ಬೈಂದೂರು:ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಮತ್ತು ಮಹಿಳಾ ವೇದಿಕೆ ವತಿಯಿಂದ,ಉಪ್ಪುಂದ ವಲಯದ ಸಹಕಾರದೊಂದಿಗೆ ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-2024 ಸಂತಸ, ಸಡಗರ,ಸನ್ಮಾನ, ಸ್ಪರ್ಧೆಗಳ ಹಬ್ಬ ಕಾರ್ಯಕ್ರಮ, ಆರೋಗ್ಯ ಶಿಬಿರ ಕಾರ್ಯಕ್ರಮ ನಾಗೂರು ಒಡೆಯರಮಠ ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಭಾನುವಾರ ನಡೆಯಿತು.
ದ್ರಾವಿಡ ಬ್ರಾಹ್ಮಣ ಪರಿಷತ್ತು ಮತ್ತು ಮಹಿಳಾಇ ಸಮಾವೇಶದಲ್ಲಿ ಬಾಲ್ಯ ಪೌಂಡೇಶನ್ ಸಹಕಾರದಲ್ಲಿ ದಾಮೋದರ ಶಾಸ್ತ್ರಿ ಅವರು ಫಲಾನುಭವಿಗಳಿಗೆ ಸಹಾಯ ಹಸ್ತ ವಿತರಿಸಿದರು.ಯಾರ್ಂಕ್ ಪಡೆದ ವಿದ್ಯಾರ್ಥಿಗಳಾದ ಶ್ರೀ ಲಕ್ಷ್ಮೀ ಮರವಂತೆ,ಶ್ರೀ ಲಕ್ಷ್ಮೀ ಅಡಿಗ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಉಪನ್ಯಾಸಕಿ ಕು.ಅಕ್ಷಯಾ ಗೋಖಲೆ ಹಾಗೂ ಪಂಚಾಂಗ ಕೃರ್ತರಾದ ಮೊಗೇರಿ ಅನುಪಮಾ ಅಡಿಗ ಮತ್ತು ಭಗವದ್ಗೀತೆ ಕಂಠಪಾಠ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟದಲ್ಲಿ ಸತತವಾಗಿ ನಾಲ್ಕು ಸಲ ಪ್ರಥಮ ಸ್ಥಾನ ಪಡೆದ ಕು.ಯುಕ್ತ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿರಾವ್ ಅವರು ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ಸಮಾಜ ಬಾಂಧವರನ್ನು ಒಗ್ಗೂಡಿಸಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರಯೋಜನಕಾರಿ ಆಗಿದೆ.ಮಹಿಳೆಯರು ಗ್ರಹ ಬಂಧನದಿಂದ ಹೊರಬಂದು ಇಂತಹ ಉಪಯೋಗಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮಾನಸಿಕ ತೋಳಲಾಟದಿಂದ ಹೊರ ಬರಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಸಮಾಜದ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಸಕ್ರೀಯವಾಗಿ ಭಾಗವಹಿಸುವುದು ಮುಖ್ಯವಾಗಿದ್ದು,ಸಂಘಟನೆಗೆ ಸಮುದಾಯದ ಶಕ್ತಿ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕರಾದ ಅಕ್ಷಯಾ ಗೋಖಲೆ ಅವರು ದಿಕ್ಸೂಚಿ ಭಾಷಣವನ್ನು ನೆರವೇರಿಸಿ ಮಾತನಾಡಿ,ಆಚಾರ ವಿಚಾರಗಳು ಒಂದು ಸಮುದಾಯದ ಸಂಸ್ಕøತಿಯನ್ನು ಬಿಂಬಿಸುವಂತಹದ್ದು ಆಗಿದೆ.ಸಮುದಾಯದ ಆಚಾರ ವಿಚಾರಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವ ಕೆಲಸವನ್ನು ಪೆÇೀಷಕರು ಮಾಡಬೇಕು.ಪಾಶ್ಚಾತ್ಯ ಸಂಸ್ಕೃತಿ ಮತ್ತು ಆಧುನಿಕ ಬದುಕಿನ ಶೈಲಿಯಿಂದಾಗಿ ಕುಟುಂಬದಲ್ಲಿ ಕಲಹ,ವಿವಾಹ ವಿಚ್ಛೇದನದಂತಕ ಕೇಸುಗಳು ಕೌಟುಂಬಿಕ ನ್ಯಾಯಾಲಯದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೇಸ್ ಬೀಳುತ್ತಿರುವುದು ಆತಂಕದ ವಿಚಾರ.ಕೌಟುಂಬಿಕವಾಗಿ ನೆಮ್ಮದಿ ಕಾಣದಂತಹ ದಿನಗಳನ್ನು ನಾವು ಎದುರಿಸುತ್ತಿದ್ದು ಇಂತಹ ವಿಲಕ್ಷಣ ಕಾರಣಗಳಿಗೆ ತಿಲಾಂಜಲಿ ನೀಡುವಂತಹ ಕೆಲಸವನ್ನು ಸಂಘಟನಾತ್ಮಕವಾಗಿ ತೋಡಗಿಕೊಳ್ಳುವುದರ ಮೂಲಕ ತೋರೆದು ಹಾಕಲು ಪ್ರಯತ್ನಿಸಬೇಕು ಎಂದು ಹೇಳಿದರು.
ಆಧುನಿಕ ಜೀವನ ಶೈಲಿ ಮತ್ತು ಆಕರ್ಷಣೆಗಳಿಗೆ ಮೋಹಿತರಾಗಿ ನಮ್ಮ ಸಮಾಜದ ಯುವ ಪೀಳಿಗೆ ಹಾದಿ ತಪ್ಪುತ್ತಿದೆ.ಆದರ್ಶ ಜೀವನ ಮತ್ತು ಸಂಸ್ಕಾರಯುತವಾದ ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಹೆಚ್ಚಿನ ತಿಳಿವಳಿಕೆಯನ್ನು ಹೆತ್ತವರು ಮಕ್ಕಳಿಗೆ ತಿಳಿಸಿಕೊಡುವುದು ಅನಿವಾರ್ಯ ವಾಗಿದ್ದು, ಸಮಾಜದಲ್ಲಿ ಮಕ್ಕಳು ಗೌರವಯುತವಾಗಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿ ಆಗುತ್ತದೆ.ಹೆತ್ತವರು ಕೆಟ್ಟ ಮಾರ್ಗದಲ್ಲಿ ನಡೆದರೆ ಮಕ್ಕಳ ಜೀವನವೂ ಕೆಟ್ಟ ದಾರಿಯತ್ತ ಸಾಗುತ್ತದೆ.ಸಮಾಜಕ್ಕೆ ಉತ್ತಮ ಪ್ರಜೆಯನ್ನು ಕೊಡುಗೆಯಾಗಿ ನೀಡುವುದು ಪೆÇೀಷಕರ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.ಕಾಲ ಬದಲಾದಂತೆ ಪರಿಸ್ಥಿತಿ ಕೂಡ ಆತಂಕವನ್ನು ತಂದ್ದೊಡ್ಡುತ್ತಿದೆ ಎಂದು ಹೇಳಿದರು.
ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ಮಾತನಾಡಿ,ಸಮಾಜ ಬಾಂಧವರ ಸಹಕಾರ ಮತ್ತು ಪ್ರೋತ್ಸಾಹ ದಿಂದ ಸಂಘವೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.ಮಹಿಳಾ ಸಂಘವೂ ಸಕ್ರೀಯವಾಗಿ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ,ಬ್ರಾಹ್ಮಣ ಸಮಾಜದ ಮಹಿಳೆಯರು ವೈದಿಕ ಆಚರಣೆ,ಧರ್ಮ ಸಂಸ್ಕಾರದಂತಹ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದರಿಂದ ತಮ್ಮ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು
ದ್ರಾವಿಡ ಬ್ರಾಹ್ಮಣ ಪರಿಷತ್ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಸಂಧ್ಯಾ ಉಡುಪ ಅವರು ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ,ತಾಲೂಕು ಘಟಕದಲ್ಲಿ 17 ವಲಯಗಳಿದ್ದು ಪ್ರತಿಯೊಂದು ವಲಯದಲ್ಲಿಯೂ ಸಕ್ರೀಯವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.ಕುಂದಾಪು ತಾಲೂಕು ಘಟಕ ರಾಜ್ಯದಲ್ಲೆ ಮಾದರಿ ಘಟಕವಾಗಿ ಗುರುತಿಸಿಕೊಂಡಿರುವುದು ನಮಗೆಲ್ಲ ಖುಷಿಯ ಸಂಗತಿ ಆಗಿದೆ ಎಂದು ಹೇಳಿದರು.ಹಿರಿಯರ ಪ್ರೇರಣೆ ಮತ್ತು ಸಮಾಜ ಬಾಂಧವರ ಸಹಕಾರದಿಂದ ಮಹಿಳಾ ಸಮಾವೇಶ ನೂರರಷ್ಟು ಯಶಸ್ವಿಯಾಗಿರುವುದು ಸಂಘಕ್ಕೆ ಸಿಕ್ಕ ಜಯವಾಗಿದೆ ಎಂದರು.ಸಂಘಟನೆಯಿಂದ ಮಾತ್ರ ಸಮಾಜದ ನೆಲೆಯನ್ನು ಗಟ್ಟಿಗೊಳಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್,ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ,ಯುವ ವೇದಿಕೆ ಜಿಲ್ಲಾ ಮಹಾಸಭಾ ಅಧ್ಯಕ್ಷೆ ಪವಿತ್ರಾ ಆರ್ ಅಡಿಗ,ತಾಲೂಕು ಗೌರವಾಧ್ಯಕ್ಷೆ ಭಾವನ ಎಂ ಭಟ್ ಹರೇಗೋಡು,ಮಹಿಳಾ ವೇದಿಕೆ ಉಪ್ಪುಂದ ವಲಯ ಅಧ್ಯಕ್ಷೆ ವೀಣಾ ಹೆಬ್ಬಾರ್,ತಾಲೂಕು ಮಹಿಳಾ ಕಾರ್ಯದರ್ಶಿ ಜ್ಯೋತಿ ಐತಾಳ್,ಅನುಪಮಾ ಅಡಿಗ ಮೊಗೇರಿ,ಯುಕ್ತ ಹೊಳ್ಳ ಕುಂದಾಪುರ ಉಪಸ್ಥಿತರಿದ್ದರು.
ಯುಕ್ತ ಹೊಳ್ಳ ಗಾನ ಮಾಧುರ್ಯ,ಆರೋಗ್ಯಕರ ಚರ್ಚಾಗೋಷ್ಠಿ ಹರಟೆ, ವಿವಿಧ ಸ್ಪರ್ಧೆಗಳು,ನಾನಾ ರೀತಿಯ ಸ್ಟಾಲ್ ನೋಡುಗರ ಮನ ಸೆಳೆಯಿತು.ವೀಣಾಮೂರ್ತಿ ಸ್ವಾಗತಿಸಿದರು.ಸುಪ್ರೀತಾ ನಿರೂಪಿಸಿದರು.ಲಕ್ಷ್ಮೀ ಐತಾಳ್ ವಂದಿಸಿದರು.
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಫೆಸ್ಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ರೋಬೊಸಾಫ್ಟ್…
ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ…
ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ…
ಮುಳ್ಳಿಕಟ್ಟೆ:ಕುಂದಾಪುರ ದಿಂದ ಅರಾಟೆಗೆ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರು…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಮತ್ತು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ…
ಜನತಾ ಆವಿಷ್ಕಾರ ಕಾರ್ಯಕ್ರಮದಲ್ಲಿ ತುಂಬಿದ ವಿದ್ಯಾರ್ಥಿ ಸಮೂಹ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಹೆಮ್ಮಾಡಿ:ಜಗತ್ತು ಇಂದು ವ್ಯಾವಹಾರಿಕವಾಗಿ ಮುನ್ನಡೆಯುತ್ತಿದ್ದು.ವಿದ್ಯಾರ್ಥಿಗಳು…