ಕುಂದಾಪುರ

ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಕುಂದಾಪುರದಲ್ಲಿ ಶುಭಾರಂಭ

Share

ಕುಂದಾಪುರ:ಸಿಸಿಟಿವಿ ಮತ್ತು ಮಾನಿಟರಿಂಗ್ ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಹೆಸರನ್ನು ಗಳಿಸಿರುವ ದಿಗಂತ ಶೆಟ್ಟಿ ಮತ್ತು ದಿಕ್ಷೀತ್ ಶೆಟ್ಟಿ ಮಾಲಿಕತ್ವದಲ್ಲಿ ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಬುಧವಾರ ಕುಂದಾಪುರ ಯುವ ಜನಾ ಕಾಂಪ್ಲೆಕ್ಸ್ನಲ್ಲಿ ಅದ್ದೂರಿಯಾಗಿ ಶುಭರಂಭಗೊಂಡಿತು.
ನಾನಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖೇನ ಸಂಸ್ಥೆಯ ಶುಭಾರಂಭ ಕಾರ್ಯಕ್ರಮವನ್ನು ಮಾಡಲಾಯಿತು.
ಗಣ್ಯರು,ಉದ್ಯಮಿಗಳು,
ಅಧಿಕಾರಿ ವರ್ಗದವರು ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಶುಭಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿ.ಕಛೇರಿ ನಿರ್ವಹಣೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಪ್ರಶಂಸಿಸಿದ ಅವರು ಸಂಸ್ಥೆ ಸಾರ್ವಜನಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿನೂತನವಾದ ಶೈಲಿಯಲ್ಲಿ ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಕುಂದಾಪುರ,ಬೈಂದೂರು ಸೇರಿದಂತೆ ಹೊರಾ ಜಿಲ್ಲೆಗಳಲ್ಲಿ ಕಾರ್ಯಚರಣೆ ಮಾಡಲಿದೆ.
ಬೆಳೆಯುತ್ತಿರುವ ನಗರೀಕರಣಕ್ಕೆ ಭತ್ರದೆ ವ್ಯವಸ್ಥೆ ಕಲ್ಪಿಸುವುದು ಸರಕಾರಕ್ಕೂ ಹೊರೆಯಾಗಲಿದ್ದು.ಖಾಸಗಿ ಸಂಸ್ಥೆಗಳ ಅವಶ್ಯಕತೆ ಬಹಳಷ್ಟು ಇದೆ.ಆ ನಿಟ್ಟಿನಲ್ಲಿ ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಸಾರ್ವಜನಿಕ ಸೇವಾ ವಲಯದಲ್ಲಿ ತನ್ನ ವಿಶಿಷ್ಟವಾದ ಕಾರ್ಯಚರಣೆ ಮೂಲಕ ದಿನದ 24 ಗಂಟೆ ಕೆಲಸವನ್ನು ಮಾಡಲು ಮುಂದುಡಿ ಇಟ್ಟಿದೆ.
ಬ್ಯಾಂಕ್,ಸೊಸೈಟಿ,ಶಿಕ್ಷಣ ಸಂಸ್ಥೆ,ಆಭರಣ ಮಳಿಗೆ,ಕಮರ್ಷಿಯಲ್ ಬಿಲ್ಡಿಂಡಿಗ್,ಫ್ಯಾಕ್ಟರಿ,ಕೃಷಿ ತೋಟ,ಮನೆ ಮಠಗಳಿಗೆ ಸೇವೆಯನ್ನು ನೀಡಲಿದ್ದು.ಭತ್ರದೆಯ ದೃಷ್ಟಿಯಿಂದ ಸಾರ್ವಜನಿಕರು ಸಂಸ್ಥೆಯ ಸೇವೆಯನ್ನು ಬಳಸಿಕೊಳ್ಳಬಹುದು.
ಕಳೆದ ಆರು ತಿಂಗಳಿನಿಂದ ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಕುಂದಾಪುರದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದು ಮಾನಿಟರಿಂಗ್ ಕ್ಷೇತ್ರದಲ್ಲಿ ಅನುಭವವುಳ್ಳ ಸಂಸ್ಥೆಯಾಗಿದೆ.
ಬಳಕೆದಾರರಿಗೆ ಉಚಿತವಾಗಿ ಕ್ಯಾಮೆರಾವನ್ನು ಸಂಸ್ಥೆ ಅಳವಡಿಕೆ ಮಾಡಿಕೊಡುತ್ತಿದ್ದು.ನಿರ್ವಹಣೆ ಶುಲ್ಕವನ್ನು ಮಾತ್ರ ತಿಂಗಳು,ವಾರ್ಷಿಕ ರೂಪದಲ್ಲಿ ಪಡೆದುಕೊಳ್ಳುತ್ತದೆ.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ,ಲೈವ್ ಮಾನಿಟರಿಂಗ್ ಸಿಸ್ಟಮ್ ಕುಂದಾಪುರದಲ್ಲಿ ಹೊಸ ವಿನ್ಯಾಸದೊಂದಿಗೆ ಆರಂಭಗೊಂಡಿರುವುದರಿಂದ ಉತ್ತಮ ಸಂಸ್ಥೆ ನಮ್ಮ ಊರಿಗೆ ದೊರಕಿ ದಂತೆ ಆಗಿದೆ.ಭದ್ರತೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಸಂಸ್ಥೆಯ ಏಳಿಗೆಗೆ ಶುಭವನ್ನು
ಹಾರೈಸಿದರು.
ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಮಾತನಾಡಿ,
ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಪ್ರಕರಣಗಳು ಸಂಭವಿಸಿದಂತಹ ಸಂದರ್ಭದಲ್ಲಿ ಸಿಸಿಟಿವಿ ಮಾನಿಟರಿಂಗ್ ಸಿಸ್ಟಮ್ ಬಹಳಷ್ಟು ಕೊಡುಗೆ ನೀಡಿರುವುದನ್ನು ನಾವು ಗಮನಿಸಿದ್ದೇವೆ.ಆವೊಂದು ನಿಟ್ಟಿನಲ್ಲಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕುಂದಾಪುರ ಪ್ರದೇಶದಲ್ಲಿ ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ತನ್ನದೆ ರೀತಿಯಲ್ಲಿ ಕೆಲಸವನ್ನು ಮಾಡಲಿದ್ದು.ಸಾರ್ವಜನಿಕ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಲು ಮುಂದಾಗಿರುವುದು ಹೊಸ ಬೆಳವಣಿಗೆ ಆಗಿದೆ.
ನಟ ಪ್ರಮೋದ್ ಶೆಟ್ಟಿ ಅವರು ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿ,ಯುವಕರು ಹೊಸ ಕಲ್ಪನೆ ಮತ್ತು ವಿಶೇಷವಾದ ಆಲೋಚನೆಯೊಂದಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.ಸಾರ್ವಜನಿಕ ಕ್ಷೇತ್ರಕ್ಕೆ ಭದ್ರತಾ ಸಂಸ್ಥೆಗಳ ಅವಶ್ಯಕತೆ ಬಹಳಷ್ಟಿದ್ದು ಸಮಾಜಕ್ಕೆ ಫೆರ್ಲ್ಸ್ ಸೆಕ್ಯೂರಿಟಿ ಸಿಸ್ಟಮ್ ಸಂಸ್ಥೆ ತನ್ನದೆ ರೀತಿಯಲ್ಲಿ ಕೊಡುಗೆ ನೀಡಲಿದೆ.ಸಂಸ್ಥೆ ಸೌಲಭ್ಯವನ್ನು ಎಲ್ಲರೂ ಬಳಕೆ ಮಾಡಿಕೊಳ್ಳುವಂತೆ ಆಗಲಿ ಎಂದು ಶುಭ ಹಾರೈಸಿದರು.
ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಪಾಲುದಾರರಾದ ದಿಗಂತ ಶೆಟ್ಟಿ ಮತ್ತು ದೀಕ್ಷಿತ್ ಶೆಟ್ಟಿ ಮಾತನಾಡಿ,ಕಳೆದ ಹತ್ತು ವರ್ಷಗಳಿಂದ ಸಿಸಿಟಿವಿ ಅಳವಡಿಕೆ ಸೇರಿದಂತೆ ಮಾನಿಟರಿಂಗ್ ಸಿಸ್ಟಮ್‌ನಲ್ಲಿ ಅನುಭವನ್ನು ಹೊಂದಲಾಗಿದ್ದು.5ಜಿ ನೆಟ್‌ವರ್ಕ್ ಮತ್ತು ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ಆಧುನಿಕ ವ್ಯವಸ್ಥೆಯೊಂದಿಗೆ ಸಂಸ್ಥೆ ಆರಂಭಿಸಲಾಗಿದೆ.ಸಾರ್ವಜನಿಕರು ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ
ಕಂಬದಕೋಣೆ ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ,ಚಲನಚಿತ್ರ ನಟರಾದ ದೀಪಕ್ ಶೆಟ್ಟಿ,ರಕ್ಷಿತ್ ಶೆಟ್ಟಿ,ದಿವ್ಯಧರ ಶೆಟ್ಟಿ ಹಾಗೂ ಪ್ರೇಮಾನಂದ ಕಟ್ಕಕೆರೆ,ಡಾ.ಅತುಲ್ ಕುಮಾರ್ ಶೆಟ್ಟಿ,ಹರ್ಷವರ್ಧನ್,ಸ್ನೇಹಿತರು,ಹಿತೈಷಿಗಳು,ಬಂಧುಗಳು ಭೇಟಿ ನೀಡಿ ಶುಭಹಾರೈಸಿದರು.
ಫಿಯರ್ಲೆಸ್ ಸೆಕ್ಯೂರಿಟಿ ಸಿಸ್ಟಮ್ ಪಾಲುದಾರರಾದ ರಕ್ಷಿತ್ ಶೆಟ್ಟಿ ಸ್ವಾಗತಿಸಿದರು.

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

3 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago