ಕಾರ್ಕಳ:ದಸರಾ ಎಕ್ಸೇಂಜ್ ಮತ್ತು ಫೈನಾನ್ಸ್ ಉತ್ಸವದ ಅಂಗವಾಗಿ ಸ್ಪಾಟ್ ಬುಕ್ಕಿಂಗ್ ಆಫರ್,ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಕಾರನ್ನು ಖರೀದಿಸಬಹುದು.ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ಬುಕ್ಕಿಂಗ್ ಸೌಲಭ್ಯ ಇದೆ.
ಹಳೆ ವಾಹನ ಬದಲಾವಣೆಗೆ ಉತ್ತಮ ಬೆಲೆ ನೀಡಲಾಗುತ್ತದೆ.100% ಆನ್ ರೋಡ್ ಫಂಡಿಂಗ್,ಕಡಿಮೆ ನಗದು ಪಾವತಿ ಜೊತೆಗೆ 0 ಡೌನ್ ಪೇಮೆಂಟ್ ನಲ್ಲಿ ತಮ್ಮ ಕನಸಿನ ಕಾರ್ ಖರೀದಿಸಲು ಅವಕಾಶ ಇದೆ.ಹೈರೈಡರ್ ಕಾರ್ ಮತ್ತು ಫಾರ್ಚುನರ್ ಕಾರ್ ಮೇಲೆ ಒಂದು ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಆಫರ್ ಕೂಡ ಇದೆ.
ನವರಾತ್ರಿ ಶುಭ ಸಂದರ್ಭದಲ್ಲಿ ತಮ್ಮ ನೆಚ್ಚಿನ ಕಾರ್ ನ್ನು ಮನೆಗೆ ಕೊಂಡು ಹೋಗಲು ಯುನಿಟೆಡ್ ಟೊಯೊಟಾ ಸುವರ್ಣಾವಕಾಶವನ್ನು ತಮ್ಮ ಗ್ರಾಹಕರಿಗೆ ಒದಗಿಸಿ ಕೊಟ್ಟಿದೆ.
ಯುನಿಟೆಡ್ ಟೋಯೊಟ ಸೇಲ್ಸ್ ಆಫೀಸರ್ ಕಿಶೋರ್ ದೇವಾಡಿಗ ಮಾತನಾಡಿ,ಉಡುಪಿ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಕಾರ್ಕಳದಲ್ಲಿ ದಸರಾ ಎಕ್ಸೇಂಜ್ ಮತ್ತು ಫೈನಾನ್ಸ್ ಉತ್ಸವವನ್ನು ಆರಂಭಿಸಲಾಗಿದ್ದು 0 ಪೇಮೆಂಟ್ ನಲ್ಲಿ ಕಾರ್ ಖರೀದಿಸ ಬಹುದಾಗಿದ್ದು, ಸ್ಥಳದಲ್ಲೇ ಬುಕಿಂಗ್ ಮಾಡುವ ಕಾರ್ ಗೆ ಆಕರ್ಷಕ ಬಡ್ಡಿದರದಲ್ಲಿ ಫೈನಾನ್ಸ್ ಸೌಲಭ್ಯ ಕೂಡ ಇದೆ.ತಮ್ಮ ಹಳೆ ಕಾರನ್ನು ಉತ್ತಮ ಬೆಲೆಗೆ ಮಾರಾಟ ಮಾಡಿ, ತಮ್ಮ ನೆಚ್ಚಿನ ಕಾರನ್ನು ಖರೀದಿಸಲು ಉತ್ತಮ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.
ಮಾರ್ಕೆಟಿಂಗ್ ಆಫೀಸರ್ ಯಜ್ಞೇಶ್ ದೇವಾಡಿಗ ಮಾತನಾಡಿ,ದಸರಾ ಎಕ್ಸೇಂಜ್ ಮತ್ತು ಫೈನಾನ್ಸ್ ಮೇಳ ಒಂದು ವಾರಗಳ ಕಾಲ ಕಾರ್ಕಳದಲ್ಲಿ ನಡೆಯಲಿದೆ.ದಸರಾ ಉತ್ಸವದ ಅಂಗವಾಗಿ ಹೊಸ ಕಾರ್ ಖರೀದಿಸುವವರಿಗೆ ಮತ್ತು ಹಳೆ ಕಾರ್ ಎಕ್ಸೆಂಜ್ ಮಾಡುವವರಿಗೆ ಆಕರ್ಷಕ ಕೊಡುಗೆಯನ್ನು ನೀಡಲಾಗುತ್ತಿದ್ದು.ಗ್ಲಾಂಜಾ ಕಾರ್ ಮೇಲೆ ಮತ್ತು ಪೊರ್ಚುನರ್ ಕಾರ್ ಮೇಲೆ ಒಂದು ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಆಫರ್ ನೀಡಲಾಗುತ್ತಿದೆ.ಸ್ಪಾಟ್ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಹತ್ತು ಸಾವಿರ ರೂಪಾಯಿ ವರೆಗೆ ಸ್ಪೇಷಲ್ ಡಿಸ್ಕೌಂಟ್ ಆಫರ್ ಕೂಡ ಇದೆ.ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ.ಇವೊಂದು ಆಫರ್ ನ ಸೌಲಭ್ಯ ಪಡೆದುಕೊಳ್ಳಬೇಕೆಂದು ಕೇಳಿ ಕೊಂಡರು.
