ಕುಂದಾಪುರ:ಹೊಳ್ಮಗೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನದ ವಾರ್ಷಿಕ ಹಬ್ಬದ ಅಂಗವಾಗಿ ಶ್ರೀ ದೇವರಿಗೆ ಮಹಾ ಮಂಗಳಾರತಿ ಸೇವೆ,ಹಣ್ಣು ಕಾಯಿ ಸೇವೆ,ಗೆಂಡ ಸೇವೆ,ಯಕ್ಷಗಾನ ಸೇವೆ,ದೈವ ದರ್ಶನ ಸೇವೆ,ಪಾಣರಾಟ ಸೇವೆ,ತುಲಾಭಾರ ಸೇವೆ,ವಿಶೇಷ ಪೂಜೆ ಜರುಗಿತು.
ವಾರ್ಷಿಕ ಹಬ್ಬದ ಪ್ರಯುಕ್ತ ದೈವಸ್ಥಾನವನ್ನು ಪುಷ್ಪಾಲಂಕಾರ ಹಾಗೂ ದೀಪಾಲಂಕಾರದಿಂದ ಶೃಂಗಾರಿಸಲಾಗಿತ್ತು.
ಶ್ರೀಹೋರ್ ಬೊಬ್ಬರ್ಯ ದೈವಸ್ಥಾನ,ಶ್ರೀ ನೆತ್ರ ಹ್ಯಾಗುಳಿ ಹಾಗೂ ಬಂಟರ ಗರಡಿ ದೈವಸ್ಥಾನದ ಮೂರು ದೈವಗಳು ಜೊತೆಯಾಗಿ ಕೊಡಿ ನೀರಿಗೆ ಹೋಗುವುದು ಇಲ್ಲಿನ ವಿಶೇಷವಾದ ಆಚರಣೆ ಆಗಿದೆ. ಚಂಡೆ,ವಾದ್ಯ ಘೋಷದೊಂದಿಗೆ ದೈವವನ್ನು
ಮೆರವಣಿಗೆ ಮೂಲಕ ಕೊಡಿ ನೀರಿಗೆ ಕರೆದುಕೊಂಡು ಹೋಗಲಾಗುತ್ತದೆ.ಇದು ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿ ಆಗಿದೆ.
ಶ್ರೀ ಹೋರ್ ಬೊಬ್ಬರ್ಯ ಮತ್ತು ಅಮ್ಮನವರು ಹಾಗೂ ಸಹಪರಿವಾರ ದೈವಗಳ ಕಾರಣಿಕ ಶಕ್ತಿ ಮತ್ತು ದೇವರ ಮೇಲಿರುವ ನಂಬಿಕೆಯಿಂದ ವರ್ಷದಿಂದ ವರ್ಷಕ್ಕೆ ಭಕ್ತ ಸಮೂಹದ ಸಂಖ್ಯೆ ಅಧಿಕವಾಗುತ್ತಿದೆ.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…