ಕುಂದಾಪುರ

ನಾಡಕ್ಕೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

Share

ಕುಂದಾಪುರ:ಸರಕಾರಿ ಮತ್ತು ಖಾಸಗಿ ಬಸ್‍ಗಳಿಗೆ ಪರ್ಮಿಟ್ ಇದ್ದರೂ ಬಹಳಷ್ಟು ಕಡೆ ಸಂಚಾರ ಮಾಡುತ್ತಿಲ್ಲ ಕಲೆಕ್ಷನ್ ದೃಷ್ಟಿಯಲ್ಲಿಟ್ಟುಕೊಂಡು ಟ್ರಿಪ್‍ಗಳನ್ನು ಓಡಿಸುತ್ತಾ ಇದ್ದಾರೆ.ಸಾರಿಗೆ ಜನರ ಮೂಲಭೂತ ವ್ಯವಸ್ಥೆಗಳಲ್ಲಿ ಪ್ರಧಾನವಾದದ್ದು ಸರಿಯಾದ ದರದಲ್ಲಿ ಮತ್ತು ಸರಿಯಾದ ಸಮಯಕ್ಕೆ ದೊರೆಯದೆ ಹೊದರೆ ಹಲವಾರು ರೀತಿಯ ಸಮಸ್ಯೆಗಳಿಗೆ ಜನರು ಒಳಗಾಗುತ್ತಾರೆ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನಿರಾಜ್ ಕಾಟಿಪಳ್ಳ ಹೇಳಿದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ,ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ವತಿಯಿಂದ ನಾಡ ಗ್ರಾಮ ಪಂಚಾಯತ್ ಎದುರುಗಡೆ ಬುಧವಾರ ಹಮ್ಮಿಕೊಂಡಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಆರಂಭಿಸಲು ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಕ್ತಿ ಯೋಜನೆಯಿಂದ ಗ್ರಾಮೀಣ ಭಾಗದ ಬಡ ಮಹಿಳೆಯರು ವಂಚಿತರಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ಸರಕಾರಿ ಬಸ್‍ಗಳನ್ನು ಓಡಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.ಕ್ರಮ ಜರುಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಹೆಣ್ಣು ಮಕ್ಕಳ ಧ್ವನಿಯಾಗಿ ಹೋರಾಟ ರೂಪಗೊಳ್ಳಲಿದೆ ಎಂದರು.
ಡಿವೈಎಫ್‍ಐ ಸಂಘಟನೆಯ ಹಿರಿಯ ಮುಖಂಡ ರಾಜೀವ ಪಡುಕೋಣೆ ಮಾತನಾಡಿ ನಾಡಕ್ಕೆ ಸರಕಾರಿ ಬಸ್ ಕಲ್ಪಿಸುವುದರ ಜತೆಗೆ ಈ ಭಾಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮರವಂತೆ ಮಾರಸ್ವಾಮಿ ದೇವಸ್ಥಾನದ ಎದುರಿನ ರಸ್ತೆ ಅಭಿವೃದ್ಧಿಗೊಳಿಸಬೇಕು.ಮಾರಸ್ವಾಮಿ ದೇವಳದ ಎದುರುಗಡೆ ಸರಕಾರಿ ಬಸ್‍ಗಳನ್ನು ಶಾಶ್ವತವಾಗಿ ನಿಲ್ಲಿಸಲು ಕ್ರಮ ಜರುಗಿಸಬೇಕೆಂದರು.ಸುರೇಶ್ ಕಲ್ಲೆಗಾರ್,ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನ ನಾಡ ಮತ್ತು ಕಾರ್ಯದರ್ಶಿ ನಾಗರತ್ನ ಪಡುವರಿ,ಫಿಲಿಪ್ ಡಿಸಿಲ್ವ,ಎಚ್.ನರಸಿಂಹ,ವೆಂಕಟೇಶ ಕೋಣಿ,ನಾಡ-ಪಡುಕೋಣೆ ಘಟಕದ ಅಧ್ಯಕ್ಷ ನಾಗರಾಜ ಕುರು,ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.ನಾಡ ಭಾಗಗಕ್ಕೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಇತರ ಐದು ಬೇಡಿಕೆಗಳ ಈಡೇರಿಕೆಗಾಗಿ ನಾಡ ಗ್ರಾಮ ಪಂಚಾಯತ್ ಅಧ್ಯಕ್ಷರ ಮುಖೇನ ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾಧಿಕಾರಿ,ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

1 month ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

2 months ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

2 months ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

3 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

3 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 months ago