ಬೆಂಗಳೂರು:ರಷ್ಯಾದಲ್ಲಿ ಬಂಡಾಯವೆದ್ದಿರುವ ಖಾಸಗಿ ಸೇನಾ ಗುಂಪಿನಿಂದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ಮೇಲಿನ ದಾಳಿ ಆರಂಭವಾದ ನಂತರ ರಷ್ಯಾದಲ್ಲಿ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಖಾಸಗಿ ಸೇನಾ ಗುಂಪು (ಮರ್ಸಿನರಿ) ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅವರು ತಮ್ಮ ಪಡೆಯು 25,000 ಸೈನಿಕರೊಂದಿಗೆ ರಷ್ಯಾದೊಳಗೆ ನುಗ್ಗಿದೆ ಎಂದು ಹೇಳಿಕೊಂಡಿದ್ದಾರೆ.
ರಷ್ಯಾ ಸೇನಾ ನಾಯಕತ್ವವನ್ನು ಉರುಳಿಸುವ ಪ್ರಯತ್ನವಾಗಿ ತನ್ನ ಸಶಸ್ತ್ರ ಪಡೆಗಳನ್ನು ಮಾಸ್ಕೋದ ಕಡೆ 1200 ಕಿಮೀ ದೂರದಿಂದ ಕಳುಹಿಸಲಾಗಿದೆ ಎಂದು ಪ್ರಿಗೊಝಿನ್ ಹೇಳಿದ್ದಾರೆ. ಸೇನಾ ಬೆಂಗಾವಲು ಉಕ್ರೇನ್ ಗಡಿ ಸಮೀಪದ ಯುರೋಪಿಯನ್ ರಷ್ಯಾದ ದಕ್ಷಿಣ ಭಾಗ ಹಾಗೂ ಮಾಸ್ಕೋವನ್ನು ಸಂಪರ್ಕಿಸುವ ಮಾರ್ಗದಲ್ಲಿ ತೆರಳುತ್ತಿದ್ದು, ಜನರು ಅಲ್ಲಿಂದ ದೂರ ಇರಬೇಕು ಎಂದು ರಷ್ಯಾ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಟೆಲಿಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದ ವ್ಯಾಗ್ನರ್ ಮುಖ್ಯಸ್ಥ ಪ್ರಿಗೊಝಿನ್, ತಾವು ದಕ್ಷಿಣ ಏಷ್ಯಾದ ರೋಸ್ತೊವ್ ಆನ್ ಡಾನ್ನಲ್ಲಿನ ಸೇನಾ ಕೇಂದ್ರ ಕಚೇರಿ ಒಳಗೆ ಇರುವುದಾಗಿ ಮತ್ತು ತಮ್ಮ ಪಡೆಯು ನಗರದ ಸೇನಾ ನೆಲೆಗಳ ಮೇಲೆ ನಿಯಂತ್ರಣ ಹೊಂದಿರುವುದಾಗಿ ತಿಳಿಸಿದ್ದಾರೆ. ಉಕ್ರೇನ್ ಭಾಗದಿಂದ ರಷ್ಯಾ ಒಳಗೆ ತಮ್ಮ ಸೇನೆ ಪ್ರವೇಶಿಸಿರುವುದಾಗಿ ಅವರು ಇದಕ್ಕೂ ಮೊದಲು ಹೇಳಿದ್ದರು. ತಾವು ಹಾಗೂ ತಮ್ಮ ಸಾವಿರಾರು ಸೈನಿಕರು ಸಾಯಲು ಸಿದ್ಧ ಎಂದಿದ್ದರು.
ವ್ಯಾಗ್ನರ್ ವಿರುದ್ಧ ಪುಟಿನ್ ಆಕ್ರೋಶ
ಇದು ಆಂತರಿಕ ವಿಶ್ವಾಸಘಾತುಕತನ ಎಂದು ಕಿಡಿಕಾರಿರುವ ವ್ಲಾಡಿಮಿರ್ ಪುಟಿನ್, ಬಂಡಾಯ ಎದ್ದಿರುವವರ ವಿರುದ್ಧ ಕಠಿಣಾತಿ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ರೋಸ್ತೊವ್ನಲ್ಲಿರುವ ಸನ್ನಿವೇಶವು ಬಹಳ ‘ಕ್ಲಿಷ್ಟಕರ’ವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…