ಪ್ರಮುಖ

ಶೈಕ್ಷಣಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಿರುವ ಸುಣ್ಣಾರಿ ಎಕ್ಸಲೆಂಟ್ ವಿದ್ಯಾಸಂಸ್ಥೆ:ಮೌಲ್ಯವರ್ಧಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ

Share

ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿ ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಶೀಘ್ರವಾಗಿ ತನ್ನ ಶೈಕ್ಷಣಿಕ ವಿಶೇಷತೆಯಿಂದ ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕವಾಗಿ ಗುರುತಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಸುಣ್ಣಾರಿ. ಸತತ ಹನ್ನೆರಡು ವರ್ಷಗಳಿಂದ ಶಿಕ್ಷಣದಲ್ಲಿ ಹೊಸ ಅಲೆಯನ್ನು ಎಬ್ಬಿಸಿ ಪ್ರಗತಿಯ ದಾಪುಗಾಲನ್ನು ನೀಡುತ್ತಾ,ಈಡೀ ರಾಷ್ಟ್ರ ಹಾಗೂ ರಾಜ್ಯವೇ ಕುಂದಾಪುರದ ನಮ್ಮ ಸಂಸ್ಥೆಯತ್ತ ಗಮನ ಹರಿಸುವಷ್ಟು ಶೈಕ್ಷಣಿಕವಾಗಿ ಗುರುತಿಸಿಕೊಂಡ ಹೆಗ್ಗಳಿಕೆಯದ್ದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪಟ್ಟಭದ್ರಹಿತಾಸಕ್ತಿಗಳ ಊಹಾಪೋಹದ ಮಾತುಗಳು,ನಡವಳಿಕೆಯ ತಂತ್ರಗಳು ಹಾಗೂ ಸಂಸ್ಥೆಯ ಬಗೆಗೆ ಮಾಡುವ ಗೊಂದಲಗಳ ಸೃಷ್ಠಿಯು ಸಂಸ್ಥೆಯ ಗಮನಕ್ಕೆ ಬಂದಿರುವುದು ವಿಷಾದನೀಯವಾಗಿದೆ. ಈ ರೀತಿಯ ಗೊಂದಲಗಳು ಒಂದು ಶೈಕ್ಷಣಿಕ ಪ್ರಗತಿಯಲ್ಲಿರುವ ನಮ್ಮ ಸಂಸ್ಥೆಗೆ ಆಗಬಾರದು ಎನ್ನುವ ಹಿತದೃಷ್ಠಿಯಿಂದ ಈ ಒಂದು ಪತ್ರಿಕಾಗೋಷ್ಠಿಯನ್ನು ನಮ್ಮ ಸಂಸ್ಥೆಯಾದ ಎಕ್ಸಲೆಂಟ್ ವಿದ್ಯಾಸಂಸ್ಥೆ, ಸುಣ್ಣಾರಿ, ಕುಂದಾಪುರ ಹಮ್ಮಿಕೊಂಡಿರುತ್ತೇವೆ.
ಸತತ ಹನ್ನೆರಡು ವರ್ಷದಿಂದ ಈ ಸಂಸ್ಥೆಯಲ್ಲಿ ಬೋಧನೆ ಹಾಗೂ ತರಬೇತಿ ನೀಡುತ್ತಾ ಬಂದಿರುವ ಅನುಭವಿ ಉಪನ್ಯಾಸಕರ ಜೊತೆಗೆ ಬೇರೆ ಬೇರೆ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಿಂದ ಹಾಗೂ ನಮ್ಮ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಿಂದ ಬಂದಿರುವ ಅನುಭವಿ ಹಾಗೂ ಪ್ರತಿಭಾನ್ವಿತ ಉಪನ್ಯಾಸಕರ ತಂಡವು ನಮ್ಮ ಸಂಸ್ಥೆಯಲ್ಲಿ ಬೋಧನೆಯನ್ನು ಮಾಡುತ್ತಾ ಬಂದಿದ್ದಾರೆ.ಈ ಅನುಭವಿ ಉಪನ್ಯಾಸಕರ ತರಬೇತಿ ಹಾಗೂ ಬೋಧನೆಗಳಿಂದ ಸತತವಾಗಿ ಸಿಇಟಿ, ನೀಟ್, ಜೆಇಇ, ಎನ್.ಡಿ.