ಕುಂದಾಪುರ:ಬುಲ್ಟ್ರೋಲ್ ಮತ್ತು ಲೈಟ್ ಫಿಶಿಂಗ್ ಮೀನುಗಾರಿಕೆ ವಿರೋಧಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆಯನ್ನು ತ್ರಾಸಿಯಲ್ಲಿ ಶುಕ್ರವಾರ ಮಾಡಲಾಯಿತು.
ಮೀನುಗಾರ ಮುಖಂಡ ಮದನ್ ಕುಮಾರ್ ಉಪ್ಪುಂದ ಮಾತನಾಡಿ,12 ರಿಂದ 240 ನಾಟಿಕಲ್ ದೂರದ ತನಕ ಅವೈಜ್ಞಾನಿಕ ಮೀನುಗಾರಿಕೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿದೆ.ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದರು ರಾಜ್ಯದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಇನ್ನೂ ನಿಷೇಧಗೊಂಡಿಲ್ಲ.ಸಾಂಪ್ರದಾಯಿಕ ಮೀನುಗಾರರ ಜೀವನದ ದೃಷ್ಟಿಯಿಂದ ಅವೈಜ್ಞಾನಿಕ ಮೀನುಗಾರಿಕೆ ನಿಷೇಧಕ್ಕೆ ಸರಕಾರ ಕೂಡಲೇ ಕಠಿಣ ಕ್ರಮಕೈಗೊಳ್ಳ ಬೇಕು ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ,ಮೀನುಗಾರರ ಸಮಸ್ಯೆ ಕುರಿತು ಕಳೆದ ಒಂದುವರೆ ವರ್ಷದಿಂದ ಸರಕಾರದ ಗಮನ ಸೆಳೆಯುತ್ತಾ ಬರಲಾಗುತ್ತಿದೆ.ಸಮಸ್ಯೆಯ ಗಂಭೀರತೆಯನ್ನು ತೋರ್ಪಡಿಸಲು ಪ್ರತಿಭಟನೆಗಳು ಅಗತ್ಯವಾಗಿದ್ದು.ಎಲ್ಲಾ ರೀತಿಯ ನೆರವನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,ಮುಖ್ಯ ಮಂತ್ರಿಗಳು ಹಾಗೂ ಸಚಿವರನ್ನು ಒಟ್ಟಾಗಿ ಭೇಟಿ ಮಾಡಿ ಮೀನುಗಾರರ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದರು.
ಮೀನುಗಾರ ಮುಖಂಡ ಸೋಮನಾಥ ಮೊಗವೀರ ಮಾತನಾಡಿ,ಸಣ್ಣ ಸಣ್ಣ ಮೀನುಗಾರರ ಬದುಕನ್ನು ಸಂರಕ್ಷಣೆ ಮಾಡುವಲ್ಲಿ ಸರಕಾರ ಮುಂದಾಗಬೇಕು ಎಂದರು.
ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಒಕ್ಕೂಟ ಅಧಕ್ಷ ನಾಗೇಶ ಖಾರ್ವಿ,ಗೌರವ ಸಲಹೆಗಾರ ನವಿನ್ ಚಂದ್ರ ಉಪ್ಪುಂದಮೀನುಗಾರ ಮುಖಂಡರಾದ ವಸಂತ ಸುವರ್ಣ,ಯಾದವ್ ಮಲ್ಪೆ,ಬಾಳ ಮಲ್ಪೆ,ಕೃಷ್ಣ ಮಲ್ಪೆ,ಯಶವಂತ ಗಂಗೊಳ್ಳಿ,ನಾಗೇಶ ಖಾರ್ವಿ ಉಪ್ಪುಂದ,ಸುಧಾಕರ್,ತಿಮ್ಮಪ್ಪ ಖಾರ್ವಿ,ಹರಿಶ್ಚಂದ್ರ,ಮಂಜುನಾಥ,ಅಶ್ವಥ್ ಕಾಂಚನ್ ಮಂಗಳೂರು,ಕೃಷ್ಣ ಮುರುಡೇಶ್ವರ,ಹರೀಶ ಮೊಗವೀರ,ಬಲೀಂದ್ರ,ಅಜೀಜ್ ಗಂಗೊಳ್ಳಿ,ಸುರೇಶ ಮರವಂತೆ,ವೆಂಕರಮಣ ಖಾರ್ವಿ ಉಪ್ಪುಂದ,ಮಹೇಶ ನಾವುಂದ ಹಾಗೂ ಮೀನುಗಾರರು ಉಪಸ್ಥಿತರಿದ್ದರು.ಪೊಲುಸ್ ಇಲಾಖೆ ವತಿಯಿಂದ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು.
ಕುಂದಾಪುರ:ಆರ್ಭಟಿಸಿದ ಗಾಳಿ ರಭಸಕ್ಕೆ ಬೈಂದೂರು ತಾಲೂಕಿನ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿನ ಪ್ರಾಂಗಾಣದ ಸೀಟ್ ಮಾಡು ತುಂಡು ತುಂಡಾಗಿ…
ಕುಂದಾಪುರ:ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿಸಿದ ಗಾಳಿ ಅಬ್ಬರಕ್ಕೆ ಅಕ್ಷರಹ ಸಹ ಕುಂದಾಪ್ರ ಮತ್ತು ಬೈಂದೂರು ತಾಲೂಕಿನ ಪ್ರದೇಶಗಳು…
ಕುಂದಾಪುರ:ಏಕಏಕಿ ಶನಿವಾರ ಸಂಜೆ ಬೀಸಿದ ಭಾರಿ ಗಾಳಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಒಳಪಟ್ಟಿರುವ ತಲ್ಲೂರು ಉಪವಿಭಾಗದ ವ್ಯಾಪ್ತಿಯಲ್ಲಿನ ಹೆಮ್ಮಾಡಿ,ದೇವಲ್ಕುಂದ,ಆಲೂರು,ಬಡಾಕೆರೆ,ಗಂಗೊಳ್ಳಿ…
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಸನ್ಯಾಸಿಬಲ್ಲೆ ಸ್ಮಶಾನ ಹಾಗೂ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಅನಾದಿ ಕಾಲದ ರಸ್ತೆಯನ್ನು…
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ ಹಾಗೂ…
ಕುಂದಾಪುರ:ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವ ಬೆಂಗಳೂರು ಅವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧಕೊಲ್ಲೂರು…