ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ “ಐಕ್ಯಂ” 2025 ಅದ್ದೂರಿಯಿಂದ ನಡೆಯಿತು.
ವಿಭಿನ್ನ ರೀತಿಯ ನೃತ್ಯ, ಸಂಗೀತದಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ ಸ್ವತಃ ತಾವೇ ವಿನ್ಯಾಸಗೊಳಿಸಿರುವ ಸೀರೆಯ ಮೇಲೆ ಚಿತ್ರಗಳ ಚಿತ್ತಾರ,ಎಂಬ್ರಾಡರಿ ಪ್ರದರ್ಶನ ಮತ್ತು ರ್‍ಯಾಂಪ್ ವಾಕ್ ಜರುಗಿತು.
ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ರಾಜ್ಯಶಾಸ್ತ್ರ ನಿವೃತ್ತ ಉಪನ್ಯಾಸಕ ಡಾ.ದಯಾನಂದ ನಾಯಕ್ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಅಧ್ಯಾಪಕರಾದ ಕರುಣಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಭವಿಷ್ಯವನ್ನು ಉತ್ತಮವಾಗಿ ನಿರ್ಮಿಸಿಕೊಳ್ಳುವುದು ನಮ್ಮ ಕೈಯಲ್ಲಿರುತ್ತದೆ.ಮತ್ತು ವಿದ್ಯೆಯ ಜೊತೆಗೆ ನಮ್ಮ ನಡತೆ ಎಂಬುದು ಅತಿ ಮುಖ್ಯವಾದಂತಹ ವಿಚಾರ ಎಂದು ತಿಳಿಸಿದರು.ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸು ಪಡೆಯಲು ಉತ್ತಮವಾದಂತಹ ಸಾಧಿಸುವ ಛಲಬೇಕು ಎಂದು ಶುಭ ಹಾರೈಸಿದರು. ನಿರ್ದೇಶಕಿ ಮಮತಾ ಮತ್ತು ಪ್ರಿನ್ಸಿಪಾಲ್ ಡಾ.ಸೀಮಾ.ಜಿ ಭಟ್ ಮತ್ತು ಸಾಂಸ್ಕೃತಿಕ ಸಮಿತಿಯ ವ್ಯವಸ್ಥಾಪಕಿ ರಾಝಿಕಾ ಉಪಸ್ಥಿತರಿದ್ದರು.ಸಂಸ್ಥೆಯ ಎಲ್ಲಾ ಉಪನ್ಯಾಸಕರ ಮತ್ತು ಉಪನ್ಯಾಸಕೇತರ ವೃಂದದವರು,ವಿದ್ಯಾರ್ಥಿ ವೃಂದದವರು ಭಾಗವಹಿಸಿದ್ದರು. ಉಪನ್ಯಾಸಕಿ ಅನ್ನಪೂರ್ಣ ಮತ್ತು ಪ್ರಿಯ ನಾಯಕ್ ಪರಿಚಯಿಸಿದರು. ಉಪನ್ಯಾಸಕಿ ಸಾಕ್ಷಿತಾ ಸ್ವಾಗತಿಸಿದರು,ಕನ್ನಡ ಉಪನ್ಯಾಸಕಿ ಅನುಪಮ ಪಿ ಭಟ್ ವಂದಿಸಿದರು,ವಾಣಿಜ್ಯ ವಿಭಾಗದ ಉಪನ್ಯಾಸಕಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಂದಾಪುರ:ಆರ್ಭಟಿಸಿದ ಗಾಳಿ ರಭಸಕ್ಕೆ ಬೈಂದೂರು ತಾಲೂಕಿನ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿನ ಪ್ರಾಂಗಾಣದ ಸೀಟ್ ಮಾಡು ತುಂಡು ತುಂಡಾಗಿ…
ಕುಂದಾಪುರ:ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿಸಿದ ಗಾಳಿ ಅಬ್ಬರಕ್ಕೆ ಅಕ್ಷರಹ ಸಹ ಕುಂದಾಪ್ರ ಮತ್ತು ಬೈಂದೂರು ತಾಲೂಕಿನ ಪ್ರದೇಶಗಳು…
ಕುಂದಾಪುರ:ಏಕಏಕಿ ಶನಿವಾರ ಸಂಜೆ ಬೀಸಿದ ಭಾರಿ ಗಾಳಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಒಳಪಟ್ಟಿರುವ ತಲ್ಲೂರು ಉಪವಿಭಾಗದ ವ್ಯಾಪ್ತಿಯಲ್ಲಿನ ಹೆಮ್ಮಾಡಿ,ದೇವಲ್ಕುಂದ,ಆಲೂರು,ಬಡಾಕೆರೆ,ಗಂಗೊಳ್ಳಿ…
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಸನ್ಯಾಸಿಬಲ್ಲೆ ಸ್ಮಶಾನ ಹಾಗೂ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಅನಾದಿ ಕಾಲದ ರಸ್ತೆಯನ್ನು…
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…