ಕುಂದಾಪುರ:ಮೀನುಗಾರಿಕಾ ವೃತ್ತಿಯಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿರುವ ಮತ್ಸೋದ್ಯಮಿಗಳಾದ ಉಪ್ಪುಂದ ನಾಗರಾಜ ಖಾರ್ವಿ ಮತ್ತು ಸುಬ್ರಹ್ಮಣ್ಯ ಖಾರ್ವಿ ಮಾಲೀಕತ್ವದ ಬಿ.ಎಚ್.ಪಿ ನೂತನ ಬೋಟ್‍ನ ಶುಭಾರಂಭ ಮತ್ತು ಬಲೆ ಮೂಹುರ್ತ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಂಗೊಳ್ಳಿ ಬಂದರಿನಲ್ಲಿ ಭಾನುವಾರ ನಡೆಯಿತು.
ಬಿ.ಎಚ್.ಪಿ ಬೋಟ್‍ನ ಶುಭಾರಂಭ ಕಾರ್ಯಕ್ರಮದ ಅಂಗವಾಗಿ ಹುಲಿ ವೇಷ ಕುಣಿತ ಸೇವೆಯನ್ನು ಮಾಡಲಾಯಿತು.ಐವತ್ತಕ್ಕೂ ಅಧಿಕ ಹುಲಿವೇಷ ದಾರಿಗಳು ಬೋಟ್‍ನಲ್ಲಿ ನೃತ್ಯ ಮಾಡುವುದರ ಮುಖೇನ ಸೇವೆಯನ್ನು ನೀಡಿದರು.ಗಂಗೊಳ್ಳಿ ಭಾಗದ ಸಮುದದಲ್ಲಿ ನೂತನ ಬೋಟ್‍ನ್ನು ಚಲಾಯಿಸುವುದರ ಮುಖೇನ ಬೋಟ್ ಚಾಲನೆಯನ್ನು ನೀಡಲಾಯಿತು.ಮೀನಿಗಾರಿಕಾ ವಲಯಕ್ಕೆ ನೂತನ ಬೋಟ್ ಸೇರ್ಪಡೆ ಯಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹತ್ತಾರು ಜನರಿಗೆ ಕೆಲಸ ಸಿಗಲಿದೆ.
ಬಿ.ಎಚ್.ಪಿ ಬೋಟ್ ಮಾಲೀಕರಾದ ನಾಗರಾಜ ಖಾರ್ವಿ ಉಪ್ಪುಂದ ಮಾತನಾಡಿ,ನಮ್ಮ ತಂದೆ ಅವರ ಕಾಲದಿಂದಲೂ ಮೀನುಗಾರಿಕಾ ಕ್ಷೇತ್ರದಲ್ಲಿ ಉದ್ಯಮವನ್ನು ಮಾಡಿಕೊಂಡು ಬರಲಾಗುತ್ತಿದ್ದು.ಮೀನುಗಾರಿಕಾ ಕೆಲಸದಿಂದಲೆ ಬದುಕನ್ನು ಕಟ್ಟಿಕೊಂಡಿದ್ದೇವೆ.ಹೊಸ ಕನಸು ಮತ್ತು ಒಂದಿಷ್ಟು ಜನರಿಗೆ ಉದ್ಯೋಗವನ್ನು ದೊರಕಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಬೋಟ್ ಮಾಡಲಾಗಿದೆ.ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಬಿ.ಎಚ್.ಪಿ ಬೋಟ್‍ನ ಮಾಲೀಕರ ಬಂಧುಗಳು,ಹಿತೈಷಿಗಳು,ಸ್ನೇಹಿತರು,ಮೀನುಗಾರರು ಉಪಸ್ಥಿತರಿದ್ದರು.
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…
ಉಡುಪಿ:ಕಾಪು ನಲ್ಲಿ ಗೂಡ್ಸ್ ಟೆಂಪೋ ಪಲ್ಟಿ ಹೊಡೆದ ಪರಿಣಾಮ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.ಅಪಘಾತದ ತೀವ್ರತೆಗೆ ಗೂಡ್ಸ್…
ಕುಂದಾಪುರ:ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕಿನ…
ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ…
ಕುಂದಾಪುರ:ಶಯೋಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಾಹಸ್ ತಂಡ ಮತ್ತು ಕ್ಲೀನ್ ಕಿನಾರ…