ಎ, ಬೋರ್ಡ್, ಸಿಎ, ಸಿಎಸ್ ಪರೀಕ್ಷೆಗಳಲ್ಲಿ ರಾಷ್ಟ್ರ, ರಾಜ್ಯದಲ್ಲಿ ಅದೆಷ್ಟೋ ರ್ಯಾಂಕ್‍ಗಳನ್ನು ಗಳಿಸಿರುತ್ತೇವೆ. ಆ ನುರಿತ ಉಪನ್ಯಾಸಕರ ತಂಡವೇ ಮುಂದೆಯೂ ಸಹ ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಇದಕ್ಕಿಂತಲೂ ಹೆಚ್ಚಿನ ವಿಶೇಷ ರೀತಿಯ ತರಬೇತಿ ಹಾಗೂ ಬೋಧನೆ ನೀಡಲು ನಮ್ಮೊಂದಿಗೆ ಕೈಜೋಡಿಸುತ್ತಾರೆ. ಈ ವರ್ಷದ ಬೋಧನೆ ಮಾಡಿದ ಉಪನ್ಯಾಸಕರು ಮುಂದೆಯೂ ಅವರ ಮಾರ್ಗದರ್ಶನವೇ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಯಾವುದೇ ಗೊಂದಲವು ಬೇಡವೆಂದು ಪಾಲಕ, ವಿದ್ಯಾರ್ಥಿ ಹಾಗೂ ಸಮಾಜದ ಜನರ ಪರವಾಗಿ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸುತ್ತದೆ. ಮುಂದಿನ ಈ ಉಪನ್ಯಾಸಕರು ಇರುವುದಿಲ್ಲ ಎನ್ನುವ ಯಾವುದೇ ಗೊಂದಲ ಬೇಡ ನಮ್ಮ ಜೊತೆ ಮುಂದಿನ ವರ್ಷವು ಅವರು ಸೇವೆಯನ್ನು ನಮ್ಮ ಈ ಸಂಸ್ಥೆಯಲ್ಲೇ ಮಾಡುತ್ತಾರೆ.
ಈ ನಮ್ಮ ಸಂಸ್ಥೆಯಲ್ಲಿ ಕಳೆದ ವರ್ಷ ಉತ್ತಮವಾದ ಅಂಕಗಳನ್ನು ಪಡೆದು ರ್ಯಾಂಕ್ ಗಳಿಸಿದ ಹಲವಾರು ವಿದ್ಯಾರ್ಥಿಗಳು ಎಂ.ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.)ನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಓದಿ ಈ ಸಾಧನೆಯನ್ನು ಮಾಡಿರುತ್ತಾರೆ. ಆದರೆ ಈ ನಮ್ಮ ಎಕ್ಸಲೆಂಟ್ ಸಂಸ್ಥೆಯಲ್ಲಿ ರ್ಯಾಂಕ್‍ಗಳನ್ನು ಪಡೆದು ಬೇರೆ ಸಂಘ ಸಂಸ್ಥೆಗಳಲ್ಲಿ ಸನ್ಮಾನವನ್ನು ಪಡೆದುಕೊಂಡಿರುವುದು ಬಹಳ ಹೆಮ್ಮೆಯ ವಿಚಾರವಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಯಾವುದೇ ಸಂಘ ಸಂಸ್ಥೆಗಳಿಗೆ ಈ ನಮ್ಮ ಎಕ್ಸಲೆಂಟ್ ವಿದ್ಯಾಸಂಸ್ಥೆಯು ಯಾವಾಗಲೂ ಚಿರಋಣಿಯಾಗಿರುತ್ತದೆ. ಆದರೆ ಇದು ಕೇವಲ ಮಕ್ಕಳನ್ನು ಗುರುತಿಸುವುದು ಮಾತ್ರವಲ್ಲದೆ ಅವರ ಸಂಸ್ಥೆಯ ಪ್ರಚಾರಕ್ಕೆ ಬಳಸಿಕೊಂಡಿರುವುದು ಖಂಡನೀಯ ವಿಚಾರವಾಗಿರುತ್ತದೆ. ಇಂತಹ ಘಟನೆಗಳು ಈ ಸಂಸ್ಥೆಯ ಗಮನಕ್ಕೆ ಬಂದಿರುವುದರಿಂದ ಇದು ನಾಡಿನ ಜನತೆಯ ದಿಕ್ಕು ತಪ್ಪಿಸುವ ಒಂದು ತಂತ್ರದ ಹುನ್ನಾರವಾಗಿದ್ದು ಇದರ ಬಗ್ಗೆ ಯಾರಿಗಾದರೂ ಗೊಂದಲವಿದ್ದರೆ ಆ ಅದ್ಭುತ ವಿದ್ಯಾರ್ಥಿಗಳ ಸಾಧನೆಗೆ ಅಡಿಪಾಯ ಹಾಕಿರುವ ನಮ್ಮ ಸಂಸ್ಥೆಯ ಬಗ್ಗೆ ಅಭಿಮಾನದಿಂದ ನೀವು ಏನೇ ಗೊಂದಲವಿದ್ದರು ಸಹ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರ ಸಂಪರ್ಕಕ್ಕಾಗಿ 9731143328 ಅವರಿಗೆ ಕರೆಮಾಡಿ ಗೊಂದಲಗಳನ್ನು ಬಗೆಹರಿಸಿಕೊಳ್ಳುವಂತೆ ಪತ್ರಿಕಾ ಪ್ರಕಟನೆಯ ಮೂಲಕ ವಿನಂತಿಸಿಕೊಳ್ಳುತ್ತೇವೆ.
