ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಕುಂದಾಪುರ ತಾಲೂಕು ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ನವಚೇತನ ಸಮಾವೇಶ ಅದ್ದೂರಿಯಾಗಿ ಅಂಬೇಡ್ಕರ್ ಭವನ ಕುಂದಾಪುರದಲ್ಲಿ ಸೋಮವಾರ ನಡೆಯಿತು.
ಕುಂದಾಪುರ ಶಾಸ್ತ್ರೀ ಸರ್ಕಲ್ ನಿಂದ ಅಂಬೇಡ್ಕರ್ ಭವನದ ವರೆಗೆ ಬೃಹತ್ ಮೆರವಣಿಗೆ ನಡೆಯಿತು.ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಅವರು ನವಚೇತನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ಈಗಾಗಲೇ ಜಿಲ್ಲೆಯಲ್ಲಿ ದಲಿತ ಚಳುವಳಿಯನ್ನು ಅತ್ಯುತ್ತಮವಾಗಿ ಪುನರ್‍ಶ್ಚೇತನಗೊಳಿಸಲಾಗುತ್ತಿದೆ.ನವಚೇತನ ಸಮಾವೇಶದ ಮೂಲಕ ಈ ಭಾಗದಲ್ಲಿ ಸಮುದಾಯದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಸಂಘಟನೆಯ ಪದಾಧಿಕಾರಿಗಳು ಬಹಳಷ್ಟು ಪರಿಣಾಮಕಾರಿಯಾಗಿ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.
ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಮಾತನಾಡಿ,ಉಡುಪಿ ಜಿಲ್ಲಾಡಳಿತ ದಲಿತ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ.ಜಿಲ್ಲೆಯ ಉಸ್ತುವಾರಿ ಸಚಿವರು ಅಧಿಕಾರ ವಹಿಸಿಕೊಂಡ ದಿನಗಳಿಂದ ಇಲ್ಲಿ ತನಕ ದಲಿತ ಸಮುದಾಯದ ಕುಂದು ಕೊರತೆಗಳನ್ನು ಕೇಳುವ ಪ್ರಯತ್ನ ಮಾಡಿಲ್ಲ.ದಲಿದತರ ಸಮಸ್ಯೆಗಳನ್ನು ಆಲಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ಮಾಡಬೇಕು ಎನ್ನುವ ಕಾನೂನು ಇದೆ ಅದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಜಿಲ್ಲಾಡಳಿತ ಬಗ್ಗೆ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ ಹಕ್ಲಾಡಿ ಮಾತನಾಡಿ,ನವಚೇತನ ಸಮಾವೇಶವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು.ನೂತನವಾಗಿ ಆಯ್ಕೆಗೊಂಡಿರುವ ಕುಂದಾಪುರ ತಾಲೂಕು ಘಟಕದ ಪದಾಧಿಕಾರಿಗಳು ಸಕ್ರೀಯವಾಗಿ ಕೆಲಸವನ್ನು ಮಾಡುವುದರ ಮೂಲಕ ಸಂಘಟನೆಗೆ ಬಲ ತುಂಬೇಕೆಂದು ಹೇಳಿದರು.
ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ ಅವರು ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ,ಸಭೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಕುಂದಾಪುರ ಸಹಾಯಕ ಕಮಿಷನರ್ ಮಹೇಶ್ಚಂದ್ರ ಕೆ.ಎ.ಎಸ್,ಉದ್ಯಮಿ ದಿನೇಶ್ ಹೆಗ್ಡೆ,ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ನಾಗೂರು,ಮಹಿಳಾ ಒಕ್ಕೂಟ ಗೀತಾ ಸುರೇಶ್ ಮತ್ತು ನಯನಾ ಆದೀಶ್,ನಿಯೋಜಿತ ತಾಲೂಕು ಪದಾಧಿಕಾರಿಗಳಾದ ಕೆ.ಸಿ ರಾಜು ಬೆಟ್ಟಿನಮನೆ,ಕೋಶಾಧಿಕಾರಿ ಚಂದ್ರ ಕೊರ್ಗಿ,ಬೈಂದೂರು ತಾಲೂಕು ಸಂಚಾಲಕ ಶಿವರಾಜ್ ಬೈಂದೂರು,ಜಿಲ್ಲಾ ಸಮಿತಿ ಸದಸ್ಯರಾದ ಶ್ರೀನಿವಾಸ ಮಲ್ಯಾಡಿ,ಸುರೇಶ ಬಾರ್ಕೂರು,ಕುಮಾರ್ ಕೋಟ ಹಾಗೂ ಗ್ರಾಮ ಸಮಿತಿ,ಜಿಲ್ಲಾ ಸಮಿತಿ,ತಾಲೂಕು ಸಮಿತಿ ಪದಾಧಿಕಾರಿಗಳು,ಕಾರ್ಯಕಾರಿ ಸಮತಿ ಸದಸ್ಯರು,ಸಂಘಟನಾ ಸಂಚಾಲಕರು,ಸಮಾಜ ಬಾಂಧವರು ಉಪಸ್ಥಿತರಿದ್ದರು.ಶಂಭು ಗುಡ್ಡಮ್ಮಾಡಿ ಮತ್ತು ಚೈತ್ರ ಯಡ್ತಾರೆ ನಿರೂಪಿಸಿದರು.ಜಿಲ್ಲಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ ವಂದಿಸಿದರು.
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ) ಬಡಾಕೆರೆಯಲ್ಲಿ ಡಿಸೆಂಬರ್ 14.ರಂದು ಸ್ನೇಹ ಸಮ್ಮಿಲನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ…
ಕುಂದಾಪುರ:ವರ್ಷಿಣಿ ಯೋಗ ಎಜ್ಯುಕೇಶನ್ ಆಂಡ್ ಕಲ್ಚರಲ್ ಸ್ಪೋಟ್ರ್ಸ್ ಟ್ರಸ್ಟ್ ಶಿವಮೊಗ್ಗ ವತಿಯಿಂದ ಥಾಯ್ಲೆಂಡ್‍ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್…
ಬೆಂಗಳೂರು:ಕೇಂದ್ರ ಮಾಜಿ ವಿದೇಶಾಂಗ ಸಚಿವ,ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಂಗಳವಾರ ನಿಧನರಾಗಿದ್ದಾರೆ.ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ…
ಕುಂದಾಪುರ:ವರ್ಷಂಪ್ರತಿ ಜರುಗುವಹೊಸೂರು ಮಲಗದ್ದೆ ಮನೆಯ ಕಂಬಳ ಮಹೋತ್ಸವವು ಡಿಸೆಂಬರ್ 10 ರಂದು ಮಂಗಳವಾರ ಹೊನಲು ಬೆಳಕಿನ ಕಂಬಳ ಬಹಳ ಅದ್ದೂರಿಯಿಂದ…
ಕುಂದಾಪುರ:ಹೆಮ್ಮಾಡಿ ಯಿಂದ ತಲ್ಲೂರು ಕಡೆಗೆ ಸಾಗುತ್ತಿದ್ದ ಬೈಕ್ ಜಾಲಾಡಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಕೊಲ್ಲೂರು…
ಕುಂದಾಪುರ:ಗೋವಾ ದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಬೈಕ್‍ಗೆ ಕುಂದಾಪುರ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಸಾಗುತ್ತಿದ್ದ ಗ್ಯಾಸ್ ತುಂಬಿದ ಪಿಕಪ್ ಗಾಡಿ…