ಎಸ್.ಬಿ.ಐ ಬ್ಯಾಂಕ್ ಮೆನೇಜರ್ ಆನಂದ ಕುಮಾರ್ ಮಾತನಾಡಿ,ಟೊಯೋಟಾ ಕಂಪನಿ ಮತ್ತು ಎಸ್ ಬಿ ಐ ಬ್ಯಾಂಕ್ ವತಿಯಿಂದ ಕಾರ್ ಫೈನಾನ್ಸ್ ಮೇಳವನ್ನು ಆಯೋಜಿಸಲಾಗಿದೆ.ಇವೊಂದು ಕಾರ್ ಎಕ್ಸೆಂಜ್ ಮೇಳದಲ್ಲಿ ತಮ್ಮ ಯಾವುದೇ ಸಂಸ್ಥೆಯ ಕಾರನ್ನು ಉತ್ತಮ ಬೆಲೆಗೆ ಮಾರಾಟ ಮಾಡಿ, ಹೊಸ ಕಾರ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.ಯಾವುದೇ ರೀತಿಯ ಪೇಪರ್ ಚಾರ್ಜ್ ಇಲ್ಲದೆ ತಮ್ಮ ಮನಸಿಗೆ ಇಚ್ಛಿಸಿದ ಕಾರ್ ಕಡಿಮೆ ಬಡ್ಡಿ ದರದಲ್ಲಿ ಖರೀದಿಸಬಹುದಾಗಿದೆ.ಎಲ್ಲರಿಗೂ ಶುಭವಾಗಲಿ ಎಂದು ಶುಭಹಾರೈಸಿದರು.
ಗ್ರಾಹಕರಾದ ಡಿ .ಆರ್ ರಾಜು ಕಾರ್ಕಳ ಅವರು ಮಾತನಾಡಿ, ವಿಶ್ವದಲ್ಲಿ ಮತ್ತು ಭಾರತದಲ್ಲಿ ಸರಳ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಟೊಯೋಟಾ ಕಂಪನಿಯ ಹೊಸ ಮಾದರಿ ಕಾರ ಗಳನ್ನು ಕಾರ್ಕಳ ಜನರಿಗೆ ಪರಿಚಯಿಸುತ್ತಿರುವುದು ಬಹಳ ಸಂತೋಷದ ವಿಚಾರವಾಗಿದೆ.ಅದರ ಜೊತೆಯಲ್ಲಿ ಫೈನಾನ್ಸ್ ಸೌಲಭ್ಯ ಕೂಡ ಮಾಡಿ ಕೊಡುವುದರ ಮುಖೇನ ಇಲ್ಲಿನ ಜನರಿಗೆ ಅನುಕೂಲತೆಗಳನ್ನು ಮಾಡಿ ಕೊಟ್ಟಿರುವುದು ಗ್ರಾಹಕರಿಗೆ ಬಹಳಷ್ಟು ಪ್ರಯೋಜನವಾಗಿದೆ ಎಂದರು.
ವಿಶ್ವದಲ್ಲಿ ಭಾರತದಲ್ಲಿ ಜನರ ಮನ ಗೆದ್ದಿರುವ ಯುನಿಟೆಡ್ ಟೋಯೊಟ ಕಂಪನಿ ,ಕಾರ್ ಉದ್ಯಮದಲ್ಲಿ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದೆ.ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಕಾರ್ ಗಳನ್ನು ಮಾರಾಟ ಮಾಡಿ ಕೊಂಡು ಬಂದಿರುವ ಯುನಿಟೆಡ್ ಟೋಯೊಟ ಕಂಪನಿ ಗ್ರಾಹಕರ ನೆಚ್ಚಿನ ಕಂಪೆನಿ ಕೂಡ ಹೌದು.
ಈ ಸಂದರ್ಭದಲ್ಲಿ
ಪಿಡಬ್ಲ್ಯೂಡಿ ಕನ್ಸ್ಟ್ರಕ್ಷನ್ ಅರುಣ್ ಕುಮಾರ್ ಕಾರ್ಕಳ,ಅವಿನಾಶ್ ಜಿ, ಟೊಯೋಟಾ ಉಡುಪಿ ಸಿಬ್ಬಂದಿಗಳು ಊರಿನ ಗ್ರಾಮಸ್ಥರು ಗ್ರಾಹಕರು ಉಪಸ್ಥಿತರಿದ್ದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…