ಕುಂದಾಪುರ:ಆಲೂರು ಗ್ರಾಮದ ತಾರಿಬೇರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ತೃತೀಯ ವರ್ಷದ ಪ್ರತಿಷ್ಠಾ ವರ್ಧಂತೋತ್ಸವ ಸಂಭ್ರಮದ ನಡೆಯಿತು.
ಬೆಳಿಗ್ಗೆ ಶ್ರೀ ದೇವರಿಗೆ
ಅಷ್ಟೋತ್ತರ ಶತ ಪರಿಕಲಶ ಸಹಿತ ಪ್ರಧಾನ ಬ್ರಹ್ಮ ಕುಂಭಾಭಿಷೇಕ.
ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ಮತ್ತು ಸಂಜೆ ಶ್ರೀ ದೇವರಿಗೆ ರಂಗ ಪೂಜೆ ಹಾಗೂ ಸೋಮನಾಥೇಶ್ವರ ಭಜನಾ ಮಂಡಳಿ ತಾರಿಬೇರು ಇವರಿಂದ ಕುಣಿತ ಭಜನೆ ಕಾರ್ಯಕ್ರಮ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ದೇವಸ್ಥಾನ ಪ್ರಾಂಗಣದಲ್ಲಿ
ದೀಪಾಲಂಕಾರ ಹೂವಿನ ಅಲಂಕಾರ ಕಂಗೊಳಿಸುತ್ತಿತ್ತು
ರಾತ್ರಿ 8-00ಗಂಟೆಗೆ ಶ್ರೀ ಕೃಷ್ಣ ನೃತ್ಯ ಕಲಾ ತಂಡ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಿಸ್ಮತಿ, ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ 9-00ಗಂಟೆಗೆ ಕಲಾಚಿಗುರು ಕಲಾ ತಂಡ, ಹಳ್ಳಾಡಿ, ಕುಂದಾಪುರ ಕುಂದ ಕನ್ನಡ ಕುತೂಹಲ ಭರಿತ ಹಾಸ್ಯ ನಗೆ ನಾಟಕ ನಡೆಯಿತು.
ಧಾರ್ಮಿಕ ಸಭಾ ವೇದಿಕೆಯನ್ನು
ಧಾರ್ಮಿಕ ಮುಖಂಡ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಉದ್ಘಾಟಿಸಿ ಮಾತನಾಡಿ
ಧೂಪ, ದೀಪ, ನೈವೇದ್ಯಗಳಿಲ್ಲದೇ ಇಂದಿಗೂ ಹಲವಾರು ದೇವಾಲಯಗಳು ಅಜೀರ್ಣಾವಸ್ಥೆಯಲ್ಲಿವೆನಮ್ಮೂರಿನ ದೇವಾಲಯ ಎಂಬ ಭಾವನೆಯಿಂದ ಆ ಗ್ರಾಮದವರೆಲ್ಲರೂ ಒಂದಾಗಿ ಅತಿಯಾದ ಪ್ರಯತ್ನ ಹಾಗೂ ಭಕ್ತಿ ಭಾವಗಳಿಂದ ದೇವರಲ್ಲಿ ಪ್ರಾರ್ಥಿಸಿ ಸಂಕಲ್ಪಿಸಿಕೊಂಡಾಗ ಮಾತ್ರ ಅಂತಹ ದೇವಾಲಯಗಳು ಜೀರ್ಣೋದ್ಧಾರವಾಗಲು ಸಾಧ್ಯವಾಗುತ್ತದೆ
ಎಂದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು. ಎಚ್. ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ
ದೇವರ ಭಯವೇ ಜ್ಞಾನದ ಮೂಲ ಎಂಬಂತೆ ಪ್ರತಿಷ್ಠಾಪಿಸಿದ ಕಲ್ಲಿನಲ್ಲಿರುವ ಶಕ್ತಿಯನ್ನು ನಮ್ಮ ಅಂತರಂಗದಲ್ಲಿರುವ ಭಕ್ತಿಯ ಮೂಲಕ ಆರಾಧಿಸಿದಾಗ ಹಾಗೂ ನಾವು ಮಡುವ ಕರ್ಮಗಳು ಸ್ಪಷ್ಟವಾಗಿದ್ದಾಗ ಮಾತ್ರ ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ.
ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಯನ್ನು ಸಮರ್ಪಿಸಿದರು.
ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಹಾಗೂ ಮೆಸ್ಕಾಂ ನಾಡ ಶಾಖೆ ಲೈನ್‍ಮ್ಯಾನ್ ಗಿರಿ ಗೌಡ, ಆಲೂರು ಪ್ರೌಢಶಾಲಾ ಶಿಕ್ಷಕರಾದ ಉದಯ್ ಕುಮಾರ್ ಶೆಟ್ಟಿ,ಇವರನ್ನು ಸನ್ಮಾನಿಸಲಾಯಿತು.
ದೇವಸ್ಥಾನಕ್ಕೆ ಸಹಕರಿಸಿದ ಸೇವದಾರರನ್ನು ಮತ್ತು
ದಾನಿಗಳನ್ನು ಗೌರವಿಸಲಾಯಿತು. ತಾರಿಬೇರು ಒಂದನೇ ವಾರ್ಡ್ ವ್ಯಾಪ್ತಿಯ, ಈ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕೂ ಮೇಲ್ಪಟ್ಟು ಅಂಕಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪಡುಕೋಣೆ ಜ್ಯೋತಿಷಿ ರಾಜೇಶ ಹೆಬ್ಬಾರ್ ಆಶಯನುಡಿಗಳನ್ನು ಹಾಗೂ ಉಳ್ಳೂರು ಶ್ರೀ ಕಾರ್ತೀಕೇಯ ದೇವಳದ ಅರ್ಚಕ ವಿದ್ವಾನ್ ಮಾಧವ ಅಡಿಗ ಇವರು ಧಾರ್ಮಿಕ ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ
ಉದ್ಯಮಿ ಸೇನಪುರ ಮಂಜುನಾಥ ಪೂಜಾರಿ ದುಬೈ, ಮಣಿಪಾಲದ ಡಾ. ರಾಘವೇಂದ್ರ ಶೆಟ್ಟಿ, ಕುಂದಾಪುರ ಮಾಜಿ ತಾ.ಪಂ ಉಪಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ಕಡ್ಕೆ, ಆಲೂರು ಗ್ರಾಪಂ ಉಪಾಧ್ಯಕ್ಷ ಸಿಂಗಾರಿ, ದೇವಳದ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಆನಂದ ಗಾಣಿಗ ಸ್ವಾಗತಿಸಿದರು. ಖಜಾಂಚಿ ಬಾಬು ಗೌಡ ಪ್ರಾಸ್ತಾವಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿದರು.
ಮಂಜುನಾಥ್ ಗಾಣಿಗ ತಾರಿಬೇರು ವಂದಿಸಿದರು.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…
ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35)…
ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ…
ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು…
ಕುಂದಾಪುರ:ದೂರದರ್ಶನ ಚಂದನ ಟಿವಿಯಲ್ಲಿ ಜೂನ್.16 ರ ಬೆಳಿಗ್ಗೆ 8 ಕ್ಕೆ ಯೋಗಾಚಾರ್ಯ ಸಂತೋಷ್ ಕುಮಾರ್ ಅವರಿಂದ ವ್ಯಾಯಾಮ ಮತ್ತು ಯೋಗಾಸನ…