ಕುಂದಾಪುರ

ದೇವರಿಗೆ ಅರ್ಪಿಸಿದ ಚಿನ್ನ ಕಳವುಗೈದ ಅರ್ಚಕ:ನಕಲಿ ಚಿನ್ನಾಭರಣವನ್ನು ದೇವರ ಮೂರ್ತಿ ಮೇಲೆ ತೋಡಿಸಿ ವಂಚನೆ

Share

ಕುಂದಾಪುರ:ತಾಲೂಕಿನ ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರಿಗೆ ಭಕ್ತರು ಅರ್ಪಿಸಿದ ಸುಮಾರು 264 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಗೈದಿರುವ ದೇವಳದ ಅರ್ಚಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಶಿರಸಿ ತಾಲೂಕಿನ ಮೂರೆಗಾರ ಸಾಲಕಣಿ ಗ್ರಾಮದ ನಿವಾಸಿ ನರಸಿಂಹ ಭಟ್ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಂಗೊಳ್ಳಿ ಶ್ರೀ ಮಾಹಾಂಕಾಳಿ ಅಮ್ಮನವರ ದೇವಳದಲ್ಲಿ ಅರ್ಚಕರಾಗಿ ಕೆಲಸವನ್ನು ನಿರ್ವಹಿಸಲು ಮಾಸಿಕ ಸಂಬಳದ ಆಧಾರದ ಮೇಲೆ ವಾಸಕ್ಕೆ ಬಾಡಿಗೆ ಮನೆಯನ್ನು ನೀಡಿ ಶಿರಸಿ ತಾಲೂಕಿನ ನರಸಿಂಹ ಭಟ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಮೇ.16 ರ 2024 ರಂದು ನೇಮಕ ಮಾಡಿ ಕೊಂಡಿದೆ.
ಆಡಳಿತ ಮಂಡಳಿ ಹಾಗೂ ಭಕ್ತರು ಹರಕೆ ಮತ್ತು ಸೇವೆ ರೂಪದಲ್ಲಿ ನೀಡಿರುವ ನಾನಾ ಬಗೆಯ ಚಿನ್ನಾಭರಣಗಳನ್ನು ದೇವರ ಮೂರ್ತಿಗೆ ಅಲಂಕಾರ ಮಾಡಿದ ರೀತಿಯಲ್ಲಿ ಪ್ರತಿ ದಿನ ಮೈ ಮೇಲೆ ಇದ್ದಿರುತ್ತಿದೆ.
ದೇವಿಯ ಚಿನ್ನಾಭರಣ ಕಳವು ಗೈದ ಅರ್ಚಕ:ವರ್ಷಂಪ್ರತಿ ದೇವಸ್ಥಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಅಂಗವಾಗಿ ಸೆ.21 ರ ಸಂಜೆ 7 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜಾ ಕೈಂಕರ್ಯಗಳನ್ನು ಮಾಡುತ್ತಿರುವ ಆರೋಪಿತ ಅರ್ಚಕರಲ್ಲಿ ಉತ್ಸವದ ಸಲುವಾಗಿ ದೇವರ ಮೈಮೇಲಿದ್ದ ಚಿನ್ನಾಭರಣಗಳನ್ನು ಶುದ್ಧಚಾರ ಮಾಡುವ ಬಗ್ಗೆ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿ ಕೇಳಿಕೊಂಡಿದೆ.
ಅರ್ಚಕರಿಂದ ಚಿನ್ನಾಭರಣವನ್ನು ಪಡೆದುಕೊಂಡಿದ್ದ ದೇವಸ್ಥಾನದ ಆಡಳಿತ ಮಂಡಳಿ ಆಭರಣಗಳನ್ನು ಸೂಕ್ಷ್ಮವಾಗಿ ಪರೀಕ್ಷಿಶಿಸಿದೆ.ದೇವರ ಮೈ ಮೇಲೆ ಇದ್ದ ಆಭರಣಗಳು ಮೂಲ ರೂಪದಲ್ಲಿ ಇರದೆ ಬೇರೆ ರೀತಿಯಲ್ಲಿ ಇದ್ದ ಕಾರಣ ಅರ್ಚಕರನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

264 ಗ್ರಾಂ ತೂಕದ ಅಂದಾಜು 21,12,000 ರೂ ಮೌಲ್ಯದ ಚಿನ್ನಾಭರಣ ಅರ್ಚಕರಿಂದ ವಂಚನೆಗೆ ಒಳಗಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದ್ದು ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಪೆÇಲೀಸ್ ಇಲಾಖೆ ಕೈಗೊಂಡಿದೆ.
ಬೆಚ್ಚಿಬಿದ್ದ ಭಕ್ತ ಸಮೂಹ:ಮೀನುಗಾರರ ಆರಾಧ್ಯ ದೇವತೆ ಹಾಗೂ ಗಂಗೊಳ್ಳಿ ಗ್ರಾಮದ ಗ್ರಾಮ ದೇವತೆಯಾದ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ಮೈ ಮೇಲಿದ್ದ ಚಿನ್ನಾಭರಣಗಳನ್ನು ದೇವಸ್ಥಾನದಲ್ಲಿ ದೇವರ ಪೂಜಾ ಕೈಂಕರ್ಯಗಳನ್ನು ನಡೆಸಿ ಕೊಂಡು ಬರುತ್ತಿದ್ದ ಅರ್ಚಕರೆ ಸ್ವತಃ ದೋಚಿರುವ ಪ್ರಕರಣದ ಬಗ್ಗೆ ಭಕ್ತ ಸಮೂಹ ಬೆಚ್ಚಿ ಬಿದ್ದಿದೆ.ನವರಾತ್ರಿ ಉತ್ಸವದ ಮುನ್ನವೇ ಅರ್ಚಕರ ಶೋಗಲಾಡಿತನ ಬಯಲಾಗಿದೆ.
ಚಿನ್ನಾಭರಣದ ವಿವರದ ನೋಟ
40 ಗ್ರಾಂ ತೂಕದ ಚಿನ್ನದ ಜೋಬಿನ ಸರ-1
73 ಗ್ರಾಂ ತೂಕದ ಚಿನ್ನದ ಕಾಸಿ ತಾಳಿ ಸರ ಹವಳ ಸೇರಿ
73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ
6 ಗ್ರಾಂ ತೂಕದ ಚಿನ್ನದ ತಾಳಿ-3
64 ಗ್ರಾಂ ತೂಕದ ಚಿನ್ನದ ನಕ್ಲೇಸ್ ಸರ 1
8 ಗ್ರಾಂ ತೂಕದ ಚಿನ್ನದ ಚೈನ್ ಸರ 1
ಒಟ್ಟು-264 ಗ್ರಾಂ,ಮೌಲ್ಯ-21.12 ಲಕ್ಷ.ರೂ

Advertisement

Share
Team Kundapur Times

Recent Posts

ಪೌಷ್ಟಿಕ ಆಹಾರ ಪ್ರದರ್ಶನ,ಪೋಷಣ್ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…

3 days ago

ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…

4 days ago

ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…

4 days ago

ಕಿರಿಮಂಜೇಶ್ವರ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…

4 days ago

ಕನ್ನಡ ಉಪನ್ಯಾಸ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…

1 week ago

ಹಿಂದಿ ದಿವಸ್ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…

1 week ago