ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರು ಮಾತನಾಡಿ,ಕ್ರೀಡೆ ಯಿಂದ ದೇಹವನ್ನು ದಂಡಿಸಲು ಒಳ್ಳೆ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.
ಕುಂದಾಪುರ:ಕ್ರಿಕೆಟ್ ಪಂದ್ಯಾಕೂಟಗಳನ್ನು ಆಯೋಜನೆ ಮಾಡುವುದರಿಂದ ಯುವ ಮನಸ್ಸುಗಳು ಒಂದೇಡೆ ಸೇರುವಂತೆ ಮಾಡಲು ಅವಕಾಶವನ್ನು ಮಾಡಿಕೊಟ್ಟಂತೆ ಆಗುತ್ತದೆ.ಜತೆಯಲ್ಲಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಕೆಲಸ ಮಾಡಲು ಒಳ್ಳೆ ವೇದಿಕೆ ಆಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟುಹೊಳೆ ಹೇಳಿದರು.
ಅಂಬಾ ಕ್ರಿಕೆಟರ್ಸ್ ಮುಳ್ಳಿಕಟ್ಟೆ ಹೊಸಾಡು ವತಿಯಿಂದ ಸೀತಾರಾಮ ಶೆಟ್ಟಿ ಕೇರಿಕೊಡ್ಲು ಅವರ ಸ್ಮರಣಾರ್ಥವಾಗಿ ಮುಳ್ಳಿಕಟ್ಟೆಯಲ್ಲಿ ಶನಿವಾರ ನಡೆದ ರಾಘು ಟ್ರೋಫಿ-2025 ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಉದ್ಘಾಟಿಸಿ ಶುಭಹಾರೈಸಿದರು.ಅಭಿನಂದನ್ ಶೆಟ್ಟಿ,ಮಂಜು ಪೂಜಾರಿ ಸೇನಾಪುರ,ಪಾತ್ರಿ ಮಂಜಯ್ಯ ಶೆಟ್ಟಿ,ರಘುರಾಮ ಶೆಟ್ಟಿ,ನವೀನ್ ಶೆಟ್ಟಿ ನಾರ್ಕಳಿ,ಕುಶಲ ಶೆಟ್ಟಿ ಬೆಳ್ಳಾಡಿ,ಚಂದ್ರಶೇಖ ಪೂಜಾರಿ ಅರಾಟೆ,ಹರ್ಷವರ್ಧನ್ ಶೆಟ್ಟಿ ಕಾಳವಾರ,ಪ್ರದೀಪ್ ಕುಮಾರ್ ಶೆಟ್ಟಿ,ಕ್ರಿಕೆಟ್ ತಂಡದ ನಾಯಕರುಗಳಾದ ಸತೀಶ ಶೆಟ್ಟಿ,ರಾಘು ಶೆಟ್ಟಿ ಜಾಜಿಮಕ್ಕಿ,ಪ್ರವೀಣ್ ಪೂಜಾರಿ,ಶಶಿಕುಮಾರ್ ಶೆಟ್ಟಿ,ನರಸಿಂಹ ಶೆಟ್ಟಿ,ಸತೀಶ್ ದೇವಾಡಿಗ,ಸುತನ ಕುಮಾರ್ ಶೆಟ್ಟಿ,ಅಮರನಾಥ ಶೆಟ್ಟಿ,ಅಜಿತ್ ಶೆಟ್ಟಿ ಉಪಸ್ಥಿತರಿದ್ದರು.ಶಿಕ್ಷಕ ರಾಜೇಶ ಸ್ವಾಗತಿಸಿ,ನಿರೂಪಿಸಿದರು.ಸತೀಶ್ ಶೆಟ್ಟಿ ಯಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…