ಕುಂದಾಪುರ:ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿರುವ ಕರಾವಳಿ ದೊನ್ನೆ ಬಿರಿಯಾನಿ ಔಟ್‍ಲೆಟ್ ಹರೀಶ್ ಶೆಟ್ಟಿ ಕೌಂಜೂರು ಮತ್ತು ಶರತ್ ಶೆಟ್ಟಿ ಸೆಳೆಕೋಡು ಅವರ ಮಾಲೀಕತ್ವದಲ್ಲಿ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ (ರಾಷ್ಟ್ರೀಯ ಹೆದ್ದಾರಿ 66 ರ) ನಗು ಸಿಟಿ ಮುಂಭಾಗ ಶನಿವಾರ ಅದ್ಧೂರಿಯಾಗಿ ಶುಭಾರಂಭಗೊಂಡಿದೆ.
ಹೋಟೆಲ್ ಉದ್ಯಮದಲ್ಲಿ ಸುಮಾರು 25 ವರ್ಷಗಳಷ್ಟು ಅನುಭವನ್ನು ಹೊಂದಿರುª ಹರೀಶ್ ಶೆಟ್ಟಿ ಕೌಂಜೂರು ಮತ್ತು ಶರತ್ ಶೆಟ್ಟಿ ಮಾಲೀಕತ್ವದ ಕರಾವಳಿ ದೊನ್ನೆ ಬಿರಿಯಾನಿ ಸಹಿತ ಎಲ್ಲಾ ರೀತಿಯ ಸೀಫುಡ್,ನಾಟಿ ಸ್ಟೈಲ್‍ನಲ್ಲಿ ಚಿಕ್ಕನ್ ಮತ್ತು ಮಟನ್ ಬಿರಿಯಾನಿ,ಚೈನಿಸ್, ಮೀನು ಊಟ ನುರಿತ ಬಾಣಸಿಗರಿಂದ ತಯಾರಾಗಲಿದೆ.ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ ಮಗ್ಗುಲಿನಲ್ಲಿರುವ ಕರಾವಳಿ ದೊನ್ನೆ ಬಿರಿಯಾನಿ ಪಾಯಿಂಟ್ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಖಾದ್ಯವನ್ನು ಸವಿಯಲು ಹೇಳಿಮಾಡಿಸಿದಂತ ಜಾಗ.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಾತನಾಡಿ,ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನು ಹೊಂದಿರುವ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಪ್ರದೇಶಕ್ಕೆ ದೇಶ ವಿದೇಶಗಳಿಂದ ಸಾವಿರಾರು ಜನರು ದಿನಂಪ್ರತಿ ಭೇಟಿಯನ್ನು ನೀಡುತ್ತಾರೆ.ಪ್ರವಾಸಿಗರಿಗೆ ಉತ್ತಮ ರೀತಿಯ ಊಟೋಪಚಾರ ಮತ್ತು ಆತಿಥ್ಯವನ್ನು ನೀಡಲು ಕರಾವಳಿ ದೊನ್ನೆ ಬಿರಿಯಾನಿ ಹೇಳಿಮಾಡಿಸಿದ ಜಾಗವಾಗಿದೆ ಎಂದು ಶುಭಹಾರೈಸಿದರು.
ಕರಾವಳಿ ದೊನ್ನೆ ಬಿರಿಯಾನಿ ಮಾಲೀಕರಾದ ಶರತ್ ಶೆಟ್ಟಿ ಮಾತನಾಡಿ,ಹೋಟೆಲ್ ಉದ್ಯಮದಲ್ಲಿ ಸುಮಾರು ಇಪ್ಪತೈದು ವರ್ಷಗಳಷ್ಟು ಅನುಭವನ್ನು ಹೊಂದಿರುವ ನಾವು ಇಂದು ಮುಳ್ಳಿಕಟ್ಟೆಯಲ್ಲಿ ಕರಾವಳಿ ದೊನ್ನೆ ಬಿರಿಯಾನಿ ಎಂಬ ಹೋಟೆಲ್ ಆರಂಭಿಸಲಾಗಿದ್ದು.ಸೀ ಫುಡ್ ಸಹಿತ ಎಲ್ಲಾ ರೀತಿಯ ಖಾದ್ಯಗಳು ದೊರಕಲಿದೆ.ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿ ಕೊಂಡರು.
ಕರಾವಳಿ ದೊನ್ನೆ ಬಿರಿಯಾನಿ ಮಾಲೀಕರಾದ ಹರೀಶ್ ಶೆಟ್ಟಿ ಕೌಂಜೂರು ಮಾತನಾಡಿ,ನಮ್ಮೂರಿನಲ್ಲಿ ಕರಾವಳಿ ದೊನ್ನೆ ಬಿರಿಯಾನಿಯನ್ನು ಪರಿಚಯಿಸಬೇಕು ಎನ್ನುವ ದೃಷ್ಟಿಯಿಂದ ಇವೊಂದು ಉದ್ಯಮವನ್ನು ಆರಂಭಿಸಲಾಗಿದ್ದು.ಎಲ್ಲಾ ರೀತಿಯ ಖಾದ್ಯ ದೊರಕಲಿದೆ ತಾವೆಲ್ಲಾ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ,ಮುಳ್ಳಿಕಟ್ಟೆ ಅಂತಹ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತವಾದ ಹೋಟೆಲ್ ನಿರ್ಮಾಣ ಆಗಿರುವುದರಿಂದ ಒಂದಿಷ್ಟು ಜನರಿಗೆ ಉದ್ಯೋಗ ದೊರಕುವುದರ ಜತೆಗೆ,ಸುಚಿ ಮತ್ತು ರುಚಿಕರವಾದ ಊಟ ದೊರಕಲಿದೆ ಎಂದರು.ಯುವ ಉದ್ಯಮಿಗಳಿಗೆ ಶುಭಹಾರೈಸಿದರು.
ಹೋಟೆಲ್ ಶುಭಾರಂಭ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು,ಉದ್ಯಮಿಗಳು ಹಾಗೂ ಕಟ್ಟಡದ ಮಾಲೀಕರು,ಬಂಧು ಮಿತ್ರರು,ಸ್ನೇಹಿತರು,ಸ್ಥಳೀಯರು ಭೇಟಿ ನೀಡಿ ಶುಭಹಾರೈಸಿದರು.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…