯನ್ನು ಕುಂದಾಪುರ ಪ್ರೊಬೆಶನರಿ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಬಂಧಿಸಿದ ಘಟನೆ ಕುಂದಾಪುರ ತಾಲೂಕಿನ ಕೋಡಿ ರಸ್ತೆಯಲ್ಲಿ ಬುಧವಾರ ನಡೆದಿದೆ.ಮೂಡುಗೋಪಾಡಿ ನಿವಾಸಿ ಮೊಹಮ್ಮದ್ ರಿಯಾಝ್(38) ಬಂಧಿತ ಆರೋಪಿ.ಜು.19 ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣಾ ಪ್ರೊಬೇಶನರಿ ಡಿವೈಎಸ್‌ಪಿ ರವಿ ಅವರಿಗೆ ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮಧಸೂದನ್,ರಾಮ ಪೂಜಾರಿ ಕರೆ ಮಾಡಿ ಕೋಡಿ ರಸ್ತೆಯಲ್ಲಿ ನೀಲಿ ಬಣ್ಣದ ಮಾರುತಿ ಓಮಿನಿ ವಾಹನದಲ್ಲಿ ಜಾನುವಾರು ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು, ಕುಂದಾಪುರ ಠಾಣೆ ಪಿಎಸ್ಐ ವಿನಯ ಎಮ್ ಕೊರ್ಲಹಳ್ಳಿ ಹಾಗೂ ಹೆಡ್ ಕಾನ್ಸ್‌ಟೇಬಲ್ ಅವಿನಾಶ್, ಸಂತೋಷ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದು ಹಳೆ ಅಳಿವೆ ಕಡೆಯಿಂದ ಲೈಟ್ ಹೌಸ್ ಕಡೆಗೆ ಬರುತ್ತಿದ್ದ ಕಾರನ್ನು ನಿಲ್ಲಿಸಿದಾಗ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ ಜಾನುವಾರು ಕಂಡುಬಂದಿದೆ.ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…
ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…
ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್ನಲ್ಲಿ ನಡೆದ 20ನೇ ರಾಜ್ಯ ಮಟ್ಟದ…