ಕುಂದಾಪುರ:ಕೊಲ್ಲೂರು -ಬೈಂದೂರು,ಕೊಲ್ಲೂರು -ಕುಂದಾಪುರ-ನಿಟ್ಟೂರಿಗೆ ಸರಕಾರಿ ಬಸ್ ಕಲ್ಪಿಸುವಂತೆ ಆಗ್ರಹಿಸಿ ಕೊಲ್ಲೂರು ಗ್ರಾಮ ಪಂಚಾಯಿತ್ ಎದುರು ಸ್ಥಳೀಯರು ಬೃಹತ್ ಪ್ರತಿಭಟನೆಯನ್ನು ನಡೆಸಿ ಮನವಿಯನ್ನು ನೀಡಿದರು.
ಕಾರ್ಮಿಕ ಮುಖಂಡ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮೀಣ ಪ್ರದೇಶವಾದ
ಕೊಲ್ಲೂರು ಪ್ರೇಕ್ಷಣೀಯ ಸ್ಥಳವಾಗಿದೆ ರಾಜ್ಯದ ಮೂಲೆ ಮೂಲೆಗಳಿಂದ ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ ಆದರೆ ಕೊಲ್ಲೂರಿಗೆ ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ,ಇಲ್ಲಿನ ಸ್ಥಳೀಯ ಮತ್ತು ಪ್ರವಾಸಿಗ ಮಹಿಳೆಯರು ಸರ್ಕಾರಿ ಬಸ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಖಾಸಗಿ ಎಕ್ಸ್ ಪ್ರೆಸ್ ಬಸ್ಸುಗಳು 2-3 ಕಿಮೀ ದೂರ ಕ್ರಮಿಸುವ ಸ್ಥಳೀಯ ಜನರಿಗೆ ನಿಲ್ಲಿಸದೇ ಇರುವುದು ಸ್ಥಳೀಯರಿಗೆ ತೊಂದರೆಯಾಗುತ್ತಿದೆ.ಆದುದರಿಂದ ಸ್ಥಳೀಯವಾಗಿ ಸರ್ಕಾರಿ ಬಸ್ಸುಗಳನ್ನು ಆರಂಭಿಸಿದರೆ ಕ್ರಷಿಕೂಲಿಕಾರರು, ಕಾರ್ಮಿಕರು,ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ಸಾವಿತ್ರಿ ಹೆಮ್ಮಾಡಿ ಮಾತನಾಡಿ, ಸ್ಥಳೀಯವಾಗಿ ಬಸ್ಸುಗಳು ಓಡಿಸದೇ ಇರುವುದು ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ.
ಕೊಲ್ಲೂರಿನಂತಹ ಧಾರ್ಮಿಕ ಸ್ಥಳಕ್ಕೆ ಬರಲು ಹರಸಾಹಸ ಹಾಗೂ ಅತೀ ಹೆಚ್ಚು ಹಣ ಖಾಸಗಿ ಬಸ್ಸಿಗೆ ಖರ್ಚು ಮಾಡಬೇಕಾದ ಪರಿಸ್ಥಿತಿಯನ್ನು ಸಾರಿಗೆ ಪ್ರಾಧಿಕಾರ ನಿರ್ಮಾಣ ಮಾಡಿದೆ ಎಂದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿ ಕೊಲ್ಲೂರಿಗೆ ಸರ್ಕಾರಿ ಬಸ್ ಓಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಕಟ್ಟಡ ಕಾರ್ಮಿಕರ ಸಂಘದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಪ್ರಾಸ್ತಾವಿಕ ಮಾತನಾಡಿದರು.ರಾಘವೇಂದ್ರ ಅರೆಶಿರೂರು ವಂದಿಸಿದರು.ನರಸಿಂಹ ಆಚಾರ್ ಕೊಲ್ಲೂರು,ಗಣೇಶ್ ತೊಂಡೆಮಕ್ಕಿ,ರಾಮ ಕಂಬದ ಕೋಣೆ,ಶೀಲಾವತಿ ಪಡುಕೋಣೆ,ಸಚಿನ್ ಕೊಲ್ಲೂರು,ಸುಜಾತಾ,ಶಾರದ, ಜ್ಯೋತಿ ಕೊಲ್ಲೂರು,ನಾಗರತ್ನ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಂ ಕ್ರಷ್ಣ ಭಟ್ ಅವರ ಮೂಲಕ ಸಾರಿಗೆ ಪ್ರಾಧಿಕಾರ ಅಧಿಕಾರಿಗೆ ಮನವಿ ನೀಡಲಾಯಿತು.
ಈ ವೇಳೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರುಕ್ಕನ ಗೌಡ ಹಾಜರಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಂ ಕ್ರಷ್ಣ ಭಟ್ ಅವರ ಮೂಲಕ ಸಾರಿಗೆ ಪ್ರಾಧಿಕಾರ ಅಧಿಕಾರಿಗೆ ಮನವಿ ನೀಡಲಾಯಿತು.
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…
ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ…
ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ…