ಕುಂದಾಪುರ

ಹೊಳ್ಮಗೆ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂರ್ಜುಲಿ ಹಾಗೂ ಪರಿವಾರ ದೈವಗಳ ವಾರ್ಷಿಕ ಗೆಂಡಸೇವೆ

Share

Advertisement
Advertisement
(ಪಂಜುರ್ಲಿ)

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ವರ್ಷಂಪ್ರತಿ ನಡೆಯುವ ಶ್ರೀ ದೇವರ ವಾರ್ಷಿಕ ಗೆಂಡಸೇವೆ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಮತ್ತು ಹಣ್ಣುಕಾಯಿ ಸೇವೆ ಹಾಗೂ ತುಲಾಭಾರ ಸೇವೆ,ದೈವದರ್ಶನ ಸೇವೆ,ಹರಕೆ ಕೋಲ ಜರುಗಿತು.
ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕಷ್ಟ ಕಾಲದಲ್ಲಿ ಹೇಳಿ ಕೊಂಡ ಹರಕೆಯನ್ನು ಸಲ್ಲಿಸಿದರು.
ವಾರ್ಷಿಕ ಹಬ್ಬದ ಅಂಗವಾಗಿ ದೈವಸ್ಥಾನವನ್ನು ಹೂವಿನ ಅಲಂಕಾರ ಮತ್ತು ದೀಪಾಲಂಕಾರದಿಂದ ಶೃಂಗರಿಸಲಾಯಿತು.
ಬಂಟರಗರಡಿ,ಹೋರ್ ಬೊಬ್ಬರ್ಯ ಹಾಗೂ ನೇತ್ರ ಹ್ಯಾಗುಳಿ ದೈವಸ್ಥಾನದ ದೈವಗಳು ಜತೆಯಾಗಿ ಕೊಡಿ ನೀರಿಗೆ ಅರ್ಚಕರ ಮನೆಗೆ ಹೊಗುವುದು ವಿಶೇಷವಾಗಿದೆ.ಚಂಡೆ ಡೋಲು ವಾದ್ಯ ಘೋಷದೊಂದಿಗೆ ದೈವವನ್ನು ಮೆರವಣಿಗೆ ಮೂಲಕ ಕೊಡಿ ನೀರಿಗೆ ಭಕ್ತ ಸಮೂಹವು ಬರಮಾಡಿ ಕೊಳ್ಳುತ್ತಾರೆ.
ಹೊಳ್ಮಗೆ ಶ್ರೀ ಬಹ್ಮ ಬೈದರ್ಕಳ ಕೋಟಿ ಚೆನ್ನಯ್ಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ಗರಡಿ ದೈವಸ್ಥಾನದ ಕಾರ್ಯದರ್ಶಿ ಚಂದ್ರಹಾಸ ಮಾತನಾಡಿ,400 ವರ್ಷಗಳ ಕಾಲ ಇತಿಹಾಸವನ್ನು
ಹೊಂದಿರುವ ದೈವಸ್ಥಾನವೂ ಬಹಳಷ್ಟು ಪುರಾತನ ದೈವಸ್ಥಾನಗಳಲ್ಲಿ ಒಂದಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಂತಹ 66 ಗರಡಿಯಲ್ಲಿ ಇದು ಸಹ ಒಂದು ಗರಡಿ ಆಗಿದೆ.ತುಂಬಾ ಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಇತ್ತಿಚಿಗೆ ಪುನರ್ ನಿರ್ಮಾಣ ಮಾಡಲಾಗಿದೆ ಎಂದರು.ಬಂಟರಗರಡಿ,
ಹೋರ್ ಬೊಬ್ಬರ್ಯ,ನೇತ್ರ ಹೈಗುಳಿ ದೈವಸ್ಥಾನದ ಹಬ್ಬ ಒಟ್ಟಿಗೆ ನಡೆಯುವುದು ವಿಶೇಷವಾಗಿದೆ ಎಂದರು.
ದೈವಸ್ಥಾನದ ಗೌರವಾಧ್ಯಕ್ಷರಾದ ಕೆ.ಸೂರ ಮೊಗವೀರ ಅವರು ಮಾತನಾಡಿ,ವಾರ್ಷಿಕ ಗೆಂಡ ಸೇವೆ ಜತೆಗೆ ಹಾಲುಹಬ್ ವಿಶೇಷವಾದ ರೀತಿಯಲ್ಲಿ ನಡೆಯುತ್ತದೆ.ದೈವವನ್ನು ನಂಬಿದ ಕುಟುಂಸ್ಥರು ಉತ್ತರೋತ್ತರವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ಪಂಜುರ್ಲಿ ದೈವದ ಕಾರಣಿಕ ಶಕ್ತಿಗೆ ಸಾಕ್ಷಿಭೂತವಾಗಿದೆ.ಪಂಜುರ್ಲಿ ಮಾತಾಡಿ ಹಾಳು ಮಾಡುವುದಿಲ್ಲ ನಂಬಿದ ಭಕ್ತರನ್ನು ಎಂದಿಗೂ ಕೈಬಿಡುವುದಿಲ್ಲ.ದೈವಸ್ಥಾವನ್ನು ಅಭಿವೃದ್ಧಿಗೊಳಿಸಲು ಹೊದಂತಹ ಸಂದರ್ಭದಲ್ಲಿ ದೈವವೇ ಮುಂದೆ ನಿಂತು ಎಲ್ಲಾ ಕೆಲಸವನ್ನು ಮಾಡಿಸಿಕೊಂಡಿದೆ ಎಂದು ಕ್ಷೇತ್ರದ ಮಹಿಮೆ ಬಗ್ಗೆ ವಿವರಿಸಿದರು.
ಮೂರು ದೈವಸ್ಥಾನಗಳ ಸಮಿತಿ ಒಳ್ಳೆ ರೀತಿ ಕೂಡುವಿಕೆ ಯಿಂದ ನಡೆದುಕೊಂಡು ಹೋಗುತ್ತಿದೆ.ಬಂಟರ ಗರಡಿ ದೈವಸ್ಥಾನದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಬೇಕೆನ್ನುವ ಆಶೆಯನ್ನು ಹೊಂದಿದ್ದು ಭಕ್ತರು ನಮ್ಮ ಜತೆ ಕೈ ಜೋಡಿಸಬೇಕು
ಎಂದು ಹೇಳಿದರು.ಈ ಸಂದರ್ಭದಲ್ಲಿ ದೈವಸ್ಥಾನದ
ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಹೊಸ್ಮಗೆ,ಅರ್ಚಕರಾದ
ಸಂಜೀವ ಪೂಜಾರಿ,ಸದಸ್ಯರಾದ ಸತೀಶ ಪೂಜಾರಿ
ಕುಂದಬಾರಂದಾಡಿ,
ಭಾಸ್ಕರ ಪೂಜಾರಿ,ಗ್ರಾಮಸ್ಥರು,ಭಕ್ತಾದಿಗಳು
ಉಪಸ್ಥಿತರಿದ್ದರು.

Advertisement

ವರದಿ: ಜಗದೀಶ್ ದೇವಾಡಿಗ ಮುಳ್ಳಿಕಟ್

9916284048

Advertisement
Advertisement
Advertisement

Share
Team Kundapur Times

Recent Posts

ಹೊಳ್ಮಗೆ ನೇತ್ರಹೈಗುಳಿ,ಸಪರಿವಾರ ದೈವಸ್ಥಾನದ ವಾರ್ಷಿಕ ಗೆಂಡೆ ಸೇವೆ ಸಂಪನ್ನ

ನೇತ್ರ ಹೈಗುಳಿ ಕುಂದಾಪುರ:ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ನೇತ್ರ ಹೈಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಗೆಂಡ ಸೇವೆ…

2 hours ago

ಹೊಳ್ಮಗೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಗೆಂಡ ಸೇವೆ,ಮಹಾ ಅನ್ನಸಂಪರ್ಣೆ

ಅಮ್ಮನವರು (ಹೋರ್ ಬೊಬ್ಬರ್ಯ) ಕುಂದಾಪುರ:ಹೊಳ್ಮಗೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ…

2 hours ago

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಸ್ಟಾಕ್ ಮಾರ್ಕೆಟ್,ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ ಸ್ಟಾಕ್ ಮಾರ್ಕೆಟ್ ನಲ್ಲಿ ವೃತ್ತಿ ಮಾರ್ಗದರ್ಶನ…

9 hours ago

ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಪ್ರಾನಂಜಲಿ ರಾಜ್ಯಕ್ಕೆ ಪ್ರಥಮ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಪದವಿ ಕಾಲೇಜಿನ ವಿದ್ಯಾರ್ಥಿನಿ ಪ್ರಾನಂಜಲಿ ಕೆ.ಹೆಚ್ ಬಿಸ್ಸಿ. ಪುಡ್ ಟೆಕ್ನಾಲಜಿ 2021-2024 ಸಾಲಿನ…

1 day ago

ಆಲೂರು:ಸಾವಿನಲ್ಲೂ ಸಾರ್ಥಕತೆ ಮೆರೆದ ರತ್ನಾಕರ ಜೊಯಿಸ್

ಕುಂದಾಪುರ:ತಾಲೂಕಿನ ಆಲೂರು ಗ್ರಾಮದ ನಿವಾಸಿ ರತ್ನಾಕರ ಜೊಯಿಸ್ (48) ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದರ ಮುಖೇನ ಸಾವಿನಲ್ಲೂ ಸಾರ್ಥಕತೆ…

2 weeks ago

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ, ಉಪನ್ಯಾಸಕರಿಗೆ “ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ” ಕಾರ್ಯಕ್ರಮ

ಕುಂದಾಪುರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಎಲ್ಲಾ ಉಪನ್ಯಾಸಕರಿಗೆ "ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ" ಎಂಬ ಕಾರ್ಯಕ್ರಮ ನಡೆಸಲಾಯಿತು .ಈ…

2 weeks ago