ಈ ನಮ್ಮ ಸಂಸ್ಥೆಯ ಪ್ರಗತಿಗೆ ಮೂಲಕಾರಣವೇ ನಮ್ಮ ಬೋಧನೆ, ತರಬೇತಿ ಹಾಗೂ ಓದುವ ಕಾರ್ಯತಂತ್ರವಾಗಿರುತ್ತದೆ. ವಸತಿ ನಿಲಯದ ಹಾಗೂ ಮನೆಯಿಂದ ಬರುವ ವಿದ್ಯಾರ್ಥಿಗಳಿಗೆ ಓದುವ ಕಾರ್ಯಯೋಜನೆಯನ್ನು ಕೇಂದ್ರವಾಗಿಟ್ಟುಕೊಂಡು ವಿಶೇಷ ತರಗತಿಯನ್ನು ಆಯೋಜಿಸಿ, ಅಲ್ಲಿಯೂ ವಿಶೇಷ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೂ ಸಹ ವಿಶೇಷ ತರಗತಿಯನ್ನು ಉಚಿತವಾಗಿ ಹಮ್ಮಿಕೊಂಡಿರುವುದು ಉತ್ತಮಫಲಿತಾಂಶಕ್ಕೆ ಕಾರಣವಾಗಿದೆ. ಕೇವಲ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಮನೆಯಿಂದ ಬರುವ ವಿದ್ಯಾರ್ಥಿಗಳ ಪೋಷಕರ ಹಿತಾದೃಷ್ಟಿಯಿಂದ ಆ ವಿದ್ಯಾರ್ಥಿಗಳಿಗೂ ಉಚಿತ ತರಬೇತಿಯನ್ನು ನೀಡಿ ಅವರಿಗೂ ಉತ್ತಮ ಅಂಕ ತಂದುಕೊಟ್ಟಿರುವುದು ಸಂಸ್ಥೆಯ ಇನ್ನೊಂದು ಹೆಗ್ಗಳಿಕೆಯಾಗಿದೆ.
ಈ ರೀತಿಯಾಗಿ ಎಕ್ಸಲೆಂಟ್ ವಿದ್ಯಾಸಂಸ್ಥೆಯೂ ಗ್ರಾಮೀಣ ವಲಯದಲ್ಲಿ ಶೈಕ್ಷಣಿಕವಾಗಿ ದೊಡ್ಡ ಸಾಧನೆ ಮಾಡಿದೆ. ಇದಕ್ಕೆ ನಿದರ್ಶನವೆನ್ನುವಂತೆ ಈ ಸಲವು ರಾಷ್ಟ್ರಮಟ್ಟದ ‘ಜೆಇಇ ಅಡ್ವಾನ್ಸ್’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ‘ಜೆಇಇ ಮೈನ್ಸ್’ ನಲ್ಲಿ ಶೇಕಡಾ 90ಕ್ಕಿಂತಲೂ ಅಧಿಕ ಅಂಕಗಳನ್ನು 14 ವಿದ್ಯಾರ್ಥಿಗಳು ಹಾಗೂ ಶೇಕಡಾ 95 ಅಂಕಗಳನ್ನು 05 ವಿದ್ಯಾರ್ಥಿಗಳು ಪಡೆದಿರುವುದು ರಾಷ್ಟ್ರಮಟ್ಟದಲ್ಲಿಯೇ ನಮ್ಮ ಶಿಕ್ಷಣ ಸಂಸ್ಥೆಯನ್ನು ಗುರುತಿಸುವಂತಾಗಿದೆ. ‘ನೀಟ್’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದುದಲ್ಲದೇ ಒಟ್ಟು 35 ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ‘ಸಿಇಟಿ’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 10000 ರ್ಯಾಂಕ್‍ನ ಒಳಗೆ 94 ವಿದ್ಯಾರ್ಥಿಗಳು ಪಡೆದು ಅದ್ಭುತ ಸಾಧನೆ ಗಳಿಸಿರುವುದು ಎಕ್ಸಲೆಂಟ್ ಸಂಸ್ಥೆಯ ಹೆಮ್ಮೆಯ ವಿಚಾರವಾಗಿದೆ. ಅಷ್ಟೇ ಅಲ್ಲದೇ,ಕರ್ನಾಟಕ ಬೋರ್ಡ್ ಪರೀಕ್ಷೆಯಲ್ಲಿ 13 ರ್ಯಾಂಕ್‍ಗಳನ್ನು ಪಡೆದಿರುವುದು ಮಾತ್ರವಲ್ಲದೇ ಕಾಲೇಜಿನ 404 ವಿದ್ಯಾರ್ಥಿಗಳಲ್ಲಿ 315 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಅಂಕಗಳಿಸಿ ಉತ್ತೀರ್ಣರಾಗಿದ್ದು, ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು 226, ಶೇಕಡಾ 95ಕ್ಕಿಂತಲೂ ಅಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳು 99 ಪಡೆದಿರುವುದು ಸಂಸ್ಥೆಯ ಸಾಧನೆಗೆ ನಿದರ್ಶನವಾಗಿದೆ. ವಾಣಿಜ್ಯ ವಿಭಾಗದಲ್ಲಿಯೂ ಸಹ ಎಕ್ಸಲೆಂಟ್ ವಿದ್ಯಾಸಂಸ್ಥೆಯು ಸಿಎ ಹಾಗೂ ಸಿಎಸ್ ಸ್ಪರ್ಧಾತ್ಮಕ ತರಗತಿಯನ್ನು ನಡೆಸುತ್ತಿದ್ದು, ಅದರಲ್ಲಿಯೂ ‘ಸಿಎ’ ಫೌಂಡೇಶನ್‍ನಲ್ಲಿ 6 ವಿದ್ಯಾರ್ಥಿಗಳು ಹಾಗೂ ‘ಸಿಎಸ್’ ಪರೀಕ್ಷೆಯಲ್ಲಿ 02 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಈಡೀ ರಾಷ್ಟ್ರಮಟ್ಟದಲ್ಲೇ ಅಗ್ರಗಣ್ಯ ಸಂಸ್ಥೆಯಾಗಿ ಮೂಢಿಬಂದಿರುವುದು ನಮ್ಮ ಶೈಕ್ಷಣಿಕ ಕೀರ್ತಿಗೆ ಮೆರಗನ್ನು ನೀಡಿದೆ. ಕೇವಲ ಈ ಸಂಸ್ಥೆಯೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿರುವುದು ಮಾತ್ರವಲ್ಲದೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳಲು ನಾನಾ ರೀತಿಯ ಶೈಕ್ಷಣಿಕ ಕಾರ್ಯತಂತ್ರಗಳನ್ನು ರೂಪಿಸಿ, ಉತ್ತಮ ಸಾಧನೆ ಮಾಡಿದ ಕೀರ್ತಿಯೂ ಈ ನಮ್ಮ ಎಕ್ಸಲೆಂಟ್
ವಿದ್ಯಾಸಂಸ್ಥೆಯದ್ದಾಗಿದೆ. ಅಷ್ಟೇ ಅಲ್ಲದೇ ನಮ್ಮ ಸಂಸ್ಥೆಗೆ ಹಲವು ಕಡೆಗಳಿಂದ, ಹಲವು ಸಂಸ್ಕ್ರತಿ, ಅಭಿರುಚಿಯಿಂದ ಕೂಡಿರುವ ‘ಸುಸಂಸ್ಕ್ರತ’ ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ಅಧ್ಯಯನ ಮಾಡುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ಈ ರೀತಿಯಾಗಿ ಒಂದು ಸಂಸ್ಥೆ ಶೈಕ್ಷಣಿಕವಾಗಿ ಮುನ್ನುಗ್ಗಲು ಕಾರಣ ಪ್ರತಿಭಾವಂತ ಹಾಗೂ ಅನುಭವಿ ಉಪನ್ಯಾಸಕರ ತಂಡವಾಗಿರುತ್ತದೆ. ಈಗ ಇರುವ ಈ ಉಪನ್ಯಾಸಕರ ತಂಡವೇ ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಇವರ ಸೇವೆ ಮುಂದುವರಿಯುತ್ತದೆ ಎನ್ನುವ ಸಂಪೂರ್ಣ ಭರವಸೆಯನ್ನು ನಾಡಿನ ಜನತೆಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯು ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸುತ್ತದೆ.
ಈ ಪತ್ರಿಕಾ ಪ್ರಕಟನಾ ಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆಯವರು ಹಾಗೂ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಯವರು ಉಪಸ್ಥಿತರಿದ್ದರು.

ನುರಿತ ಉಪನ್ಯಾಸಕರ ಬಳಗವನ್ನು ಹೊಂದಿರುವ ಸುಣ್ಣಾರಿ ಎಕ್ಸಲೆಂಟ್ ವಿದ್ಯಾಸಂಸ್ಥೆ

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

4 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago